'ನನ್ನ ಸುತ್ತ ಕುಡುಕರಿದ್ದಾರೆ, ಭಯವಾಗ್ತಿದೆ'; ಕೊನೇ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದ್ದ ಅಸ್ಸಾಂ ಡ್ಯಾನ್ಸರ್ ರೈಲು ಹಳಿ ಬಳಿ ಶವವಾಗಿ ಪತ್ತೆ.. Andhra

'ನನ್ನ ಸುತ್ತ ಕುಡುಕರಿದ್ದಾರೆ, ಭಯವಾಗ್ತಿದೆ'; ಕೊನೇ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದ್ದ ಅಸ್ಸಾಂ ಡ್ಯಾನ್ಸರ್ ರೈಲು ಹಳಿ ಬಳಿ ಶವವಾಗಿ ಪತ್ತೆ.. Andhra
Published on: 
  • 20 ವರ್ಷದ ಅಸ್ಸಾಂ ಯುವತಿ ರೈಲು ಹಳಿ ಪಕ್ಕದಲ್ಲಿ ಶವವಾಗಿ ಪತ್ತೆ.

  • ಪುರುಷರು ಹೆಚ್ಚಿದ್ದು,ಭಯವಾಗುತ್ತಿದೆ ಎಂದು ಕುಟುಂಬಕ್ಕೆ ಮೆಸೇಜ್ ಮಾಡಿದ್ದ ಯುವತಿ

  • ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆಯೇ ಅಥವಾ ಬೇರೆ ಕಾರಣವೇ ಎನ್ನುವುದಾಗಿ ತನಿಖೆ

Assam Dancer Found Dead In Andhra: ಅಸ್ಸಾಂನ ಕಾಮರೂಪ್ ಜಿಲ್ಲೆಯ 20 ವರ್ಷದ ಯುವತಿ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪ್ರಕರಣದ ಹಿಂದಿನ ತನಿಖೆ ಶುರು ಮಾಡಿದ ಪೊಲೀಸರಿಗೆ ಆಕೆ ತನ್ನ ಸ್ನೇಹಿತರು ಮತ್ತು ಪೋಷಕರಿಗೆ ಮಾಡಿದ್ದ ಮೆಸೇಜ್​ಗಳು ಸಿಕ್ಕಿವೆ. ಅದ್ರಲ್ಲಿ ನನ್ನ ಸುತ್ತಲೂ ಕುಡಿದ ಪುರುಷರೇ ಇದ್ದಾರೆ ಎನ್ನುವುದು ತನಿಖೆಗೆ ಸಿಕ್ಕ ತಿರುವಾಗಿದೆ.

ಮೃತ 20 ವರ್ಷದ ಗುವಾಹಟಿಯ ಹಿಮಶ್ರೀ ಬೊರೊ ವಿಶಾಖಪಟ್ಟಣದಲ್ಲಿ ನಡೆದ ಡ್ಯಾನ್ಸ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಳು. ಅ.10 ರಂದು ಗುವಾಹಟಿಯಲ್ಲಿ ಬ್ಯಾಂಕ್ ಪರೀಕ್ಷೆ ಇದ್ದಿದ್ದರಿಂದ ವಾಪಸ್​ ಊರಿನತ್ತ ತೆರಳುತ್ತಿದ್ದರು. ಆದರೆ, ಆಕೆ ಮಾರನೇ ದಿನ ಶ್ರೀಕಾಕುಳಂ ಜಿಲ್ಲೆಯ ರೈಲು ಹಳಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದರು.

ಅಕ್ಟೋಬರ್ 5 ರಂದು ರಾತ್ರಿ ವಿಶಾಖಪಟ್ಟಣಂ ರೈಲು ನಿಲ್ದಾಣದಿಂದ ವಿವೇಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22503) ರೈಲು ಹತ್ತಿದ್ದರು. ಪ್ರಯಾಣದ ವೇಳೆ ಬೋಗಿಯಲ್ಲಿ ವಿಪರೀತ ಜನದಟ್ಟಣೆ ಇದ್ದು, ತನ್ನ ಸುತ್ತಲೂ ಗಂಡಸರೇ ಹೆಚ್ಚಾಗಿರುವುದರಿಂದ ತನಗೆ ಭಯವಾಗುತ್ತಿದೆ ಎಂದು ಅವರು ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಮೆಸೇಜ್​ ಮಾಡಿ ಮಾಹಿತಿ ಕೊಟ್ಟಿದ್ದರು.

ಮೃತ ಯುವತಿಯ ಕುಟುಂಬಸ್ಥರಿಂದ ದೂರು

ಮೃತ ಯುವತಿಯ ಕುಟುಂಬಸ್ಥರು ಕೊಟ್ಟ ದೂರಿನ ಪ್ರಕಾರ , ಅಕ್ಟೋಬರ್ 6ರಂದು ಕೊನೆಯದಾಗಿ ಆಕೆಯೊಂದಿಗೆ ಮಾತನಾಡಲಾಗಿತ್ತು. ಮುಂಜಾನೆ 2:39 ರ ಸುಮಾರಿಗೆ ಅವರೊಂದಿಗೆ ಮಾತನಾಡಲಾಗಿತ್ತು. . ಆ ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ರೈಲಿನಲ್ಲಿ ಅವರ ಬ್ಯಾಗ್ ಪತ್ತೆಯಾಗಿದ್ದು, ಬಳಿಕ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಮಲಯಾಪುರಂ ಬಳಿಯ ಅರಣ್ಯ ಪ್ರದೇಶದಲ್ಲಿ ಅವರ ಮೃತಪಡೆದ ದೇಹ ಪತ್ತೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಚೆನ್ನೈನಲ್ಲಿ ಮೆಟ್ರೋ ಕಾಮಗಾರಿಗೆ ಕುಸಿಯಿತಾ ರಸ್ತೆ?; 10 ಅಡಿ ಗುಂಡಿಗೆ ಬಿದ್ದ ಕಾರು | Chennai road collapse

ರೈಲಿನಿಂದ ಕಾಲ್ತಪ್ಪಿ ಕೆಳಕ್ಕೆ ಬಿದ್ದಿದ್ದಾರೋ ಅಥವಾ ಅಲ್ಲಿದ್ದ ಪುರಷರಿಂದ ಅವರ ಜೀವಕ್ಕೆ ಅಪಾಯವಾಗಿದೆಯೋ ಎನ್ನುವುದು ತನಿಖೆ ಮೂಲಕ ಪತ್ತೆ ಹಚ್ಚಬೇಕಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ವಿಶಾಖಪಟ್ಟಣಂ ಪ್ಲಾಟ್‌ಫಾರ್ಮ್‌ನಲ್ಲಿ ಅವರೊಂದಿಗೆ ಅಪರಿಚಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಮೃತದೇಹ ವಾಪಸ್ ತರಲು ಅಸ್ಸಾಂ ಸರ್ಕಾರ ಕ್ರಮ

ಬೋರೋ ಅವರ ದೇಹವನ್ನು ಹಿಂದಿರುಗಿಸಲು ಅಸ್ಸಾಂ ಸರ್ಕಾರ ಅನುಕೂಲ ಮಾಡಿಕೊಡಲಿದೆ ಎಂದು ಡಿಮೋರಿಯಾ ಶಾಸಕ ತಪನ್ ದಾಸ್ ಹೇಳಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net