ಇದು ಭಾರತದ ಅತಿದೊಡ್ಡ ಮತ್ತು ಅತ್ಯಂತ ನಿರೀಕ್ಷಿತ ವಧುವಿನ ಚಿನ್ನಾಭರಣಗಳ ಅಭಿಯಾನವಾಗಿದೆ. ಈ ವರ್ಷದ ಆವೃತ್ತಿಯು 22 ವಧುಗಳು ಮತ್ತು 10 ತಾರಾ ನಟಿಮಣಿಗಳನ್ನು ಒಂದೆಡೆ ಸೇರಿಸಲಿದೆ. ಶ್ರೀನಿಧಿ ಶೆಟ್ಟಿ, ಕಾರ್ತಿ, ಎನ್‌ಟಿಆರ್, ಆಲಿಯಾ ಭಟ್, ಕರೀನಾ ಕಪೂರ್ ಖಾನ್, ಅನಿಲ್ ಕಪೂರ್, ರುಕ್ಮಿಣಿ ಮೈತ್ರಾ, ಸವ್ಯಸಾಚಿ ಮಿಶ್ರಾ, ಪ್ರಾರ್ಥನಾ ಬೆಹೆರೆ ಮತ್ತು ಮಾನಸಿ ಪಾರೇಖ್ ಮತ್ತಿತರ ಖ್ಯಾತನಾಮರು ಸೇರಿದ್ದಾರೆ. ಇವರೆಲ್ಲರ ಭಾಗವಹಿಸುವಿಕೆಯು ಈ ಅಭಿಯಾನದ ಅಗಾಧತೆ, ವೈವಿಧ್ಯತೆ ಮತ್ತು ಗಾಢ ಭಾವನಾತ್ಮಕತೆಯನ್ನು ಅರ್ಥಪೂರ್ಣವಾಗಿ ಪ್ರತಿಬಿಂಬಿಸಲಿದೆ.