ಭಾರತಕ್ಕೆ ಆಗಮಿಸಿರುವ ನೇಪಾಳ ಪ್ರಧಾನಿ ಬಾಲೇಂದ್ರ ಶಾ; ಇಂದು ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ | PM Balendra Shah

ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಎರಡು ದಿನಗಳ ಭಾರತ ಭೇಟಿಯಲ್ಲಿರುವ ನೇಪಾಳ ಪ್ರಧಾನಿ ಬಾಲೇಂದ್ರ 'ಬಾಲೆನ್' ಶಾ ಅವರು ಇಂದು ನಿಯೋಗ ಮಟ್ಟದ ಮಾತುಕತೆಯ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಭಾರತಕ್ಕೆ ಆಗಮಿಸಿರುವ ನೇಪಾಳ ಪ್ರಧಾನಿ ಬಾಲೇಂದ್ರ ಶಾ; ಇಂದು ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ | PM Balendra Shah
Published on: 

ನವದೆಹಲಿ: ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಎರಡು ದಿನಗಳ ಭಾರತ ಭೇಟಿಯಲ್ಲಿರುವ ನೇಪಾಳ ಪ್ರಧಾನಿ ಬಾಲೇಂದ್ರ 'ಬಾಲೆನ್' ಶಾ ಅವರು ಇಂದು ನಿಯೋಗ ಮಟ್ಟದ ಮಾತುಕತೆಯ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯನ್ನು ನೇಪಾಳದ ಜನಕಪುರ ಧಾಮ್‌ನೊಂದಿಗೆ ಸಂಪರ್ಕಿಸುವ ನವದೆಹಲಿಯಿಂದ ಹೊಸ ಸಾಪ್ತಾಹಿಕ ರೈಲು ಸೇವೆಯಾದ ಸರಯು-ಕಮಲ ಎಕ್ಸ್‌ಪ್ರೆಸ್‌ಗೆ ಇಬ್ಬರೂ ಪ್ರಧಾನಿಗಳು ವರ್ಚುವಲ್ ಆಗಿ ಹಸಿರು ನಿಶಾನೆ ತೋರಲಿದ್ದಾರೆ ಎನ್ನಲಾಗಿದೆ.

ಮಾರ್ಚ್ 27ರಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ನೇಪಾಳಿ ಪ್ರಧಾನಿ ಯಾವುದೇ ದ್ವಿಪಕ್ಷೀಯ ವಿದೇಶ ಭೇಟಿಗಳನ್ನು ಮಾಡಿಲ್ಲ. ಆದಾಗ್ಯೂ, ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್​ಗೆ ಭೇಟಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಭಾಗವಹಿಸಿದ್ದರು.

Also Read
ಶಬರಿಮಲೆ ಯಾತ್ರೆ; ಜಿಲ್ಲಾಡಳಿತದಿಂದ ಭಕ್ತರಿಗೆ ಕಟ್ಟುನಿಟ್ಟಿನ ಎಚ್ಚರಿಕೆ: ಪಂಪಾ ನದಿಯಲ್ಲಿ ಬಟ್ಟೆ ಎಸೆದರೆ 5 ಸಾವಿರ ರೂ. ದಂಡ | Sabarimala
ಭಾರತಕ್ಕೆ ಆಗಮಿಸಿರುವ ನೇಪಾಳ ಪ್ರಧಾನಿ ಬಾಲೇಂದ್ರ ಶಾ; ಇಂದು ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ | PM Balendra Shah

ಇಂದು ಬಾಲೇಂದ್ರ ಶಾ ಅವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲಿದ್ದಾರೆ. ಬಳಿಕ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ 30 ನಿಮಿಷಗಳ ಮುಖಾಮುಖಿ ದ್ವಿಪಕ್ಷೀಯ ಸಭೆ ನಡೆಸುವ ಮೊದಲು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ನಂತರ ಎರಡೂ ಕಡೆಯವರು ತಿಳುವಳಿಕೆ ಪತ್ರಗಳು ಮತ್ತು ಜಂಟಿ ಹೇಳಿಕೆಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ, ಭಾರತೀಯ ವಾಯುಪ್ರದೇಶದ ಮೂಲಕ ಹೆಚ್ಚುವರಿ ವಾಯು ಪ್ರವೇಶ ಮಾರ್ಗಗಳಿಗಾಗಿ ನೇಪಾಳದ ದೀರ್ಘಕಾಲದ ಬೇಡಿಕೆ, ವಿಪತ್ತು ನಂತರದ ಪುನರ್ನಿರ್ಮಾಣ ನೆರವು ಮತ್ತು ದ್ವಿಪಕ್ಷೀಯ ಸಹಕಾರದ ಇತರ ಕ್ಷೇತ್ರಗಳು ಸೇರಿದಂತೆ ಹಲವಾರು ಪ್ರಮುಖ ದ್ವಿಪಕ್ಷೀಯ ವಿಷಯಗಳ ಕುರಿತು ಎರಡೂ ಕಡೆಯವರು ಚರ್ಚಿಸುವ ನಿರೀಕ್ಷೆಯಿದೆ (ಏಜೆನ್ಸೀಸ್).