ಸಚಿವ ಪನ್ನೀರ್ ಸೆಲ್ವಂರಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಬಿಜೆಪಿ ನಾಯಕರು ಡಿಎಂಕೆ ವಿರುದ್ಧ ಮುಗಿಬಿದ್ದಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಪೊಸ್ಟ್ ಹಂಚಿಕೊಂಡಿರುವ ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ ನೈನಾರ್ ನಾಗೇಂದ್ರನ್, ಎಲ್ಲಾ ಜನರು ನಮ್ಮವರೇ ಎಂಬ 'ಯಾದುಮ್ ಊರೇ ಯಾವರುಮ್ ಕೇಳಿರ್' ಎಂಬ ತತ್ವವನ್ನು ಪಾಲಿಸುವ ತಮಿಳು ಮಣ್ಣಿನಲ್ಲಿ, ಡಿಎಂಕೆ ನಾಯಕರು ಇಂತಹ ದ್ವೇಷದ ಬೀಜ ಬಿತ್ತುತ್ತಿರುವುದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.