ಹುಮಾಯೂನ್ ಕಬೀರ್ ಹೇಳಿಕೆಗಳು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸುತ್ತಿದೆ, ಆದರೂ ಕೂಡ ಸರ್ಕಾರ ಶಾಸಕರನ್ನು ಏಕೆ ಬಂಧಿಸುತ್ತಿಲ್ಲ ಎಂದು ಬಂಗಾಳ ರಾಜ್ಯಪಾಲ ಆನಂದ ಬೋಸ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಕ್ಷೇತ್ರ, ಗುಪ್ತಚರ ಸಂಸ್ಥೆಗಳು ಮತ್ತು ಸ್ಥಳೀಯ ನಾಯಕರಿಂದ ನನಗೆ ಬಂದಿರುವ ವರದಿಗಳು, ಮುರ್ಷಿದಾಬಾದ್ನ್ನು ಯಾರೋ ಉದ್ದೇಶಪೂರ್ವಕವಾಗಿ ಹಗರಣದ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದರು. ಇದು ಕೇವಲ ಪೂಜಾ ಸ್ಥಳ ನಿರ್ಮಾಣದ ವಿಷಯವಲ್ಲ ಎಂದಿರುವ ರಾಜ್ಯಪಾಲರು, ಕೋಮು ಭಾವನೆಗಳನ್ನು ಕೆರಳಿಸಿದರೆ, ಕಬೀರ್ರನ್ನು ಮುಂಚಿತವಾಗಿ ಬಂಧಿಸಬೇಕಾಗುತ್ತದೆ. ಸರ್ಕಾರ ಕ್ರಮಕ್ಕೆ ಮುಂದಾಗದಿದ್ದರೆ, ರಾಜ್ಯಪಾಲರಾಗಿ ನಾನೇ ನನ್ನ ಅಧಿಕಾರ ಚಲಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.