ನಮ್ಮ ಪಕ್ಷ ಯಾವುದೇ ಪಕ್ಷದೊಂದಿಗೆ ವಿಲೀನವಾಗಲ್ಲ; ಆಸಕ್ತಿಯಿದ್ರೆ ನಮ್ಮ ಜೊತೆ ಸೇರಬಹುದು: ಎನ್​ಸಿಪಿ ಬಣಗಳ ವಿಲೀನ ತಳ್ಳಿ ಹಾಕಿದ ಶರದ್ ಪವಾರ್ | Sharad Pawar

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ಎರಡು ಎನ್‌ಸಿಪಿ ಬಣಗಳು ವಿಲೀನವಾಗಲಿವೆ ಎಂಬ ಊಹಾಪೋಹವನ್ನು ತಳ್ಳಿ ಹಾಕಿರುವ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ನಮ್ಮ ಪಕ್ಷವು ಬೇರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ವಿಲೀನವಾಗುವುದಿಲ್ಲ. ಆದರೆ ಆಸಕ್ತರಿದ್ರೆ ನಮ್ಮ ಪಕ್ಷಕ್ಕೆ ಸೇರಬಹುದು ಎಂದು ಹೇಳಿದ್ದಾರೆ.
Sharad Pawar
ಎನ್​ಸಿಪಿ (ಎಸ್​ಪಿ) ಮುಖ್ಯಸ್ಥ ಶರದ್ ಪವಾರ್
Published on: 

ಮುಂಬೈ: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ಎರಡು ಎನ್‌ಸಿಪಿ ಬಣಗಳು ವಿಲೀನವಾಗಲಿವೆ ಎಂಬ ಊಹಾಪೋಹವನ್ನು ತಳ್ಳಿ ಹಾಕಿರುವ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ನಮ್ಮ ಪಕ್ಷವು ಬೇರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ವಿಲೀನವಾಗುವುದಿಲ್ಲ. ಆದರೆ ಆಸಕ್ತರಿದ್ರೆ ನಮ್ಮ ಪಕ್ಷಕ್ಕೆ ಸೇರಬಹುದು ಎಂದು ಹೇಳಿದ್ದಾರೆ.

ಈ ಕುರಿತು ಸೋಮವಾರ(ಸೆ. 28) ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ನಮ್ಮ ಪಕ್ಷದ ವಿಲೀನ ಮತ್ತು ಅಧಿಕಾರದಲ್ಲಿರುವವರೊಂದಿಗೆ ಸೇರುವ ಬಗ್ಗೆ ವಿಭಿನ್ನ ಊಹಾಪೋಹಗಳು ಮತ್ತು ವರದಿಗಳಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ, ಎನ್‌ಸಿಪಿ (ಎಸ್‌ಪಿ) ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ.

ಎನ್‌ಸಿಪಿ (ಎಸ್‌ಪಿ) ಬಿಜೆಪಿ ಜೊತೆ ಕೈಜೋಡಿಸಿ ಎನ್‌ಡಿಎಯ ಭಾಗವಾಗಲಿದೆ ಎಂಬ ವರದಿಗಳನ್ನು ನಿರಾಕರಿಸಿದ ಅವರು, ಯಾರಾದರೂ ಆಸಕ್ತಿ ಹೊಂದಿದ್ದರೆ ಮತ್ತು ನಮ್ಮ ಪಕ್ಷಕ್ಕೆ ಸೇರಲು ಬಯಸಿದರೆ, ಅವರಿಗೆ ಸ್ವಾಗತ. ಎನ್‌ಸಿಪಿ (ಎಸ್‌ಪಿ) ಪ್ರತ್ಯೇಕ ಮತ್ತು ಸ್ವತಂತ್ರ ರಾಜಕೀಯ ಪಕ್ಷವಾಗಿದ್ದು, ಚುನಾವಣೆಯಲ್ಲಿ ಪ್ರತ್ಯೇಕವಾಗಿ ಹೋರಾಡುತ್ತದೆ ಎಂದು ತಿಳಿಸಿದ್ದಾರೆ.

Also Read
ಸಿಲಿಂಡರ್ ಸ್ಫೋಟ; ಎರಡು ಅಂತಸ್ತಿನ ಮನೆ ಕುಸಿದು ನಾಲ್ವರು ಸಾವು, ಮೂವರಿಗೆ ಗಂಭೀರ ಗಾಯ | Cylinder explosion
Sharad Pawar

ನಾವು ವಿರೋಧ ಪಕ್ಷದ ಸ್ಥಾನವನ್ನು ಬಲಪಡಿಸುತ್ತೇವೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಮತ್ತು ಕೇಂದ್ರದಲ್ಲಿ ಭಾರತ ಮೈತ್ರಿಕೂಟದ ಭಾಗವಾಗಿದ್ದೇವೆ. ನಾವು ಎಲ್ಲಿಗೂ ಹೋಗುತ್ತಿಲ್ಲ. ನಾವು ಯಾರೊಂದಿಗೂ ಹೋಗುವುದಿಲ್ಲ. ನೀವು ಬರಲು ಬಯಸಿದರೆ, ನಮ್ಮೊಂದಿಗೆ ಬನ್ನಿ ಎಂದು ಪರೋಕ್ಷವಾಗಿ ಎನ್​ಸಿಪಿಗೆ ಹೇಳಿದ್ದಾರೆ ಎಂದು ಅರ್ಥೈಸಲಾಗಿದೆ.

ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ಭಾಗವಾಗಿರುವ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ ಮತ್ತು ಎನ್‌ಸಿಪಿ (ಎಸ್‌ಪಿ) ವಿಲೀನದ ಬಗ್ಗೆ ಮಹಾರಾಷ್ಟ್ರದಲ್ಲಿ ಪದೇ ಪದೇ ಊಹಾಪೋಹಗಳು ಕೇಳಿಬರುತ್ತಿರುವ ನಡುವೆಯೇ ಪವಾರ್ ಈ ಸ್ಪಷ್ಟನೆ ನೀಡಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net