ಚೀಲದಲ್ಲಿ ನಾಣ್ಯ ಹೊತ್ತು ತಂದ ಆಸಾಮಿ: ಹತ್ತು ರೂಪಾಯಿ ನಾಣ್ಯ ನೀಡಿ ಲಕ್ಷದ ಬೈಕ್​ ಖರೀದಿ; ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​! Buys Bike from Coins

11,000 ಹತ್ತು ರೂಪಾಯಿ ನಾಣ್ಯಗಳನ್ನು ಚೀಲದಲ್ಲಿ ತಂದು ₹1.10 ಲಕ್ಷದ ಸ್ಪ್ಲೆಂಡರ್ ಬೈಕ್ ಖರೀದಿ
11,000 ಹತ್ತು ರೂಪಾಯಿ ನಾಣ್ಯಗಳನ್ನು ಚೀಲದಲ್ಲಿ ತಂದು ₹1.10 ಲಕ್ಷದ ಸ್ಪ್ಲೆಂಡರ್ ಬೈಕ್ ಖರೀದಿ
Published on

ಪ್ರಮುಖ ಮುಖ್ಯಾಂಶಗಳು

  • 11,000 ಹತ್ತು ರೂಪಾಯಿ ನಾಣ್ಯಗಳನ್ನು ಚೀಲದಲ್ಲಿ ತಂದು ₹1.10 ಲಕ್ಷದ ಸ್ಪ್ಲೆಂಡರ್ ಬೈಕ್ ಖರೀದಿ
  • ತೆಲಂಗಾಣದಲ್ಲಿ ನಡೆದಿದೆ ಎಂದು ಹೇಳಲಾಗಿರುವ ಘಟನೆ
  • ‘ಹನಿ ಗೂಡಿದರೆ ಹಳ್ಳ’ ಎಂಬ ಮಾತು ಇವನಿಗೆ ಅನ್ವಯಿಸುತ್ತೆ ಎಂದ ನೆಟ್ಟಿಗರು
ತೆಲಂಗಾಣ: ಹನಿ ಗೂಡಿದರೆ ಹಳ್ಳ ಎಂಬ ನಾಣ್ಣುಡಿಯನ್ನು ಎಲ್ಲರು ಕೇಳಿರುತ್ತೆವೆ. ಯಾವುದನ್ನೇ ಆದರೂ ಸ್ವಲ್ಪ-ಸ್ವಲ್ಪ ಕೂಡಿಸುತ್ತಾ ಹೋದರೆ, ಅದು ಮುಂದಿನ ದಿನ ದೊಡ್ಡದಾಗುತ್ತೆ ಎನ್ನುವುದು ಈ ಮಾತಿನ ಅರ್ಥವಾಗಿದೆ.
ಈದೀಗ ಈ ಮಾತನ್ನು ಗಂಭೀರವಾಗಿ ಸ್ವೀಕರಿಸಿದ ಒಬ್ಬ ವ್ಯಕ್ತಿಯು ತಾನು ಕೂಡಿಟ್ಟ 10 ರೂಪಾಯಿ ನಾಣ್ಯಗಳನ್ನು ಬಳಸಿಕೊಂಡು ಬೈಕ್​ವೊಂದನ್ನು ಖರೀದಿಸಿರುವ (Buys Bike from Coins) ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದ್ದು, ವಿಡಿಯೋನಲ್ಲಿರುವ ವ್ಯಕ್ತಿಯು ಚಿಟ್ಯಾಲ ಮಂಡಲದ ವೆಲಿಮಿನೇಡು ಗ್ರಾಮದ ನಿವಾಸಿ ಕೊಂಡೆ ರಘುಪತಿ ಎಂದು ಗುರುತಿಸಲಾಗಿದೆ.
ಈ ಕೊಂಡೆ ರಘುಪತಿ ತಾನು ಕೂಡಿಸಿಟ್ಟಿದ್ದ 10 ರೂಪಾಯಿ ಮುಖಬೆಲೆಯ ಸುಮಾರು 11 ಸಾವಿರ ನಾಣ್ಯಗಳನ್ನು ನೀಡಿ ಒಂದು ಲಕ್ಷ ಹತ್ತು ಸಾವಿರ ಮೌಲ್ಯದ ಸ್ಪ್ಲೆಂಡರ್ ಪ್ಲಸ್ (Splendor Plus) ಬೈಕ್​ಅನ್ನು ಖರೀದಿಸಿದ್ದಾರೆಂದು ತಿಳಿದು ಬಂದಿದೆ.
ಒಂದು ದೊಡ್ಡ ಪ್ಲಾಸ್ಟಿಕ್​ ಚೀಲದಲ್ಲಿ ತನ್ನ ನಾಣ್ಯಗಳೊಂದಿಗೆ ಶೋರೂಮ್​ ಪ್ರವೇಶಿಸಿದ ಕೊಂಡೆ ರಘುಪತಿ ನಾಣ್ಯಗಳನ್ನು ಶೋರೂಮ್​ ಸಿಬ್ಬಂದಿಗಳಿಗೆ ನೀಡಿ ಬೈಕ್​ಅನ್ನು ಪಡೆದಿರುವ ದೃಶ್ಯ ಎಲ್ಲಾ ಕಡೆ ಹರಿದಾಡುತ್ತಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ಹಾಗೂ ಶುಭ ಹಾರೈಕೆಗಳು ಹರಿದು ಬಂದಿದೆ. ಪಾಪ.. ಅವರು ಈ ಬೈಕ್​ಅನ್ನು ಖರೀದಿಸಲು ಅದು ಎಷ್ಟು ವರ್ಷ ಹಣವನ್ನು ಕೂಡಿಸಿದ್ದರೋ ಏನೋ? ಅಂತು ಅವರ ಆಸೆ ನೆರವೇರಿದೆ, ಶುಭವಾಗಲಿ ಎಂದು ಒಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದಾರೆ.
ಆ ನಾಣ್ಯಗಳನ್ನು ಎಣಿಸುವಷ್ಟರಲ್ಲಿ ಶೋರೂಮ್​ ಸಿಬ್ಬಂದಿ ಸತ್ತು, ಮತ್ತೆ ಹುಟ್ಟಿಬರುವುದು ಸತ್ಯ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಆದರೂ ಈ ವ್ಯಕ್ತಿ ಇಷ್ಟು ನಾಣ್ಯಗಳನ್ನು ಎಲ್ಲಿ ಸಂಗ್ರಹಿಸಿದ ಎನ್ನುವುದೇ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net