ನೀಟ್ ಪರೀಕ್ಷೆಯನ್ನು ಎನ್ಟಿಎಯಿಂದ ಬಿಟ್ಟು ಬೇರೊಂದು ಸಂಸ್ಥೆಯಿಂದ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ದ್ವಿಸದಸ್ಯ ಪೀಠವು, ಸೋರಿಕೆಗೆ ಕಾರಣವಾದ ಲೋಪಗಳಿಗೆ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದು, ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅವರ ಕುಟುಂಬಗಳಿಗೂ ಆಘಾತ ನೀಡುವಂತಹದ್ದು. ನಾವು ನಮ್ಮ ಯುವಕರನ್ನು ನಿರಾಶೆಗೊಳಿಸಬಾರದು ಎಂದು ಹೇಳಿದೆ.