_1786416674413.webp?w=480&auto=format%2Ccompress&fit=max)
_1786416674413.webp?w=480&auto=format%2Ccompress&fit=max)
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಲು ಯಾರು ಅನುಮತಿ ನೀಡಿದ್ದರು ಎಂದು ಪ್ರಶ್ನಿಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಜೆ ಪಿ ನಡ್ಡಾ (JP Nadda) ತಿರುಗೇಟು ನೀಡಿದ್ದಾರೆ.
ಚರ್ಚಿಸಲು ಸಿದ್ಧ, ಮೊದಲು ಸದನಕ್ಕೆ ಬನ್ನಿ ಎಂದ ನಡ್ಡಾ
ಇದೇ ವೇಳೆ ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ವಿಷಯದಲ್ಲೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ದ್ವಿಮುಖ ನೀತಿ (ಡಬಲ್ ಸ್ಟ್ಯಾಂಡರ್ಡ್) ಮತ್ತು ನಕಾರಾತ್ಮಕ ರಾಜಕೀಯ (ನೆಗೆಟಿವ್ ಪಾಲಿಟಿಕ್ಸ್) ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ರಾಹುಲ್ ಗಾಂಧಿಯವರಿಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದ ನಡ್ಡಾ, ಕಾಂಗ್ರೆಸ್ ನಿರ್ದೇಶನದ ಮೇಲೆಯೇ ಅಲ್ಲಿ ಮುಳ್ಳುತಂತಿಯ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಎಂದು ದೂರಿದರು