ಯೂಟ್ಯೂಬ್​ ವಿಡಿಯೋ, ಆತ್ಮ ಕರೆಸಲು ಯತ್ನ! MBA ವಿದ್ಯಾರ್ಥಿನಿ ಹತ್ಯೆ ಕೇಸ್​ ತನಿಖೆಯಲ್ಲಿ ಬೆಚ್ಚಿಬೀಳೋ ಸಂಗತಿ ಬಯಲು

ಎಂಬಿಎ ವಿದ್ಯಾರ್ಥಿನಿ ಕೊಲೆ ಪ್ರಕರಣ
ಎಂಬಿಎ ವಿದ್ಯಾರ್ಥಿನಿ ಕೊಲೆ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ಇಂದೋರ್​ನಲ್ಲಿ ಎಂಬಿಎ ವಿದ್ಯಾರ್ಥಿನಿ ಭೀಕರ ಹತ್ಯೆ
  • ಪ್ರಿಯಕರನಿಂದಲೇ ಕೊಲೆಯಾದ ಯುವತಿಯ ಪೋಷಕರು ಕಣ್ಣೀರು
  • ತನ್ನ ರೂಮಿನಲ್ಲೇ ಕೊಲೆ, ಸಿಸಿಟಿವಿಯಲ್ಲಿ ಆರೋಪಿಯ ಕರಾಳ ಮುಖ ಬಯಲು
ಮಧ್ಯಪ್ರದೇಶ: ಇಂದೋರ್​ನಲ್ಲಿ ಎಂಬಿಎ ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಲೆಗೈದ ಪಾಗಲ್​ ಪ್ರೇಮಿ, ಕೊಂದ ನಂತರವೂ ಆಕೆಯ ದೇಹವನ್ನು ಹಿಂಸಿಸಿರುವುದು ಇದೀಗ ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ. ಈ ಪ್ರಕರಣಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಎದುರಾಗಿದ್ದು, ಆರೋಪಿಯ ವಿಕೃತ ಮನಸ್ಥಿತಿ ನಿಜಕ್ಕೂ ಎಂಥವರನ್ನು ಕೆರಳಿಸುವಂತಿದೆ.
ಫೆ.13ರಂದು ಮನೆಯಲ್ಲಿ ಮೈಮೇಲೆ ಉಡುಪುಗಳಿಲ್ಲದೆ ಯುವತಿಯ ಶವ ಪತ್ತೆಯಾಯಿತು. ಈ ಪ್ರಕರಣವನ್ನು ಸ್ಥಳೀಯರು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಖಾಕಿಗೆ, ಆರೋಪಿ ಆಕೆಯ ಪ್ರಿಯಕರನೇ ಎಂಬುದು ಇದೀಗ ಸ್ಥಳೀಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ ಬಳಿಕ ಸ್ಪಷ್ಟವಾಗಿದೆ. ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಕಡೆಗೂ ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ನಿರಂತರ ವಿಚಾರಣೆಯಲ್ಲಿ ಹಲವು ಬೆಚ್ಚಿಬೀಳೋ ಸಂಗತಿಗಳನ್ನು ಆತ ಬಾಯ್ಬಿಟ್ಟಿದ್ದಾನೆ. ಇದು ಸ್ವತಃ ಖಾಕಿ ಪಡೆಯನ್ನು ಒಂದು ನಿಮಿಷ ದಂಗಾಗಿಸಿದೇ ಎಂಬುದರಲ್ಲಿ ಅನುಮಾನವಿಲ್ಲ.

ಬ್ಲಾಕ್​ ಮ್ಯಾಜಿಕ್​ ಪ್ರಯೋಗ

ಯುವತಿಯನ್ನು ಕೊಂದ ಬಳಿಕ ಆಕೆಯನ್ನು ಬೆತ್ತಲು ಮಾಡಿದ ಆರೋಪಿ, ಯೂಟ್ಯೂಬ್​ ವಿಡಿಯೋಗಳನ್ನು ನೋಡಿ, ಮಾಟ-ಮಂತ್ರದ ಸಹಾಯದಿಂದ ಆಕೆಯ ಆತ್ಮವನ್ನು ಕರೆಸಲು ಯತ್ನಿಸಿದೆ. ಕತ್ತಲೆ ಕೋಣೆಯಲ್ಲಿ ಮೃತದೇಹವನ್ನು ಇರಿಸಿ, ಕ್ಷಮೆ ಕೇಳುತ್ತ ಮಂತ್ರ ಪಠಿಸಿದೆ. ಅವಳ ಆತ್ಮದ ಜೊತೆಗೆ ನಾನು ಮಾತನಾಡಬೇಕು ಎಂದು ತನಿಖೆಯಲ್ಲಿ ಹೇಳಿದ್ದಾಗಿ ಎನ್​ಡಿಟಿವಿ ವರದಿ ಉಲ್ಲೇಖಿಸಿದೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಪೊಲೀಸರ ಪ್ರಕಾರ, ಇಂದೋರ್​ನ ಪ್ರತಿಷ್ಠಿತ ಕಾಲೇಜಿನ ಎಂಬಿಎ ವಿದ್ಯಾರ್ಥಿನಿಯ ಭೀಕರ ಹತ್ಯೆಯ ಆರೋಪಿ ಪಿಯೂಷ್ ಧಮ್ನೋಟಿಯಾ ಕಳೆದ ಮೂರು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಅವನ ಮನೆ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಫೆ.10ರಂದು ಯುವತಿಯೊಂದಿಗೆ ಧಮ್ನೋಟಿಯಾ ಮನೆಗೆ ಹೋಗುತ್ತಿರುವುದನ್ನು ಸೆರೆಹಿಡಿದಿವೆ. ಎರಡೂವರೆ ಗಂಟೆಗಳ ನಂತರ, ಅದೇ ಕ್ಯಾಮೆರಾಗಳಲ್ಲಿ ಆತ ಒಬ್ಬಂಟಿಯಾಗಿ ಬ್ಯಾಗ್ ಹಿಡಿದು ಹೋಗುತ್ತಿರುವುದು ರೆಕಾರ್ಡ್ ಆಗಿದೆ.

ಸೆಕ್ಸ್​ಗೆ ಒತ್ತಾಯ

ಪೊಲೀಸ್​ ಮೂಲಗಳು ಪ್ರಕಾರ, ಆರೋಪಿ ಯುವತಿಗೆ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಆಕೆ ಒಪ್ಪಿಲ್ಲ. ಬದಲಿಗೆ ತನಗೆ ಹುಷಾರಿಲ್ಲ ಎಂದಿದ್ದಾಳೆ. ಇದರಿಂದ ಕುಪಿತಗೊಂಡ ಪ್ರಿಯಕರ, ಅವಳೊಂದಿಗೆ ಜಗಳ ಮಾಡಿದ್ದಾನೆ. ಇದು ತಾರಕ್ಕೇರಿದ ಹಿನ್ನೆಲೆ ಆಕೆಯ ಕೈ-ಕಾಲು ಮತ್ತು ಕಣ್ಣನ್ನು ಕಟ್ಟಿ, ಸೊಂಟದ ಮೇಲೆ ಕುಳಿತು ಎದೆಗೆ ಬಲವಾಗಿ ಚಾಕು ಇರಿದಿದ್ದಾನೆ.
ಈತನ ಕ್ರೂರತ್ವ ಆಕೆಯ ಸಾವಿನೊಂದಿಗೆ ಕೊನೆಗೊಂಡಿಲ್ಲ. ಕೊಲೆಗೈದ ಬಳಿಕ ತನ್ನ ರೂಮಿನಿಂದ ಹೊರ ಹೋದ ಆರೋಪಿ, ಸ್ಥಳೀಯ ಮದ್ಯದಂಗಡಿಯಿಂದ ಬಿಯರ್ ತಂದು, ಮೃತದೇಹದ ಪಕ್ಕದಲ್ಲೇ ಕುಡಿದಿದ್ದಾನೆ. ವಿಚಾರಣೆಯ ವೇಳೆ, ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆರೋಪಿ ಹೇಳಿದ್ದಾನೆ. ಇದಾದ ಬಳಿಕ, ಬಟ್ಟೆ ಬದಲಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾಗಿ ವರದಿಯಾಗಿದೆ. ಪ್ರಸ್ತುತ, ಆರೋಪಿ ಖಾಕಿ ವಶದಲ್ಲಿದ್ದು, ತನಿಖೆ ಇನ್ನಷ್ಟು ಚುರುಕುಗೊಂಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net