ಈ ನಡುವೆ, ಸ್ಥಳೀಯ ಸಂಸ್ಥೆಯೊಂದು 3,000 ರೂಪಾಯಿ ನಗದು ಬಹುಮಾನ ಹೊಂದಿದ್ದ ಅಮೃತ್ ದೌಡ್ ಮ್ಯಾರಥಾನ್ ಆಯೋಜಿಸಿತ್ತು. ತಮ್ಮ ಮಕ್ಕಳ ಶಿಕ್ಷಣಕ್ಕೆ ಹಣದ ಅಗತ್ಯವಿದ್ದ ಕಾರಣ ರಮಾಬಾಯಿ ಈ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಟ್ರ್ಯಾಕ್‌ಸೂಟ್ ಧರಿಸಿದ್ದ ಯುವ ಓಟಗಾರರ ನಡುವೆ ರಮಾಬಾಯಿ ಸಾಮಾನ್ಯ ಸೀರೆಯನ್ನುಟ್ಟು, ಕಾಲಿಗೆ ಚಪ್ಪಲಿ ಧರಿಸಿ ಸ್ಪರ್ಧೆಯ ಸಾಲಿನಲ್ಲಿ ನಿಂತಿದ್ದರು. ಆದರೆ, ಓಟ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಚಪ್ಪಲಿಗಳು ಜಾರತೊಡಗಿದವು. ತಕ್ಷಣವೇ ಚಪ್ಪಲಿಯನ್ನು ಕೈಯಲ್ಲೇ ಹಿಡಿದುಕೊಂಡ ರಮಾಬಾಯಿ, ಬರಿಗಾಲಿನಲ್ಲೇ ಓಟವನ್ನು ಮುಂದುವರಿಸಿದರು. ಚೂಪಾದ ಕಲ್ಲುಗಳನ್ನು ಲೆಕ್ಕಿಸದೆ, ಒಂದೆಡೆ ತಮ್ಮ ಸೀರೆಯನ್ನು ಸರಿದೂಗಿಸಿಕೊಳ್ಳುತ್ತಲೇ ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಮುನ್ನುಗ್ಗಿದರು. ಕೊನೆಗೆ ರಮಾಬಾಯಿ ಮೊದಲಿಗರಾಗಿ ಅಂತಿಮ ಗೆರೆ ದಾಟಿದಾಗ, ಅಲ್ಲಿದ್ದ ವೀಕ್ಷಕರೆಲ್ಲರೂ ಅವರ ಛಲವನ್ನು ಕಂಡು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.