ಬಾತ್​ರೂಮ್​ನಲ್ಲೇ ಕುಳಿತು...​ ಈ ವೈರಲ್​ ವಿಡಿಯೋ ನೋಡಿದ್ರೆ ಸ್ವೀಟ್ ತಿನ್ನೋದೇ ಬೇಡ ಅಂತೀರಾ | Video

ಅಂಗಡಿಯ ಸಿಬ್ಬಂದಿಯೊಬ್ಬರು ಬಾತ್‌ರೂಮ್‌ನ ನೆಲದ ಮೇಲೆ ಕುಳಿತು ಕುಕ್ಕರ್ ಸೇರಿದಂತೆ ದೊಡ್ಡ ಗಾತ್ರದ ಪಾತ್ರೆಗಳನ್ನು ತೊಳೆಯುತ್ತಿರುವ ದೃಶ್ಯವನ್ನು ಗ್ರಾಹಕರೊಬ್ಬರು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
Video
ಬಾತ್​ರೂಮ್​ನಲ್ಲೇ ಪಾತ್ರೆಗಳು...​ ವೈರಲ್​ ವಿಡಿಯೋ ನೋಡಿ ದಂಗಾದ ಸ್ವೀಟ್​ ಪ್ರಿಯರು | Video
Published on: 

ಛತ್ತೀಸ್‌ಗಢ: ಇಲ್ಲಿನ ನ್ಯೂ ಡೆಲ್ಲಿ ಸ್ವೀಟ್​ ಅಂಗಡಿಯೊಂದರಲ್ಲಿ ಪಾತ್ರೆಗಳನ್ನು ಬಾತ್‌ರೂಮ್‌ನ ನೆಲದಲ್ಲೇ ತೊಳೆಯುತ್ತಿರುವ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಅಕ್ಷರಶಃ ದಂಗಾಗಿದ್ದಾರೆ.

ಅಂಗಡಿಯ ಸಿಬ್ಬಂದಿಯೊಬ್ಬರು ಬಾತ್‌ರೂಮ್‌ನ ನೆಲದ ಮೇಲೆ ಕುಳಿತು ಕುಕ್ಕರ್ ಸೇರಿದಂತೆ ದೊಡ್ಡ ಗಾತ್ರದ ಪಾತ್ರೆಗಳನ್ನು ತೊಳೆಯುತ್ತಿರುವ ದೃಶ್ಯವನ್ನು ಗ್ರಾಹಕರೊಬ್ಬರು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಅಂಗಡಿಯ ಸ್ವಚ್ಛತಾ ವ್ಯವಸ್ಥೆಯ ಬಗ್ಗೆ ಗ್ರಾಹಕರು ಸೇರಿದಂತೆ ಹಲವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನೀರಿನ ಸಮಸ್ಯೆಯಿಂದ ಹೀಗಾಯಿತು...

ಈ ಬಗ್ಗೆ ಕೆಲವರು ನೇರವಾಗಿ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆ ಬಾತ್‌ರೂಮ್‌ನಲ್ಲೇ ಪಾತ್ರೆಗಳನ್ನು ತೊಳೆಯುವ ಪರಿಸ್ಥಿತಿ ಎದುರಾಯಿತು. ಎರಡ್ಮೂರು ದಿನಗಳಿಂದ ಇದೇ ಸಮಸ್ಯೆ ಮುಂದುವರಿದಿತ್ತು ಎಂದಿದ್ದಾರೆ. ಸಿಬ್ಬಂದಿ ಕೊಟ್ಟ ಈ ಉತ್ತರಕ್ಕೆ ಸುಮ್ಮನಾಗದ ಗ್ರಾಹಕರು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಆಹಾರ ಇಲಾಖೆಗೆ ತಾಕೀತು ಮಾಡಿದ್ದಾರೆ.

ಆಹಾರ ಇಲಾಖೆ ಅಲರ್ಟ್​

ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಹಾರ ಇಲಾಖೆ ಅಲರ್ಟ್​ ಆಗಿದ್ದು, ಅಧಿಕಾರಿಗಳು ಅಂಗಡಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ನೋಟಿಸ್ ಕೊಟ್ಟಿರುವ ಅಧಿಕಾರಿಗಳು, ಪಾತ್ರೆ ತೊಳೆಯುವ ಸ್ಥಳವನ್ನು ಸರಿಪಡಿಸುವುದು ಸೇರಿದಂತೆ ಅಗತ್ಯ ಸುಧಾರಣೆಗಳನ್ನು ಮೂರೇ ದಿನಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಅಕಸ್ಮಾತ್​ ಸೂಚನೆಗಳನ್ನು ಪಾಲಿಸದಿದ್ದರೆ, ಅಂಗಡಿಯ ಲೈಸನ್ಸ್​ ರದ್ದು ಮಾಡುವುದಾಗಿ ಎಚ್ಚರಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net