

ಉತ್ತರ ಪ್ರದೇಶ: ಭಾರತೀಯ ಸೇನೆಯ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಹಿನ್ನಲೆ ಉತ್ತರ ಪ್ರದೇಶದ ಮೀರತ್ ನಿವಾಸಿ ಉಜೈದ್ ಎಂಬಾತನನ್ನು ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ.
22 ವರ್ಷದ ಬಂಧಿತ ಆರೋಪಿ ಉಜೈದ್ ಇನ್ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್ ಸೇರಿದಂತೆ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ವಿರೋಧಿ ಸಂಗತಿಗಳನ್ನು ವೀಕ್ಷಿಸಿ ಅದನ್ನು ಹಂಚಿಕೊಳ್ಳುತ್ತಿದ್ದು, ಜೈಶ್-ಎ- ಮೊಹಮ್ಮದ್ ಭಯೋತ್ಪಾದನಾ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನ ಪ್ರಭಾವಕ್ಕೆ ಇವನು ಒಳಗಾಗಿದ್ದನೆಂದು ತಿಳಿದುಬಂದಿದೆ.
ಇನ್ನು ಈ ಬಂಧಿದ ಆರೋಪಿ, ಜಮ್ಮು ಕಾಶ್ಮೀರದ ಮೊಹಮ್ಮದ್ ಸಾಜಿದ್ ಎಂಬಾತನ ಸಂಪರ್ಕದಲ್ಲಿದ್ದು, ಈ ಸಾಜಿದ್ನನ್ನು ಪೊಲೀಸರು ಕಳೆದ ವರ್ಷ ವಶಕ್ಕೆ ಪಡೆದಿದ್ದು, ಇವರಿಬ್ಬರು ಪಾಕಿಸ್ತಾನದ ಗ್ಯಾಂಗ್ಸ್ಟಾರ್ ಶೆಹಜಾದ್ ಭಟ್ಟಿ ಗ್ಯಾಂಗ್ ಜತೆ ಸಂಪರ್ಕ ಹೊಂದಿದ್ದರೆಂದು ಹೇಳಲಾಗುತ್ತಿದೆ.
ಸದ್ಯ ಬಂಧಿತ ಆರೋಪಿ ಉಜೈದ್ನ ಚಾಟ್ನಲ್ಲಿ, ಭಾರತದ ಸೇನಾ ಶಿಭಿರದ ಮೇಲೆ ಆತ್ಮಾಹುತಿ ದಾಳಿ ನಡೆಸಿ, ಶೇ. 100 ರಷ್ಟು ಯಶಸ್ಸನ್ನು ಗಳಿಸುವುದಾಗಿ ಹೇಳಿರುವ ಮೇಸೆಜ್ ಈಗ ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೆಯಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಾಟ್ನಲ್ಲಿ, ಉಜೈದ್, ಪಾಕಿಸ್ತಾನದ ಭಯೋತ್ಪಾದಕನ ಜತೆ ಸಂದೇಶ ರವಾನಿಸಿರುವುದು ರುಜುವಾತಾಗಿದೆ. 'ಡ್ರಗ್ಸ್' ಎಂಬ ಕೋಡ್ ನೇಮ್ ಹೊಂದಿರುವವನ ಜತೆಗೆ ಚಾಟ್ ಮಾಡಿರುವ ಉಜೈದ್, ಫ್ಲಾನ್ ಏನು? ಎಂಬ ಪ್ರಶ್ನೆಗೆ 'ಫ್ಲಾನ್ ಏನು ಎಂದರೆ ಸಾಜಿದ್ಗೆ ಬಾಂಬ್ ಕಟ್ಟಿ, ಮಿಲಿಟರಿ ಬೇಸ್ಗೆ ಬೀಡುವುದು, ಅಲ್ಲಿ ಅವನು ಅದನ್ನು ಸ್ಪೋಟ ಮಾಡುತ್ತಾನೆ. ಓಕೆ ನಾ?' ಎಂದಿದ್ದಾನೆ. ಆಮೇಲೆ, ಜಾಕೆಟ್ ರೆಡಿ ಆಗಿದೆಯಾ? ಎಂಬ ಪ್ರಶ್ನೆಗೆ ಅದನ್ನು ನಾವು ಮನೆಯಲ್ಲೇ ತಯಾರು ಮಾಡಿಕೊಳ್ಳುತ್ತೇವೆ. ಶೇ. 100 ರಷ್ಟು ಈ ಯೋಜನೆ ಸಫಲವಾಗುತ್ತದೆ ಎಂದು ಉತ್ತರಿಸಿದ್ದಾನೆ.
ಕಳೆದ ವರ್ಷ ಇತನ ಸ್ನೇಹಿತ ಸಾಜಿದ್ನನ್ನು ವಶಕ್ಕೆ ಪಡೆದ ದಿನದಿಂದಲೇ ಜಮ್ಮು ಹಾಗೂ ಉತ್ತರ ಪ್ರದೇಶ ಪೊಲೀಸರು ಈ ಉಜೈದ್ನನ್ನು ಹುಡುಕುತ್ತಿದ್ದರು. ಆದರೆ, ಕಳೆದ ಹತ್ತು ತಿಂಗಳಿನಿಂದ ಇತ ಪೊಲೀಸರ ಸಂಪರ್ಕಕ್ಕೆ ಬಂಧಿರಲಿಲ್ಲ. ಈಗ ಕಳೆದ ಒಂದು ವಾರದಿಂದ ಇತನ ಸೋಷಿಯಲ್ ಮೀಡಿಯಾ ಖಾತೆಗಳ ಚಲನ ವಲನಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸರಿಗೆ ಇತನ ಜಾಡು ಪತ್ತೆಯಾಗಿದ್ದು, ಈಗ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ಇಗಷ್ಟೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹೊರಬರಬೇಕಿದೆ, (ಏಜೆನ್ಸೀಸ್).