ಹೊರಗಡೆ ಜನ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ ಅದರ ಬಗ್ಗೆ ಕಾಳಜಿಯಿಲ್ಲ: ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಸಿಜೆಐ ಕಿಡಿ | CJI

ಸೇವಾ ಸಂಬಂಧಿತ ಮತ್ತು ನಿವೃತ್ತಿ ನಂತರದ ಸೌಲಭ್ಯಗಳಿಗಾಗಿ ನ್ಯಾಯಾಂಗ ಅಧಿಕಾರಿಗಳು ಪದೇ ಪದೇ ನ್ಯಾಯಾಲಯದ ಮೊರೆ ಹೋಗುತ್ತಿರುವುದರ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ(ನ. 23) ಅಸಮಾಧಾನ ವ್ಯಕ್ತಪಡಿಸಿದೆ. ಮತ್ತು ಅವರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಹೊರಗಡೆ ಜನ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ ಅದರ ಬಗ್ಗೆ ಕಾಳಜಿಯಿಲ್ಲ: ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಸಿಜೆಐ ಕಿಡಿ | CJI
Published on: 

ನವದೆಹಲಿ: ಸೇವಾ ಸಂಬಂಧಿತ ಮತ್ತು ನಿವೃತ್ತಿ ನಂತರದ ಸೌಲಭ್ಯಗಳಿಗಾಗಿ ನ್ಯಾಯಾಂಗ ಅಧಿಕಾರಿಗಳು ಪದೇ ಪದೇ ನ್ಯಾಯಾಲಯದ ಮೊರೆ ಹೋಗುತ್ತಿರುವುದರ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ(ನ. 23) ಅಸಮಾಧಾನ ವ್ಯಕ್ತಪಡಿಸಿದೆ. ಮತ್ತು ಅವರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಕೇರಳದಲ್ಲಿ ಬಾರ್ ಸದಸ್ಯರಿಗೆ ಮೀಸಲಾಗಿರುವ ನೇರ ನೇಮಕಾತಿ ಕೋಟಾದಡಿ ಜಿಲ್ಲಾ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ವೇಳೆ, ಸಿಜೆಐ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರನ್ನೊಳಗೊಂಡ ಪೀಠವು ಟೀಕಿಸಿದೆ.

ವಿಚಾರಣಾ ನ್ಯಾಯಾಲಯಗಳಲ್ಲಿ ಇವರು ಲಭ್ಯವಿರುತ್ತಾರೆಯೇ ಮತ್ತು ಅಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಾರೆಯೇ ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ಪ್ರಶ್ನಿಸಿದ್ದು, ಅವರು ಈಗ ಅತಿಯಾಗಿ ಮಾತನಾಡುತ್ತಿದ್ದಾರೆ. ಪ್ರತಿಯೊಂದು ವಿಷಯದಲ್ಲೂ, ನ್ಯಾಯಾಂಗ ಅಧಿಕಾರಿಗಳು ನಮಗೆ ಇದನ್ನು ಮಂಜೂರು ಮಾಡಿ ಎಂದು ಕೋರಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Also Read
ಲಂಡನ್​ಗೆ ತೆರಳದಂತೆ ವಿಮಾನ ನಿಲ್ದಾಣದಲ್ಲೇ ಸಿಜೆಪಿ ಸಂಚಾಲಕ ಸೌರವ್ ದಾಸ್​ಗೆ ತಡೆ: ಕೇಂದ್ರದ ವಿರುದ್ಧ ಕಿಡಿ | Saurav Das
ಹೊರಗಡೆ ಜನ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ ಅದರ ಬಗ್ಗೆ ಕಾಳಜಿಯಿಲ್ಲ: ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಸಿಜೆಐ ಕಿಡಿ | CJI

ಅವರು ನ್ಯಾಯಾಲಯಗಳಲ್ಲಿ ಕೆಲಸವನ್ನೇಕೆ ಮಾಡಬಾರದು? ಅವರು ಎಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿದ್ದಾರೆ ಮತ್ತು ಇಡೀ ದಿನ ಏನು ಮಾಡುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ನೀವು ಹತ್ತು ಗಂಟೆಗೆ ಹೋದರೆ, ನ್ಯಾಯಾಲಯದಲ್ಲಿ ಯಾರೂ ಇರುವುದಿಲ್ಲ. ಅವರು ತಮ್ಮ ಕೊಠಡಿಗಳಲ್ಲಿ (ಚೇಂಬರ್‌ಗಳಲ್ಲಿ) ಕುಳಿತು ಕಾಫಿ ಕುಡಿಯುತ್ತಿರುತ್ತಾರೆ. ಏನಾಗುತ್ತಿದೆ ಎಂಬುದು ನಮಗೆ ಗೊತ್ತಿಲ್ಲವೇನೋ ಎಂಬಂತೆ ಅವರ ವರ್ತನೆ ಇರುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮಗೆ ಯಾವ ಸವಲತ್ತುಗಳು ಮತ್ತು ಸೇವಾ ಪ್ರಯೋಜನಗಳು ಸಿಗುತ್ತಿವೆ ಎಂಬುದರ ಬಗ್ಗೆಯೇ ಅವರು ದಿನದ 24 ಗಂಟೆಯೂ ಯೋಚಿಸುತ್ತಿರುತ್ತಾರೆ. ತಮ್ಮ ನಿವೃತ್ತಿ ವಯಸ್ಸನ್ನು ಹೆಚ್ಚಿಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬ ಚಿಂತನೆಯಲ್ಲಿರುತ್ತಾರೆ. ಆದರೆ, ಹೊರಗಡೆ ಜನರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ, ಇವರಿಗೆ ಆ ವಿಷಯಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).