ಮೊಬೈಲ್ ಕಳ್ಳತನದ ಶಂಕೆ; ಯುವಕನ ತಲೆ ಬೋಳಿಸಿ ಊರಲ್ಲಿ ಮೆರವಣಿಗೆ | Mobile theft suspicion

ಉತ್ತರ ಪ್ರದೇಶದಲ್ಲಿ ನಡೆದ ಘಟನೆ
ಉತ್ತರ ಪ್ರದೇಶದಲ್ಲಿ ನಡೆದ ಘಟನೆ
Published on

ವಿಡಿಯೋ ಸೋಷಿಯಲ್​ ಮಿಡಿಯಾದಲ್ಲಿ ವೈರಲ್ ಆಗಿದೆ.

ಅಸಿವಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಪಾಠಕ್‌ಪುರ ಗ್ರಾಮದಲ್ಲಿ ಜುಲೈ 30ರಂದು ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜು ಮತ್ತು ಅವರ ಮಗನ ಎರಡು ಮೊಬೈಲ್‌ಗಳು ಕಳವಾಗಿದ್ದವು. ಹೀಗಾಗಿ ಅದೇ ಗ್ರಾಮದ ಸೋನು ಎಂಬ ಯುವಕನನ್ನು ಹಿಡಿದು ವಿಚಾರಣೆ ನಡೆಸಲಾಗಿತ್ತು. ಸೋನು ಬಳಿ ಪರಿಶೀಲಿಸಿದಾಗ ಒಂದು ಮೊಬೈಲ್ ಪತ್ತೆಯಾಗಿತ್ತು. ಆದರೆ ಮತ್ತೊಂದು ಮೊಬೈಲ್ ಸಿಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಲೆ ಬೋಳಿಸಿ ಊರಲ್ಲಿ ಮೆರವಣಿಗೆ

ಇನ್ನೊಂದೆಡೆ, ಮೊಬೈಲ್ ಕಳ್ಳತನದ ಆರೋಪದ ಮೇಲೆ ರಾಜು ಮತ್ತು ಆತನ ಮಗ ಸೇರಿಕೊಂಡು ಸೋನು ಎಂಬುವವನ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಊರಲ್ಲಿ ಮೆರವಣಿಗೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವಿಡಿಯೋ ಆಗಸ್ಟ್ 9ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಿಕ ಪೊಲೀಸರ ಗಮನಕ್ಕೆ ಬಂದಿದೆ. ಪ್ರಕರಣದ ಬಗ್ಗೆ ಖಾಕಿ ಪಡೆ ತನಿಖೆ ಆರಂಭಿಸಿದೆ.

ತಂದೆಯಿಂದ ದೂರು, ಇಬ್ಬರು ವಶಕ್ಕೆ

ವಿಡಿಯೋ ವೈರಲ್ ಆದ ಬಳಿಕ ಸೋನು ತಂದೆ ಗೋಕುಲ್ ಅಸಿವಾನ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ರಾಜು ಮತ್ತು ಆತನ ಮಗನನ್ನು ವಶಕ್ಕೆ ಪಡೆದಿದ್ದಾರೆ. ಯುವಕನನ್ನು ತಲೆ ಬೋಳಿಸಿ ಮೆರವಣಿಗೆ ಮಾಡಿಸಿದ ಘಟನೆ ಹಾಗೂ ಮೊಬೈಲ್ ಕಳ್ಳತನದ ಆರೋಪದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net