ಯಾವ ವಾಹನಕ್ಕೆ ಎಷ್ಟು ಪ್ರಮಾಣದ ಎಥನಾಲ್ ಮಿಶ್ರಿತ ಪೆಟ್ರೋಲ್ ಸೂಕ್ತ ಎಂಬ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡಲು ತಯಾರಿಕಾ ಕಂಪನಿಗಳು ಹಾಗೂ ಮಾದರಿ ಆಧಾರಿತ ಡೇಟಾಬೇಸ್ ರೂಪಿಸಬೇಕು. ಇ20 (ಶೇ.20 ಎಥನಾಲ್) ಇಂಧನವು ದೇಶದ ಪ್ರಸ್ತುತ ಚಾಲನೆಯಲ್ಲಿರುವ ವಾಹನಗಳ ಇಂಜಿನ್, ಮೈಲೇಜ್, ನಿರ್ವಹಣಾ ವೆಚ್ಚ ಮತ್ತು ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಅಧ್ಯಯನ ಮಾಡಲು ಪೆಟ್ರೋಲಿಯಂ ಸಚಿವಾಲಯ, ಮೋಟಾರು ವಾಹನ ಸಂಶೋಧನಾ ಸಂಸ್ಥೆಗಳು (ARAI/ICAT) ಮತ್ತು ಪರಿಸರ ತಜ್ಞರನ್ನೊಳಗೊಂಡ ಸಮಿತಿ ರಚಿಸಬೇಕು.