ಅಕ್ರಮ ಹಣ ವರ್ಗಾವಣೆ ಪ್ರಕರಣ; ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಿಎಂ ಪಿಣರಾಯಿ ವಿಜಯನ್​ಗೆ ಇಡಿ ಸಮನ್ಸ್ | Ex CM Pinarayi Vijayan

ಸಿಎಂಆರ್‌ಎಲ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಅಕ್ಟೋಬರ್ 23ರಂದು ವಿಚಾರಣೆಗೆ ಹಾಜರಾಗುವಂತೆ ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಶುಕ್ರವಾರ(ಅ. 16) ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
Pinarayi Vijayan | ಪಿಣರಾಯಿ ವಿಜಯನ್
Pinarayi Vijayan | ಪಿಣರಾಯಿ ವಿಜಯನ್
Published on: 

ತಿರುವನಂತಪುರಂ: ಸಿಎಂಆರ್‌ಎಲ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಅಕ್ಟೋಬರ್ 23ರಂದು ವಿಚಾರಣೆಗೆ ಹಾಜರಾಗುವಂತೆ ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಶುಕ್ರವಾರ(ಅ. 16) ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.

ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ವಿಎಸಿಬಿ) ಇತ್ತೀಚೆಗೆ ವಿಜಯನ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಇದರ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡು ಪಿಎಂಎಲ್‌ಎ ಅಡಿಯಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ.

Also Read
ಜಿರಳೆಗಳ ಕಾಟಕ್ಕೆ ನಲುಗಿದ ದೆಹಲಿ ವ್ಯಾಪಾರಸ್ಥರು: ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮಧ್ಯಸ್ಥಿಕೆಗೆ ಮನವಿ! | PM Modi Intervention
Pinarayi Vijayan | ಪಿಣರಾಯಿ ವಿಜಯನ್

81 ವರ್ಷದ ವಿಜಯನ್ ಅವರನ್ನು ಅಕ್ಟೋಬರ್ 23ರಂದು ಕೊಚ್ಚಿಯಲ್ಲಿರುವ ಇಡಿ ಕಚೇರಿಯ ಮುಂದೆ ಹಾಜರಾಗಲು ಕೇಳಿಕೊಳ್ಳಲಾಗಿದೆ. ಇತ್ತೀಚೆಗೆ ಇಡಿ ರಾಜ್ಯ ಪೊಲೀಸರಿಗೆ ಸಲ್ಲಿಸಿದ ವರದಿಯ ಆಧಾರದ ಮೇಲೆ ಪ್ರಕರಣ ದಾಖಲಿಸುವಂತೆ ಕೇರಳ ಹೈಕೋರ್ಟ್ ಅ. 9ರಂದು ವಿಎಸಿಬಿಗೆ ನಿರ್ದೇಶನ ನೀಡಿತ್ತು.

ವಿಜಯನ್ ಅವರ ಪುತ್ರಿ ವೀಣಾ ಅವರ ಈಗ ಕಾರ್ಯನಿರ್ವಹಿಸದ ಕಂಪನಿಯಾದ ಎಕ್ಸಲಾಜಿಕ್ ಸೊಲ್ಯೂಷನ್ಸ್‌ಗೆ ಐಟಿ ಸಲಹಾ ಸೇವೆಗಳ ಸೋಗಿನಲ್ಲಿ ಸಿಎಂಆರ್‌ಎಲ್ 2.78 ಕೋಟಿ ರೂ.ಗಳ ವಂಚನೆಯ ಪಾವತಿಗಳನ್ನು ಮಾಡಿದೆ ಎಂದು ಇಡಿ ಆರೋಪಿಸಿದೆ. ಇನ್ನೂ ಕೇರಳ ಹೈಕೋರ್ಟ್ ಎಫ್‌ಐಆರ್ ದಾಖಲಿಸುವ ಆದೇಶವನ್ನು ಪ್ರಶ್ನಿಸಿ ವಿಜಯನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net