ಕರ್ನಾಟಕ ರೀತಿ ಆಂಧ್ರದಲ್ಲೂ 13 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್; ಸಿಎಂ ಚಂದ್ರಬಾಬು ನಾಯ್ಡು | CM Chandrababu Naidu

ಸಿಎಂ ಚಂದ್ರಬಾಬು ನಾಯ್ಡು
ಸಿಎಂ ಚಂದ್ರಬಾಬು ನಾಯ್ಡು
Published on
ಅಮರಾವತಿ: ಕರ್ನಾಟಕದಲ್ಲಿ ಇಂದು ಬಜೆಟ್​ ಸಂದರ್ಭದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣವನ್ನು ನಿರ್ಬಂಧಿಸುವ ನಿರ್ಣಯ ಮಾಡಿದ ಬಳಿಕ, ಪಕ್ಕದ ಆಂಧ್ರ ಪ್ರದೇಶದಲ್ಲೂ 13 ವರ್ಷದೊಳಗಿನ ಮಕ್ಕಳಿಗೆ ನಿಷೇಧ ಹೇರಲಾಗುವುದು ಎಂದು ಸಿಎಂ ಚಂದ್ರಬಾಬು ನಾಯ್ಡು(CM Chandrababu Naidu) ಘೋಷಣೆ ಮಾಡಿದ್ದಾರೆ.
ಆಂಧ್ರ ವಿಧಾನಸಭೆಯಲ್ಲಿ ಶುಕ್ರವಾರ(ಮಾ. 06) ಹಣಕಾಸು ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿರುವ ಅವರು, ತಂತ್ರಜ್ಞಾನವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿದ್ರೆ ಪವಾಡಗಳನ್ನು ಸೃಷ್ಟಿಸಬಹುದು. ಆದರೆ, ಕೆಟ್ಟದ್ದಕ್ಕೆ ಬಳಸಿದ್ರೆ ಅದು ವಿನಾಶಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಿಂದ ಮಕ್ಕಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ. 13 ವರ್ಷದೊಳಗಿನವರಿಗೆ ಸೋಷಿಯಲ್ ಮೀಡಿಯಾವನ್ನು ನಿಷೇಧಿಸುವಂತೆ ಸಲಹೆಗಳು ಬಂದಿವೆ. ಈ ಕುರಿತು ಪರಿಶೀಲಿಸಿದ್ದು, ಮುಂದಿನ 90 ದಿನಗಳಲ್ಲಿ 13-16 ವರ್ಷದೊಳಗಿನವರಿಗೆ ಸೋಷಿಯಲ್ ಮೀಡಿಯಾ ಪ್ರವೇಶಿಸದಂತೆ ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net