ಸಾವಿಗೂ ಮುನ್ನ ನಾನಾ ಪಾಟೇಕರ್ ಆಡಿದ ಆ ಕೊನೆಯ ಪದಗಳು: ಕಣ್ಣೀರಾದ ಆಪ್ತ ಸ್ನೇಹಿತ ತುಕಾರಾಂ ಮುಂಡೆ! | Nana Patekar

Nana Patekar: ಹಿರಿಯ ನಟ ನಾನಾ ಪಾಟೇಕರ್ ಅವರು ಗೋವಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ 75 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದು ಚಿತ್ರರಂಗಕ್ಕೆ ಹಾಗೂ ಅವರ ಸ್ನೇಹಿತರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.
ಸಾವಿಗೂ ಮುನ್ನ ನಾನಾ ಪಾಟೇಕರ್ ಆಡಿದ ಆ ಕೊನೆಯ ಪದಗಳು: ಕಣ್ಣೀರಾದ ಆಪ್ತ ಸ್ನೇಹಿತ ತುಕಾರಾಂ ಮುಂಡೆ
ಸಾವಿಗೂ ಮುನ್ನ ನಾನಾ ಪಾಟೇಕರ್ ಆಡಿದ ಆ ಕೊನೆಯ ಪದಗಳು: ಕಣ್ಣೀರಾದ ಆಪ್ತ ಸ್ನೇಹಿತ ತುಕಾರಾಂ ಮುಂಡೆ
Published on: 

Nana Patekar: ಹಿರಿಯ ನಟ ನಾನಾ ಪಾಟೇಕರ್ ಅವರು ಗೋವಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ 75 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದು ಚಿತ್ರರಂಗಕ್ಕೆ ಹಾಗೂ ಅವರ ಸ್ನೇಹಿತರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ಅಗಲಿಕೆಯ ಬಗ್ಗೆ ಮಾತನಾಡಿದ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಆಯುಕ್ತ, ಅವರ ಸ್ನೇಹಿತ ತುಕಾರಾಂ ಮುಂಡೆ ನಾನಾ ಪಾಟೇಕರ್ ಅವರನ್ನು ಒಬ್ಬ ಅಸಾಧಾರಣ ಕಲಾವಿದ ಮತ್ತು ಉತ್ತಮ ಮನುಷ್ಯ ಎಂದು ಸ್ಮರಿಸಿದ್ದಾರೆ.

ತುಕಾರಾಂ ಮುಂಡೆ ಅವರು ನಾನಾ ಪಾಟೇಕರ್ ಅವರ ಆಪ್ತ ಸ್ನೇಹಿತರಾಗಿದ್ದು, ನಟರ ನಿಧನದ ಬಳಿಕ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನಾನಾ ಪಾಟೇಕರ್ ನಿಧನರಾಗುವುದಕ್ಕೆ ಕೇವಲ ಎಂಟು ದಿನಗಳ ಮುಂಚೆ ತಂದೆ ಮಾತನಾಡಿದ್ದೆ ಎಂದು ಮತ್ತು ಆ ಮಾತುಕತೆ ಕೊನೆಯಾಗುತ್ತದೆ ಎಂದು ತಮಗೆ ತಿಳಿದಿರಲಿಲ್ಲ ಎಂದಿರುವ ಮುಂಡೆ, ತಮ್ಮ ಗೆಳೆಯನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕೆಳಗಿನಂತೆ ಬರೆದುಕೊಂಡಿದ್ದಾರೆ.

ಲವ್​ ಯೂ ಬಾಲಾ!..

ನಾನಾ ಪಾಟೇಕರ್ ನಮ್ಮೊಂದಿಗಿಲ್ಲ. ನಾನು ಕೇವಲ ಅಸಾಧಾರಣ ಕಲಾವಿದನನ್ನು ಮಾತ್ರ ಕಳೆದುಕೊಂಡಿಲ್ಲ, ಬದಲಿಗೆ ಅತ್ಯುತ್ತಮ ಮಾನವ ಹಾಗೂ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಅವರ ಪ್ರೀತಿ ಮತ್ತು ಸ್ನೇಹ ಎಲ್ಲರನ್ನೂ ಸ್ಪರ್ಶಿಸಿತ್ತು. ನಾವು ಕೇವಲ ಎಂಟು ದಿನಗಳ ಹಿಂದಷ್ಟೇ ಮಾತನಾಡಿದ್ದೆವು. ಅದು ನಮ್ಮ ಕೊನೆಯ ಮಾತುಕತೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಅವರು ನನಗೆ ಹೇಳಿದ ಕೊನೆಯ ಮಾತುಗಳು: ಲವ್ ಯು ಬಾಲಾ. ಆ ಮಾತುಗಳು ನನ್ನ ಜೀವಿತಾವಧಿಯವರೆಗೆ ನನ್ನೊಂದಿಗೆ ಉಳಿಯುತ್ತವೆ.

ಕೆಲವರು ನೆನಪುಗಳನ್ನು ಮಾತ್ರ ಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ನಮ್ಮ ಜೀವನದಲ್ಲಿ ತಮ್ಮದೇ ಒಂದು ಭಾಗವನ್ನು ಬಿಟ್ಟು ಹೋಗುತ್ತಾರೆ. ನಾನಾ ಅವರು ಅಂತಹವರಲ್ಲಿ ಒಬ್ಬರು. ವಿದಾಯ ನನ್ನ ಸ್ನೇಹಿತ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಮತ್ತು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಎಂದು ಮುಂಡೆ ಬರೆದುಕೊಂಡಿದ್ದಾರೆ.

ನಾನಾ ಪಾಟೇಕರ್ ಕೊನೆಯ ಚಿತ್ರಗಳು

ಪಾಟೇಕರ್ ಅವರು ತಮ್ಮ ನಿಧನಕ್ಕೂ ಮುಂಚಿನ ವರ್ಷಗಳಲ್ಲಿಯೂ ಪರದೆ ಮೇಲೆ ಕಾಣಿಸಿಕೊಳ್ಳುವುದನ್ನು ಮುಂದುವರೆಸಿದ್ದರು. ಅವರು ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್ ಮತ್ತು ರಿತೇಶ್ ದೇಶ್‌ಮುಖ್ ನಟಿಸಿದ ಹೌಸ್‌ಫುಲ್ 5 ಚಿತ್ರದಲ್ಲೂ ಭಾಗಿಯಾಗಿದ್ದರು. ಅವರು ವಿಶಾಲ್ ಭಾರದ್ವಾಜ್ ಅವರ ಒ ರೋಮಿಯೋ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ತೃಪ್ತಿ ಡಿಮ್ರಿ ಜೊತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಅವರ ಇತ್ತೀಚಿನ ಕೆಲಸಗಳಲ್ಲಿ ಅನಿಲ್ ಕಪೂರ್ ಮತ್ತು ರಾಧಿಕಾ ಮದನ್ ಅಭಿನಯದ ಸುಬೇದಾರ್ ಚಿತ್ರದ ಕ್ಯಾಮಿಯೋ ಪಾತ್ರವೂ ಸೇರಿದೆ.

ಸಾಯುವಾಗಲೂ ತಪ್ಪು ತಿಳುವಳಿಕೆ ಬೇಡವೆಂದಿದ್ದ ನಾನಾ

ತಮ್ಮ ಅಂತ್ಯಸಂಸ್ಕಾರಕ್ಕೆ ಒದ್ದೆ ಮರವನ್ನು ಬಳಸಬೇಡಿ, ಒಣ ಮರಗಳನ್ನೇ ಬಳಸಿ ಎಂದು ನಾನಾ ಪಾಟೇಕರ್ ತಮಾಷೆಯಾಗಿ ಹೇಳಿದ್ದರು. ಒದ್ದೆ ಮರ ಹಾಕಿದರೆ ಬರುವ ಹೊಗೆಯಿಂದ ಸ್ನೇಹಿತರ ಕಣ್ಣಲ್ಲಿ ನೀರು ಬರುತ್ತದೆ, ಅದನ್ನು ನೋಡಿದವರು ನನ್ನ ಸಾವಿಗೆ ಅಳುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಬಹುದು ಎಂದು ಅವರು ಹಾಸ್ಯಚಟಾಕಿ ಹಾರಿಸಿದ್ದರು. ಸಾವೆಂಬುದು ಶಾಶ್ವತತೆಯ ಭ್ರಮೆಯನ್ನು ಕಳಚಿಹಾಕುತ್ತದೆ ಎಂಬುದು ನಾನಾ ಅವರ ದೊಡ್ಡ ದೃಷ್ಟಿಕೋನವಾಗಿತ್ತು. ಅದೇ ಸಂದರ್ಶನದಲ್ಲಿ, ಯಾರಾದರೂ ಸತ್ತ ನಂತರ ಜನರು ಹೇಗೆ ಮುಂದೆ ಸಾಗುತ್ತಾರೆ ಎಂಬುದರ ಕುರಿತು ಅವರು ಮಾತನಾಡಿದರು. ಯಾರೋ ಸಾಯುವಾಗ ತಾವೂ ಶಾಶ್ವತವಾಗಿ ಬದುಕುವವರಂತೆ ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ತಮ್ಮ ನಂಬಿಕೆಯನ್ನು ಇದು ಮತ್ತಷ್ಟು ಗಟ್ಟಿಗೊಳಿಸಿತು.

ನಾನಾ ಪಾಟೇಕರ್ ಅವರ ಕೊನೆಯ ಕ್ಷಣಗಳು!

ಗೋವಾದಲ್ಲಿ ಗುರುವಾರ ಮುಂಜಾನೆ ನಾನಾ ಪಾಟೇಕರ್ ನಿಧನರಾದರು. ಆ ರಾತ್ರಿ ಅವರ ಕೊನೆಯ ಕ್ಷಣಗಳು ಅನಿರೀಕ್ಷಿತವಾಗಿದ್ದವು. ಬೆಳಿಗ್ಗೆ 2:30ರ ಸುಮಾರಿಗೆ ಎದೆನೋವು ಹಾಗೂ ಅಸ್ವಸ್ಥತೆ ಉಂಟಾಗಿದೆ ಎಂದು ಅವರು ತಮ್ಮ ಸ್ನೇಹಿತರಿಗೆ ತಿಳಿಸಿದ್ದರು. ಸ್ನೇಹಿತರು ಅವರ ಮನೆಗೆ ತಲುಪಿದಾಗ ಅವರು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಸಿಬ್ಬಂದಿಯನ್ನು ಕರೆಸಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಬೆಳಿಗ್ಗೆ 4:20ರ ಹೊತ್ತಿಗೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಅವರನ್ನು ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗದೆ, ಬೆಳಿಗ್ಗೆ 5:20ಕ್ಕೆ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು.

ಕೇವಲ ನಾಲ್ಕು ದಿನಗಳ ಹಿಂದೆ, ಗೋವಾದಲ್ಲಿ ತಮ್ಮ ಕೊನೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಾನಾ, ಜೀವನದ ಅನಿಶ್ಚಿತತೆಯ ಬಗ್ಗೆ ಮಾತನಾಡಿದ್ದರು. ಅಕ್ಟೋಬರ್ 4 ರಂದು ನಡೆದ ಕಾರ್ಯಕ್ರಮವೊಂದರಲ್ಲಿ, ನಾನು ಇಂದು ಇಲ್ಲಿದ್ದೇನೆ. ನಾಳೆಯ ಬಗ್ಗೆ ಯಾರಿಗೆ ಗೊತ್ತು ಎಂದು ಅವರು ಹೇಳಿದ್ದರು ಮತ್ತು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net