SIRನಲ್ಲಿ 60 ಲಕ್ಷ ಮತದಾರರ ಹೆಸರು ಡಿಲಿಟ್; ಪಶ್ಚಿಮ ಬಂಗಾಳದಲ್ಲಿ ಚು. ಆಯೋಗದ ವಿರುದ್ಧ ಧರಣಿ ಆರಂಭಿಸಿದ ಸಿಎಂ ಬ್ಯಾನರ್ಜಿ

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ಸುಮಾರು 60 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಪಟ್ಟಿಯಿಂದ ಡಿಲಿಟ್ ಮಾಡಿರುವುದರ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಶುಕ್ರವಾರ(ಮಾ. 06) ಭಾರತೀಯ ಚುನಾವಣೆ ಆಯೋಗದ ವಿರುದ್ಧ ಧರಣಿ ಆರಂಭಿಸಿದ್ದಾರೆ.
ಕೋಲ್ಕತ್ತಾದ ಎಸ್ಪ್ಲನೇಡ್ ಮೆಟ್ರೋ ಚಾನೆಲ್‌ನಲ್ಲಿ ಧರಣಿ ಆರಂಭಿಸಿರುವ ಮಮತಾ ಬ್ಯಾನರ್ಜಿ, ಬಿಜೆಪಿ ಮತ್ತು ಚುನಾವನೆ ಆಯೋಗ ಬಂಗಾಳಿ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಪಿತೂರಿ ನಡೆಸುತ್ತಿವೆ ಎಂದು ಆರೋಪಿಸಿದ್ದು, ಆಯೋಗದಿಂದ ಸತ್ತವರೆಂದು ಘೋಷಿಸಲ್ಪಟ್ಟ ಎಲ್ಲಾ ಮತದಾರರನ್ನು ಈ ಸ್ಥಳದಲ್ಲಿ ಹಾಜರುಪಡಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.
ಮಧ್ಯ ಕೋಲ್ಕತ್ತಾದಲ್ಲಿ ಮಧ್ಯಾಹ್ನ 2.15ಕ್ಕೆ ಆರಂಭವಾದ ಧರಣಿ ಸತ್ಯಾಗ್ರಹವನ್ನು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮೊದಲೇ ಘೋಷಣೆ ಮಾಡಿದ್ದರು. ಚುನಾವಣೆ ಆಯೋಗವು ಲಕ್ಷಾಂತರ ಕಾನೂನು ಬದ್ದ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ರಾಜಕೀಯ ಪ್ರೇರಿತ ಕಸರತ್ತು ನಡೆಸಿದೆ ಎಂದು ಆರೋಪಿಸಿದ್ದರು.
ಫೆ. 28ರಂದು ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ, ಕಳೆದ ವರ್ಷ ನವೆಂಬರ್‌ನಲ್ಲಿ SIR ಪ್ರಕ್ರಿಯೆಯು ಪ್ರಾರಂಭವಾದಾಗಿನಿಂದ ಒಟ್ಟು 63.66 ಲಕ್ಷ ಹೆಸರುಗಳು ಅಂದರೆ ಮತದಾರ ಪಟ್ಟಿಯ ಸುಮಾರು 8.3% ಮತದಾರರ ಹೆಸರನ್ನು ಅಳಿಸಲಾಗಿದೆ ಎನ್ನಲಾಗಿದೆ. ಈ 60.06 ಲಕ್ಷಕ್ಕೂ ಹೆಚ್ಚು ಮತದಾರರನ್ನು "ಅಂಡರ್ ಜಡ್ಜ್ಯೂಡೇಶನ್" ವರ್ಗದ ಅಡಿಯಲ್ಲಿ ಇರಿಸಲಾಗಿದೆ, ಅಂದರೆ ಮುಂಬರುವ ವಾರಗಳಲ್ಲಿ ಕಾನೂನು ಪರಿಶೀಲನೆಯ ಮೂಲಕ ಅವರ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ ಎಂದು ಆಯೋಗ ಹೇಳಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net