ತಿರುವನಂತಪುರಂ: "ಅದೃಷ್ಟ ಯಾವಾಗ ಯಾರ ಕೈ ಹಿಡಿಯುತ್ತೆ ಅಂತ ಹೇಳಕ್ಕಾಗಲ್ಲ" ಎಂಬ ಮಾತಿಗೆ ಕೇರಳದ ಈ ಘಟನೆ ಸಾಕ್ಷಿಯಾಗಿದೆ. ನಿನ್ನೆಯವರೆಗೂ ಸೂಪರ್ ಮಾರ್ಕೆಟ್‌ನಲ್ಲಿ ಸಾಮಾನ್ಯ ಕೆಲಸಗಾರನಾಗಿದ್ದ ವ್ಯಕ್ತಿಯೊಬ್ಬರು ಇಂದು ರಾತ್ರೋರಾತ್ರಿ 'ಕೋಟ್ಯಧಿಪತಿ'ಯಾಗಿದ್ದಾರೆ. ಕೇರಳ ರಾಜ್ಯ ಲಾಟರಿಯ(Lottery Jackpot) 'ಸಮ್ಮರ್ ಬಂಪರ್' (Summer Bumper) ಫಲಿತಾಂಶ ಪ್ರಕಟವಾಗಿದ್ದು, ಮಲಪ್ಪುರಂ ಜಿಲ್ಲೆಯ ವ್ಯಕ್ತಿಗೆ ಬರೋಬ್ಬರಿ 10 ಕೋಟಿ ರೂಪಾಯಿಗಳ ಮೊದಲ ಬಹುಮಾನ ಲಭಿಸಿದೆ.