ಮಲೇರಿಯಾ ಎಫೆಕ್ಟ್! ನಟ ಪುಲ್ಕಿತ್ ಸಾಮ್ರಾಟ್​ಗೆ 2.5 ಕೆ.ಜಿ ಮಸಲ್ ಲಾಸ್​ | Pulkit loses 2.5 kg of muscle

ನಟ ಪುಲ್ಕಿತ್ ಸಾಮ್ರಾಟ್
ನಟ ಪುಲ್ಕಿತ್ ಸಾಮ್ರಾಟ್
Published on

ಪ್ರಮುಖ ಮುಖ್ಯಾಂಶಗಳು

  • ಮಲೇರಿಯಾದಿಂದ 2.5 ಕೆ.ಜಿ ಮಸಲ್ ಕಳೆದುಕೊಂಡ ಪುಲ್ಕಿತ್
  • ಅನಾರೋಗ್ಯದಿಂದ ದೈಹಿಕ ಶಕ್ತಿ ಕುಂದಿದೆ ಎಂದ ಬಾಲಿವುಡ್ ನಟ
  • ವಿಶ್ರಾಂತಿ ಪಡೆಯುತ್ತಿರುವ ಫೋಟೋ ಹಂಚಿಕೊಂಡ ಪುಲ್ಕಿತ್ ಸಾಮ್ರಾಟ್​
Pulkit Samrat Health Update: ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಮಲೇರಿಯಾದಿಂದ ಚೇತರಿಸಿಕೊಳ್ಳುತ್ತಿದ್ದು, ಈ ಅನಾರೋಗ್ಯ ತಮ್ಮ ದೇಹದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಮಲೇರಿಯಾದಿಂದಾಗಿ 2.5 ಕೆ.ಜಿ. ಸ್ನಾಯು ಮತ್ತು ಸಾಕಷ್ಟು ದೈಹಿಕ ಶಕ್ತಿ ಕುಂದಿದೆ ಎಂದು ಎಂದಿದ್ದಾರೆ.
ಪುಲ್ಕಿತ್ ಸಾಮ್ರಾಟ್, ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದು, ಮಲೇರಿಯಾ ನಿರೀಕ್ಷೆಗಿಂತ ಹೆಚ್ಚಾಗಿ ತಮ್ಮನ್ನು ನಿಶಕ್ತಗೊಳಿಸಿದಿದೆ ಎಂದು ಹೇಳಿದ್ದಾರೆ. ಆದರೆ ಮತ್ತೆ ಹಿಂದಿನಂತೆ ಮಸಲ್ಸ್​​ ಬಿಲ್ಡ್​ ಮಾಡುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುವ ಪುಲ್ಕಿತ್, ನಿಯಮಿತ ವರ್ಕೌಟ್‌ಗಳು ಡಯಟ್​ ಮೂಲಕ ತಮ್ಮ ಫಿಟ್‌ನೆಸ್ ಕಾಪಾಡಿಕೊಂಡಿದ್ದರು. ಇದೀಗ ಮಲೇರಿಯಾದಿಂದ ಆ ದಿನಚರಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು?

ಮಲೇರಿಯಾದಿಂದ ಸೋಂಕಿನ ಸಮಯದಲ್ಲಿ ಕಳೆದುಕೊಂಡ ಶಕ್ತಿ, ಸಹಿಷ್ಣುತೆ ಮತ್ತು ಸ್ನಾಯುವನ್ನು ವಾಪಸ್​ ಪಡೆಯಲು ದೇಹಕ್ಕೆ ಸಮಯ ಬೇಕು. ಸಾಕಷ್ಟು ಪೌಷ್ಟಿಕ ಆಹಾರ, ಅಗತ್ಯವಾದಷ್ಟು ಪ್ರೋಟೀನ್ ಮತ್ತು ವಿಶ್ರಾಂತಿ ಸಿಕ್ಕರೆ ಆರು ವಾರಗಳಲ್ಲಿ ಚೇತರಿಕೆ ಕಾಣಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಮಲೇರಿಯಾದ ತೀವ್ರತೆ ಆಧಾರದ ಮೇಲೆ ರಿಕವರಿ ಸಮಯ ಬದಲಾಗಬಹುದು ಎನ್ನುತ್ತಾರೆ.

ಅನಾರೋಗ್ಯದ ನಡುವೆಯೂ ಆತ್ಮವಿಶ್ವಾಸ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮಲೇರಿಯಾ ಎಂದರೆ ಜ್ವರ, ತಲೆನೋವು ಮತ್ತು ಚಳಿ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಕೇಸ್​ಗಳಲ್ಲಿ ಆಯಾಸ, ದೌರ್ಬಲ್ಯದ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಮುಖ್ಯ. ಪುಲ್ಕಿತ್ ಸದ್ಯ ಸಂಪೂರ್ಣ ಚೇತರಿಸಿಕೊಂಡು ಮತ್ತೆ ತಮ್ಮ ಫಿಟ್‌ನೆಸ್ ದಿನಚರಿಗೆ ಮರಳುವತ್ತ ಗಮನ ಹರಿಸಿದ್ದಾರೆ. ಅನಾರೋಗ್ಯದ ನಡುವೆಯೂ ಅವರ ಆತ್ಮವಿಶ್ವಾಸದ ಮಾತುಗಳು ಫ್ಯಾನ್ಸ್​ಗಳ ಗಮನ ಸೆಳೆದಿವೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net