ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ದೋವಲ್ ಮೇಲೆ ಆರೋಪ: ಆಂತರಿಕ ಬಿಕ್ಕಟ್ಟಿಗೆ ಭಾರತವೇ ಹೊಣೆಯಂತೆ!...ಪಾಕಿಗಳದ್ದು ಅದೇ ಹಳೇ ರಾಗ, ಆದ್ರೆ ಹೊಸ ನೆಪ! | Ajit Doval

Ajit Doval: ಲಂಡನ್‌ನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ (IISS) ಆಯೋಜಿಸಿದ್ದ ದಕ್ಷಿಣ ಏಷ್ಯಾದಲ್ಲಿ ಪರಮಾಣು ತಡೆ ಮತ್ತು ಕಾರ್ಯತಂತ್ರದ ಸ್ಥಿರತೆ ಕುರಿತ ಟ್ರ್ಯಾಕ್ 1.5 ಕಾರ್ಯಾಗಾರದಲ್ಲಿ ಮಾತನಾಡಿದ ಪಾಕಿಸ್ತಾನದ ರಾಷ್ಟ್ರೀಯ ಕಮಾಂಡ್ ಅಥಾರಿಟಿ (NCA) ಸಲಹೆಗಾರ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಮಝರ್ ಜಮೀಲ್, ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ.
ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ದೋವಲ್ ಮೇಲೆ ಆರೋಪ: ಆಂತರಿಕ ಬಿಕ್ಕಟ್ಟಿಗೆ ಭಾರತವೇ ಹೊಣೆಯಂತೆ!...ಪಾಕಿಗಳದ್ದು ಅದೇ ಹಳೇ ರಾಗ, ಆದ್ರೆ ಹೊಸ ನೆಪ! | Ajit Doval
Published on: 

Ajit Doval: ಲಂಡನ್‌ನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ (IISS) ಆಯೋಜಿಸಿದ್ದ ದಕ್ಷಿಣ ಏಷ್ಯಾದಲ್ಲಿ ಪರಮಾಣು ತಡೆ ಮತ್ತು ಕಾರ್ಯತಂತ್ರದ ಸ್ಥಿರತೆ ಕುರಿತ ಟ್ರ್ಯಾಕ್ 1.5 ಕಾರ್ಯಾಗಾರದಲ್ಲಿ ಮಾತನಾಡಿದ ಪಾಕಿಸ್ತಾನದ ರಾಷ್ಟ್ರೀಯ ಕಮಾಂಡ್ ಅಥಾರಿಟಿ (NCA) ಸಲಹೆಗಾರ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಮಝರ್ ಜಮೀಲ್, ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ.

ಕಾರ್ಯಾಗಾರದಲ್ಲಿ ಮಾತನಾಡಿರುವ ಜಮೀಲ್, ಭಾರತವು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿನಂತಹ ಭಯೋತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುವ ಮೂಲಕ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮುಂದುವರೆದು ಮಾತನಾಡಿರುವ ಜಮೀಲ್, ಪಾಕಿಸ್ತಾನದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಭಾರತವು ದೋವಲ್ ಸಿದ್ಧಾಂತವನ್ನು ಬಳಸಿಕೊಳ್ಳುತ್ತಿದೆ ಮತ್ತು ಭಯೋತ್ಪಾದನೆಯನ್ನು ತನ್ನ ನೀತಿಯ ಅಸ್ತ್ರವಾಗಿ ರಫ್ತು ಮಾಡುತ್ತಿದೆ ಎಂದು ಆರೋಪಿಸಿದ್ದು, ಇದಕ್ಕೆ ಪೂರಕವಾವೆಂಬಂತೆ 1971 ರ ಮುಕ್ತಿವಾಹಿನಿ, 1980 ರ ದಶಕದಲ್ಲಿ ಎಲ್.ಟಿ.ಟಿ.ಇ ಗೆ ನೀಡಿದ ಬೆಂಬಲ ಮತ್ತು 2001-14ರ ಅವಧಿಯಲ್ಲಿ ಅಫ್ಘಾನ್-ಪಾಕ್ ಗಡಿಯಲ್ಲಿ ಭಾರತ ಆರು ರಾಯಭಾರ ಕಚೇರಿಗಳನ್ನು ನಡೆಸಿದ್ದನ್ನು ಉಲ್ಲೇಖಿಸಿದರು.

ಇದನ್ನೂ ಓದಿ:ಭಾರತಾಂಬೆಯ ಶತ್ರುಗಳನ್ನು ಹುಡುಕಿ ಸೋಲಿಸಿ!....ದೆಹಲಿಯ ರಾವಣ ದಹನ ವೇದಿಕೆಯಲ್ಲಿ ಪ್ರಧಾನಿ ಮೋದಿ ಅಬ್ಬರದ ಭಾಷಣ | Narendra Modi

ಆಪರೇಷನ್ ಸಿಂಧೂರ್ ಮತ್ತು ಬ್ರಹ್ಮೋಸ್ ಕ್ಷಿಪಣಿ ಕುರಿತ ಸುಳ್ಳು ಆರೋಪ

ಕಳೆದ ವರ್ಷ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಭಾರತವು ದ್ವಿ-ಸಾಮರ್ಥ್ಯ (ಪರಮಾಣು ಮತ್ತು ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊರಬಲ್ಲ) ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿ ದಕ್ಷಿಣ ಏಷ್ಯಾವನ್ನು ಪರಮಾಣು ದುರಂತದ ಅಂಚಿಗೆ ತಳ್ಳಿತ್ತು ಎಂದು ಜಮೀಲ್ ಆರೋಪಿಸಿದರು. ಪಾಕಿಸ್ತಾನದ ಕಾರ್ಯತಂತ್ರದ ಸಂಯಮದಿಂದಾಗಿ ಪರಿಸ್ಥಿತಿ ತಿಳಿಯಾಯಿತು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು.

ಜಮೀಲ್ ಈ ಆರೋಪ ಸಂಪೂರ್ಣ ಸುಳ್ಳಾಗಿದ್ದು, ಬ್ರಹ್ಮೋಸ್ ಕ್ಷಿಪಣಿಯು ಕೇವಲ ಸಾಂಪ್ರದಾಯಿಕ ಸಿಡಿತಲೆಗಳನ್ನು ಮಾತ್ರ ಒಯ್ಯುತ್ತದೆ ಮತ್ತು ಇದು ಭಾರತದ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಭಾಗವಾಗಿಲ್ಲ. ದಕ್ಷಿಣ ಏಷ್ಯಾವನ್ನು ಜಾಗತಿಕ ಪರಮಾಣು ಸಂಘರ್ಷದ ಕೇಂದ್ರವೆಂದು ಬಿಂಬಿಸಿ ಭಾರತಕ್ಕೆ ಸಿಕ್ಕಿರುವ ಎನ್‌ಪಿಟಿ ವಿನಾಯಿತಿಯನ್ನು ಹಿಂಪಡೆಯುವಂತೆ ಮಾಡುವುದು ಆತನ ಮುಖ್ಯ ಉದ್ದೇಶವಾಗಿತ್ತು ಎನ್ನಲಾಗಿದೆ.

ಸ್ವೀಡನ್‌ನ ಸಿಪ್ರಿ ಚಿಂತಕರ ಚಾವಡಿಯ ವರದಿಯನ್ನು ಉಲ್ಲೇಖಿಸಿದ ಜಮೀಲ್, ಭಾರತವು ಪರಮಾಣು ಜಲಾಂತರ್ಗಾಮಿ ಕ್ಷಿಪಣಿಗಳನ್ನು ನಿಯೋಜಿಸುವ ಮೂಲಕ ಫಸ್ಟ್-ಸ್ಟ್ರೈಕ್ (ಮೊದಲು ದಾಳಿ ಮಾಡುವ) ಸಾಮರ್ಥ್ಯದತ್ತ ಸಾಗುತ್ತಿದೆ ಎಂದು ಆರೋಪಿಸಿದರು. ಆದಾಗ್ಯೂ, 1999 ರಲ್ಲಿ ಬಿಡುಗಡೆಯಾದ ಭಾರತದ ಕರಡು ಪರಮಾಣು ನೀತಿಯು ಮೊದಲು ಪರಮಾಣು ಬಳಕೆಯಿಲ್ಲ (No First Use - NFU) ಮತ್ತು ಕನಿಷ್ಠ ವಿಶ್ವಾಸಾರ್ಹ ತಡೆಗೋಡೆ ನಿಯಮಕ್ಕೆ ಬದ್ಧವಾಗಿದೆ.

ಜಮೀಲ್ ಇದನ್ನು ರಾಜತಾಂತ್ರಿಕ ತಂತ್ರವೆಂದು ಕರೆದರಲ್ಲದೆ, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರ 2017 ರ ಪುಸ್ತಕದ ಉಲ್ಲೇಖವನ್ನು ತಪ್ಪಾಗಿ ಅರ್ಥೈಸಿ ವಿವಾದ ಸೃಷ್ಟಿಸಲು ಯತ್ನಿಸಿದರು. ಮೆನನ್ ಅವರು ಭಾರತದ ನೀತಿಯನ್ನು ರಚಿಸಿರಲಿಲ್ಲ. ಬದಲಿಗೆ, ಪಾಕಿಸ್ತಾನವು ತಾಂತ್ರಿಕ ಪರಮಾಣು ಆಯುಧಗಳನ್ನು ಬಳಸಿದರೆ ಭಾರತವು ನೀಡುವ ತಕ್ಕ ಪ್ರತೀಕಾರದ ಅರ್ಥವನ್ನು ಅವರು ವಿವರಿಸಿದ್ದರು.

ಇದಲ್ಲದೆ, 2022 ರ ಮಾರ್ಚ್‌ನಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಉಡಾವಣೆಯಾಗಿ ಪಾಕಿಸ್ತಾನದ ಖಾನೇವಾಲ್ ಜಿಲ್ಲೆಗೆ ಬಿದ್ದ ಬ್ರಹ್ಮೋಸ್ ಕ್ಷಿಪಣಿಯನ್ನು ಜಮೀಲ್ ಯೋಜಿತ ದಾಳಿ ಎಂದು ಕರೆದಿದ್ದಾರೆ. ಭಾರತದೊಂದಿಗಿನ ಯುದ್ಧದ ಸಮಯದಲ್ಲಿ ಟರ್ಕಿ ಮತ್ತು ಸೌದಿ ಅರೇಬಿಯಾ ಪಾಕಿಸ್ತಾನದ ನೆರವಿಗೆ ಬರಲಿವೆಯೇ ಎಂಬ ಪ್ರಶ್ನೆಗೆ ಜಮೀಲ್ ಸೂಕ್ತ ಉತ್ತರ ನೀಡದೆ ಜಾರಿಕೊಂಡರು.

ಶಹಬಾಜ್ ಶರೀಫ್ ಅಧ್ಯಕ್ಷತೆಯ ಎನ್‌ಸಿಎಯಲ್ಲಿ ಜಮೀಲ್ ಸಲಹೆಗಾರರಾಗಿದ್ದಾರೆ. ಕಳೆದ ನವೆಂಬರ್‌ನಲ್ಲಿ ನ್ಯಾಷನಲ್ ಸ್ಟ್ರಾಟೆಜಿಕ್ ಕಮಾಂಡ್ ರಚನೆಯಾದ ನಂತರ, ಪಾಕಿಸ್ತಾನದ ಎಲ್ಲಾ ಪರಮಾಣು ಆಯುಧಗಳು ಫೀಲ್ಡ್ ಮಾರ್ಷಲ್ ಆಸಿಮ್ ಮುನಿರ್ ಅವರ ಸಂಪೂರ್ಣ ಮಿಲಿಟರಿ ನಿಯಂತ್ರಣಕ್ಕೆ ಬಂದಿವೆ. ಈ ಮೂಲಕ ಮಿಲಿಟರಿ ಕೈಯಲ್ಲಿ ಪರಮಾಣು ಅಸ್ತ್ರಗಳ ಸಂಪೂರ್ಣ ನಿಯಂತ್ರಣವಿರುವ ವಿಶ್ವದ ಏಕೈಕ ದೇಶವಾಗಿ ಪಾಕಿಸ್ತಾನ ಹೊರಹೊಮ್ಮಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net