ಗಣರಾಜ್ಯೋತ್ಸವಕ್ಕೂ ಮುನ್ನ ವಿಧ್ವಂಸಕ ಕೃತ್ಯಕ್ಕೆ ಪಾಕ್ ಸಂಚು: ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಮೂಲಕ ಕಳುಹಿಸಿದ್ದ ಶಸ್ತ್ರಾಸ್ತ್ರ ವಶ!Republic Day

ಗಣರಾಜ್ಯೋತ್ಸವ ಪರೇಡ್​, ಕಾರ್ಯಾಚರಣೆಯಲ್ಲಿ ನಿರತರಾಗಿರುವ ಭಾರತೀಯ ಸೇನೆ
ಗಣರಾಜ್ಯೋತ್ಸವ ಪರೇಡ್​, ಕಾರ್ಯಾಚರಣೆಯಲ್ಲಿ ನಿರತರಾಗಿರುವ ಭಾರತೀಯ ಸೇನೆ
Published on

ಪ್ರಮುಖ ಮುಖ್ಯಾಂಶಗಳು

  • ಜಮ್ಮುವಿನಲ್ಲಿ ಸಂಗ್ರಹಿಸಿಟ್ಟ ಶಸ್ತ್ರಾಸ್ತ್ರಗಳನ್ನು ವಶಪಡಸಿಕೊಂಡ ಭಾರತೀಯ ಸೇನೆ
  • ಗಣರಾಜ್ಯೋತ್ಸವದಂದು ಅಶಾಂತಿ ವಾತಾವರಣ ನಿರ್ಮಿಸುವ ಉದ್ದೇಶ
  • ಡ್ರೋನ್​ ಮೂಲಕ ಗಡಿ ದಾಟಿದ ಶಸ್ತ್ರಾಸ್ತ್ರಗಳು
ಜಮ್ಮು-ಕಾಶ್ಮೀರ: ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ(Republic Day)ಕ್ಕೂ ಮುನ್ನ ಜಮ್ಮುವಿನ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಹತ್ತಿರದಲ್ಲಿ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ಶನಿವಾರ (ಜ.10) ವಶಪಡಿಸಿಕೊಂಡಿದೆ.
ಭಾರತದಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಪಾಕಿಸ್ತಾನವು ಡ್ರೋನ್​ಗಳ ಮೂಲಕ ಈ ಶಸ್ತ್ರಾಸ್ತ್ರಗಳನ್ನು ಬೀಳಿಸಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಎರಡು ಪಿಸ್ತೂಲ್‌,ಮೂರು ಮ್ಯಾಗಜೀನ್‌,16 ಸುತ್ತು ಮದ್ದುಗುಂಡುಗಳು ಮತ್ತು ಒಂದು ಗ್ರೆನೇಡ್ ಸೇರಿವೆ ಎಂದು ಮೂಲಗಳು ತಿಳಿಸಿವೆ.ಗಣರಾಜ್ಯೋತ್ಸವ ಆಚರಣೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಈ ಶಸ್ತ್ರಾಸ್ತ್ರಗಳನ್ನು ಗಡಿ ಪ್ರದೇಶದಲ್ಲಿ ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಡ್ರೋನ್ ಎಚ್ಚರಿಕೆಯ ನಂತರ ಶೋಧ ಕಾರ್ಯಾ ಆರಂಭ

ಅಧಿಕಾರಿಗಳ ಪ್ರಕಾರ, ಗಡಿಯುದ್ದಕ್ಕೂ ಅನುಮಾನಾಸ್ಪದ ಡ್ರೋನ್ ಚಟುವಟಿಕೆಯ ಬಗ್ಗೆ ಮಾಹಿತಿ ಬಂದ ನಂತರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಜಮ್ಮು- ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಕಾರ್ಯಾಚರಣೆಯ ಸಮಯದಲ್ಲಿ, ಶೋಧ ತಂಡವು ಒಂದು ಚರಂಡಿಯ ದಂಡೆಯನ್ನು ತಲುಪಿದಾಗ, ಅಲ್ಲಿ ಹಳದಿ ಟೇಪ್‌ನಲ್ಲಿ ಸುತ್ತುವರಿದ ಪ್ಯಾಕೇಜ್​ನ್ನು ವಶಪಡಿಸಿಕೊಂಡಿತು. ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಪ್ಯಾಕೆಟ್ ಅನ್ನು ತೆರೆಯಲಾಯಿತು, ಆಗ ಈ ಶಸ್ತ್ರಾಸ್ತ್ರಗಳು ಅಲ್ಲಿ ಇದ್ದವು ಎಂದು ಹೇಳಿದ್ದಾರೆ.

ಚಳಿಗಾಲದ ಪರಿಸ್ಥಿತಿಗಳ ನಡುವೆ ಭದ್ರತಾ ಕಾಳಜಿ

ಉತ್ತರ ಭಾರತದ ಹಲವಾರು ಭಾಗಗಳಂತೆ ಜಮ್ಮು ಪ್ರಸ್ತುತ ತೀವ್ರ ಶೀತ ಮತ್ತು ದಟ್ಟವಾದ ಮಂಜನ್ನು ಅನುಭವಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಹವಾಮಾನ ಪರಿಸ್ಥಿತಿಯನ್ನು ಅವಕಾಶವಾಗಿ ಬಳಸಿಕೊಂಡು ಭಯೋತ್ಪಾದಕರು ಒಳನುಸುಳುವ ಸಾಧ್ಯತೆ ಇದ್ದು, ಸ್ಥಳೀಯ ನಾಗರಿಕರ ಸಹಾಯದೊಂದಿಗೆ ಸೇನೆ ಕಟ್ಟೆಚ್ಚರ ವಹಿಸುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಡ್ರೋನ್ ಡ್ರಾಪ್ ಇದೆ ಮೊದಲಲ್ಲ

ಹೊಸ ವರ್ಷದ ಮೊದಲ ದಿನದಂದು ಇದೇ ರೀತಿಯ ಡ್ರೋನ್ ಆಧಾರಿತ ಶಸ್ತ್ರಾಸ್ತ್ರಗಳ ಡ್ರಾಪ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆ ಘಟನೆಯಲ್ಲೂ, ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಜಮ್ಮು ಪ್ರದೇಶಕ್ಕೆ ಡ್ರೋನ್‌ಗಳ ಮೂಲಕ ಕಳುಹಿಸಲಾದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿತ್ತು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net