ಮಹಾರಾಷ್ಟ್ರದಲ್ಲೊಂದು ಬೆಚ್ಚಿಬೀಳಿಸುವ ಘಟನೆ; ಹಣಕ್ಕಾಗಿ ಪತಿ ಜೊತೆ ಸೇರಿ ಪ್ರಿಯಕರನ ಕೊಂದು ಡ್ರಮ್​ನಲ್ಲಿಟ್ಟ ಮಹಿಳೆ!..Maharashtra

Maharashtra Murder Case
Maharashtra Murder Case
Published on

ಪ್ರಮುಖ ಮುಖ್ಯಾಂಶಗಳು

  • ಪತಿಯೊಂದಿಗೆ ಸೇರಿ ಪ್ರಿಯಕರನ ಕೊಂದ ಮಹಿಳೆ ಬಂಧನ
  • ಕೊಲೆಯ ನಂತರ ಶವವನ್ನು ಪ್ಲಾಸ್ಟಿಕ್ ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದ ದಂಪತಿ
  • ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ಘಟನೆ
ಮುಂಬೈ: 2025  ಮಾರ್ಚ್​​ನಲ್ಲಿ  ನೇವಿ ಆಫೀಸರ್​ ಸೌರಭ್​ ರಜಪೂತ್​ನನ್ನು ಕೊಲೆ ಮಾಡಿ, ದೇಹವನ್ನು ತುಂಡು, ತುಂಡಾಗಿ ಕತ್ತರಿಸಿ ಕೊಲೆ ಮಾಡಿದ್ದ ಪ್ರಕರಣವು ಇಡೀ ದೇಶದಾದ್ಯಂತೆ ಬೆಚ್ಚಿಬೀಳಿಸಿತ್ತು. ಸದ್ಯ ಅದೇ ಘಟನೆಯನ್ನೇ ಹೋಲುವ ಪ್ರಕರಣ ಮಹಾರಾಷ್ಟ್ರದಲ್ಲಿ (Maharashtra Murder Case)ನಡೆದಿದೆ.
ಥಾಣೆಯ ಮುಂಬ್ರಾ ನಿವಾಸಿ ಅರ್ಬಾಜ್ ಮಕ್ಸೂದ್ ಅಲಿ ಖಾನ್ ಎಂಬಾತನೇ ಕೊಲೆಯಾದ ವ್ಯಕ್ತಿ,. ಏಪ್ರಿಲ್​ 3ರಂದು ಕೆಲಸದ ನಿಮಿತ್ತ ದಾದರ್​ಗೆ ಹೋಗುತ್ತಿರುವುದಾಗಿ ಹೇಳಿ ಹೊರಟ ದಿನದಿಂದ ಸುದ್ದಿಯೇ ಇಲ್ಲದಿದ್ದಾಗ ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ಪೊಲೀಸರು ನಡೆಸಿದ ತನಿಖೆ ವೇಳೆ ಆತ ಕೊಲೆಯಾಗಿರುವುದು ಪತ್ತೆಯಾಗಿದೆ.  ಮೆಹಜಬೀನ್ ಹಾಗೂ ತಾರಿಕ್​ ಶೇಖ್​ನನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಪತಿ ಹಸನ್​ಗಾಗಿಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ನಾಪತ್ತೆ ಬಗ್ಗೆ ದೂರು

ಏಪ್ರಿಲ್​ 3ರಂದು ಅರ್ಬಾಜ್ ಮಕ್ಸೂದ್ ಅಲಿ ಖಾನ್ ಕಾಣೆಯಾಗಿದ್ದರು. ಈ ಬಗ್ಗೆ ಅವರ ತಂದೆ ಪೊಲೀಸರಿಗೆ ದೂರು ಕೊಟ್ಟಾಗ ಆತನ  ಕರೆ ದಾಖಲೆಗಳು ಮತ್ತು ಸ್ಥಳದ ಡೇಟಾವನ್ನು ವಿಶ್ಲೇಷಿಸುವ ಮೂಲಕ ತನಿಖೆ ಆರಂಭಿಸಿದರು. ಆಗಲೇ ತಿಳಿದಿದ್ದು ಖಾನ್ ಕೊನೆಗೆ ಮಾತನಾಡಿದ್ದು ಮೆಹಜಬೀನ್​ ಜೊತೆಗೆ.

ಪೊಲೀಸರು ಏನಂದ್ರು?

ಆಕೆಯನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆಕೆ ಏನನ್ನು ಒಪ್ಪಿಕೊಂಡಿಲ್ಲ, ಆಗ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.  ಹಣಕ್ಕಾಗಿ ಸಹೋದರ ಮತ್ತು ಪತಿ ಜೊತೆ ಸೇರಿ ಕೊಲೆ ಮಾಡಿ, ಡ್ರಮ್​ನಲ್ಲಿ ಆತನ ದೇಹ ಮುಚ್ಚಿಟ್ಟಿದ್ದಾಗಿ ಹೇಳಿದ್ದಾಳೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಎಸಿಪಿ) ಪ್ರಿಯಾ ಧಂಕ್ನೆ ಹೇಳಿದರು.
ಮೆಹಜಬೀನ್ ಪತಿ ಮತ್ತು ಆಕೆಯ ಸಹೋದರನಿಗೆ ಖಾನ್​ನಿಂದ ಹಣ ಪಡೆಯುವುದು ಉದ್ದೇಶವಾಗಿತ್ತು ಆತನಿಂದ ಏನೂ ಸಿಗದಿದ್ದ ಕಾರಣ ಕೈ ಕಟ್ಟಿ ಪ್ಲಾಸ್ಟಿಕ್​ ಪೈಪ್​ನಿಂದ ಹೊಡೆದು ಕೊಂದಿದ್ದಾರೆ. ಅವನ ದೇಹವನ್ನು ಹಸಿರು ಡ್ರಮ್‌ನಲ್ಲಿ ತುಂಬಿಸಿ ಮುಂಬ್ರಾ ಪ್ರದೇಶದ ಚರಂಡಿಗೆ ಎಸೆದಿದ್ದಾರೆ ಎನ್ನಲಾಗಿದೆ. 

ಏನಿದು ಮೀರತ್​ ಮರ್ಡರ್​? 

ಉತ್ತರ ಪ್ರದೇಶದ ಮೀರತ್​ನಲ್ಲಿ ಪತಿ ಸೌರಭ್​ ರಜಪೂತ್​ನನ್ನು ಕೊಲೆ ಮಾಡಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಮುಸ್ಕಾನ್​ ರಸ್ತೋಗಿ ಮತ್ತು ಸಾಹುಲ್​ ಶುಕ್ಲಾ ಎಂಬಾತ ಸೇರಿ ಸೌರಭ್​ ರಜಪೂತ್​ನನ್ನು ಕೊಲೆ ಮಾಡಲು 2023 ನವೆಂಬರ್​ನಿಂದ ಸ್ಕರಚ್​ ಹಾಕಿದ್ದಳು. ಇದಕ್ಕಾಗಿ ಇಬ್ಬರು ಸ್ನ್ಯಾಪ್​ಚಾಟ್​ ಮೂಲಕ ಸಂಪರ್ಕ ಬೆಳೆಸಿದ್ದರು.ಅವಳು ಸೌರಭ್‌ನಿಂದ ವಿಚ್ಛೇದನ ಪಡೆಯಬೇಕೆಂದು ಹಠ ಹಿಡಿದಿದ್ದಳು. ಆದರೆ ಸೌರಭ್‌ ವಿಚ್ಛೇದನಕ್ಕೆ ನಿರಾಕರಿಸುತ್ತಲೇ ಇದ್ದನಂತೆ. 2021ರಿಂದ ಈ ಗಲಾಟೆ ಇತ್ತು. ಸಾಹಿಲ್​ನನ್ನು ಇಷ್ಟಪಟ್ಟಿದ್ದಾಗಿ ಆಕೆ ಹೇಳಿಕೊಂಡಿದ್ದಳು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net