Lenskart Controversy: ಇತ್ತೀಚೆಗೆ ಲೆನ್ಸ್‌ಕಾರ್ಟ್ ಕಂಪನಿಯ ಡ್ರೆಸ್ ಕೋಡ್ ಪಾಲಿಸಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಹಿಂದೂ ಧಾರ್ಮಿಕ ಸಂಕೇತಗಳಾದ ಬಿಂದಿ, ಸಿಂಧೂರ ಮತ್ತು ತಿಲಕಕ್ಕೆ ನಿರ್ಬಂಧ ಹೇರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಶೇಷವೆಂದರೆ, ಇದೇ ಪಾಲಿಸಿಯಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಲಾಗಿದೆ ಎಂಬ ಅಂಶವು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.