ಮಾನವತೆಯೇ ಅತ್ಯಂತ ದೊಡ್ಡ ಧರ್ಮ!...ರಾಜ್ಯಸಭಾ ಟಿಕೆಟ್ ಘೋಷಣೆ ಬೆನ್ನಲ್ಲೇ ಅಧಿಕೃತವಾಗಿ ಬಿಜೆಪಿ ಸೇರಿದ ನಟಿ ಕೋಯಲ್ ಮಲ್ಲಿಕ್ | Koel Mallick joins BJP

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯೆಯಾಗಿದ್ದ ಮತ್ತು ಬಂಗಾಳಿ ಚಲನಚಿತ್ರ ಖ್ಯಾತ ನಟಿ ರುಕ್ಮಿಣಿ ಮಲ್ಲಿಕ್ (ಕೋಯಲ್ ಮಲ್ಲಿಕ್) ಸೋಮವಾರ (ಅಕ್ಟೋಬರ್ 5) ಕೋಲ್ಕತ್ತಾದಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (Koel Mallick joins BJP) ಸೇರ್ಪಡೆಗೊಂಡರು. ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಪಕ್ಷವು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಅಧಿಕೃತವಾಗಿ ಬಿಜೆಪಿ ಸೇರಿದ ನಟಿ ಕೋಯಲ್ ಮಲ್ಲಿಕ್
ಅಧಿಕೃತವಾಗಿ ಬಿಜೆಪಿ ಸೇರಿದ ನಟಿ ಕೋಯಲ್ ಮಲ್ಲಿಕ್
Published on: 

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯೆಯಾಗಿದ್ದ ಮತ್ತು ಬಂಗಾಳಿ ಚಲನಚಿತ್ರ ಖ್ಯಾತ ನಟಿ ರುಕ್ಮಿಣಿ ಮಲ್ಲಿಕ್ (ಕೋಯಲ್ ಮಲ್ಲಿಕ್) ಸೋಮವಾರ (ಅಕ್ಟೋಬರ್ 5) ಕೋಲ್ಕತ್ತಾದಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (Koel Mallick joins BJP) ಸೇರ್ಪಡೆಗೊಂಡರು. ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಪಕ್ಷವು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.

ಬಿಜೆಪಿಗೆ ಸೇರಿದ ಬಳಿಕ ಮಾತನಾಡಿದ ಕೋಯಲ್ ಮಲ್ಲಿಕ್, ಬಿಜೆಪಿಗೆ ಸೇರಲು ನನಗೆ ತುಂಬಾ ಖುಷಿಯಾಗಿದೆ. ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ನೋಡಿ ನನಗೆ ಹೆಮ್ಮೆಯೆನಿಸುತ್ತಿದೆ. ನನಗೆ ಜನರ ಸೇವೆ ಮಾಡುವುದು ಹೇಗೆ ಅಂತ ಚೆನ್ನಾಗಿ ಗೊತ್ತು. ಎಲ್ಲಕ್ಕಿಂತ ಮಿಗಿಲಾಗಿ ಮಾನವತೆಯೇ ದೊಡ್ಡ ಧರ್ಮ. ಸಂಸತ್ತಿನ ಮೇಲ್ಮನೆಯ ಸದಸ್ಯೆಯಾಗುವುದು ಮತ್ತು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಳ್ಳುವುದು ನನಗೆ ಗೌರವದ ಸಂಗತಿಯಾಗಿದೆ ಎಂದು ಮಲ್ಲಿಕ್ ತಿಳಿಸಿದರು.

ಇದೇ ವೇಳೆ, ಮಲ್ಲಿಕ್ ಅವರನ್ನು ಬಿಜೆಪಿಗೆ ಸ್ವಾಗತಿಸಿದ ಪಕ್ಷದ ಪಶ್ಚಿಮ ಬಂಗಾಳ ಪ್ರಧಾನ ಕಾರ್ಯದರ್ಶಿ ಶಶಿ ಅಗ್ನಿಹೋತ್ರಿ, ತಮ್ಮ ಅಭ್ಯರ್ಥಿ ಇಂದೇ ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಖ್ಯಾತ ಬಂಗಾಳಿ ಚಲನಚಿತ್ರ ನಟಿ ರಂಜಿತ್ ಮಲ್ಲಿಕ್ ಅವರ ಪುತ್ರಿಯಾದ ಕೋಯಲ್​, ಏಪ್ರಿಲ್ 6 ರಿಂದ ಜುಲೈ 16 ರವರೆಗೆ ಟಿಎಂಸಿ ರಾಜ್ಯಸಭಾ ಸದಸ್ಯೆಯಾಗಿ ಕಾರ್ಯನಿರ್ವಹಿಸಿ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೋಲಿನ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ:150 ಕ್ಷೇತ್ರಗಳಿಗೆ ಕಾಂಗ್ರೆಸ್ ಬೇಡಿಕೆ!...ಇಲ್ಲಿ ಸೀಟ್​​ಗಳು ಮುಖ್ಯ ಅಲ್ಲ ಎನ್ನುತ್ತಲೇ ಕೈ ಗೆಲುವಿನ ಸಾಮರ್ಥ್ಯ ಪ್ರಶ್ನಿಸಿದ್ರಾ ಅಖಿಲೇಶ್​...? | Uttar Pradesh Election

ರಾಜ್ಯಸಭಾ ಚುನಾವಣೆ ದಿನಾಂಕ ಫಿಕ್ಸ್!

ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ ಇತರ 11 ರಾಜ್ಯಸಭಾ ಸ್ಥಾನಗಳೊಂದಿಗೆ ಬಂಗಾಳದ ಖಾಲಿ ಇರುವ ಒಂದು ಸ್ಥಾನಕ್ಕೂ ಅಕ್ಟೋಬರ್ 16 ರಂದು ಚುನಾವಣೆ ನಿಗದಿಯಾಗಿದೆ. ಕೋಯಲ್ ಮಲ್ಲಿಕ್ ಅಧಿಕಾರಾವಧಿಯು 2032ರ ಏಪ್ರಿಲ್ 2 ರಂದು ಮುಕ್ತಾಯಗೊಳ್ಳಲಿದೆ. ಕಳೆದ ಜುಲೈನಲ್ಲಿ ರಾಜೀನಾಮೆ ನೀಡಿದ ನಾಲ್ಕನೇ ವ್ಯಕ್ತಿ ಕೋಯಲ್ ಮಲ್ಲಿಕ್. ಇದಕ್ಕೂ ಮೊದಲು ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬಾರೈಕ್ ಕೂಡ ಸಂಸತ್ತಿನ ಮೇಲ್ಮನೆಗೆ ರಾಜೀನಾಮೆ ನೀಡಿದ್ದರು. ಇವರೆಲ್ಲರೂ ನಂತರ ಬಿಜೆಪಿಗೆ ಸೇರ್ಪಡೆಗೊಂಡು ಬಳಿಕ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

Also Read
ಪ್ರಮಾಣ ವಚನ ಸ್ವೀಕರಿಸಿದ 66 ದಿನಗಳಲ್ಲೇ ಟಿಎಂಸಿಗೆ ಶಾಕ್ ಕೊಟ್ಟ ಕೋಯಲ್ ಮಲ್ಲಿಕ್​; ಹಠಾತ್ ರಾಜೀನಾಮೆ ಹಿಂದಿರುವ ರಹಸ್ಯವೇನು..? | Koel Mallick Resigns
ಅಧಿಕೃತವಾಗಿ ಬಿಜೆಪಿ ಸೇರಿದ ನಟಿ ಕೋಯಲ್ ಮಲ್ಲಿಕ್

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. ರಾಜ್ಯ ವಿಧಾನಸಭೆಯಲ್ಲಿನ ತನ್ನ ಬಲದಿಂದಾಗಿ ಒಂದು ಸ್ಥಾನವನ್ನು ಪಕ್ಷವು ಸುಲಭವಾಗಿ ಗೆಲ್ಲಲಿದೆ.

ಉತ್ತರ ಪ್ರದೇಶದ 10 ಸ್ಥಾನಗಳಿಗೂ ಚುನಾವಣೆ!

ಉತ್ತರ ಪ್ರದೇಶ ಮತ್ತು ಉತ್ತರಾಖಂಡದ 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸೆಪ್ಟೆಂಬರ್ 22 ರಂದು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆಯೋಗದ ಪ್ರಕಾರ, ಉತ್ತರ ಪ್ರದೇಶದ 10 ಹಾಗೂ ಉತ್ತರಾಖಂಡದ 1 ರಾಜ್ಯಸಭಾ ಸದಸ್ಯರ ಅಧಿಕಾರಾವಧಿಯು ಮುಂಬರುವ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಸಂಪೂರ್ಣ ವೇಳಾಪಟ್ಟಿ ಹೀಗಿದೆ

  • ಅಧಿಸೂಚನೆ ಹೊರಡಿಸುವ ದಿನಾಂಕ: ಸೆಪ್ಟೆಂಬರ್ 29, 2026 (ಮಂಗಳವಾರ)

  • ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 6, 2026 (ಮಂಗಳವಾರ)

  • ನಾಮಪತ್ರಗಳ ಪರಿಶೀಲನೆ: ಅಕ್ಟೋಬರ್ 7, 2026 (ಬುಧವಾರ)

  • ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಅಕ್ಟೋಬರ್ 9, 2026 (ಶುಕ್ರವಾರ)

  • ಮತದಾನದ ದಿನಾಂಕ: ಅಕ್ಟೋಬರ್ 16, 2026 (ಶುಕ್ರವಾರ) ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ

  • ಮತ ಎಣಿಕೆ: ಅಕ್ಟೋಬರ್ 16, 2026, ಸಂಜೆ 5:00 ರಿಂದ ಆರಂಭ

  • ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಕೊನೆಯ ದಿನಾಂಕ: ಅಕ್ಟೋಬರ್ 19, 2026 (ಸೋಮವಾರ)

ನಿವೃತ್ತರಾಗಲಿರುವ ಉತ್ತರ ಪ್ರದೇಶದ 10 ರಾಜ್ಯಸಭಾ ಸದಸ್ಯರು

ಬಿಜೆಪಿಯ ದಿನೇಶ್ ಶರ್ಮಾ, ಹರ್ದೀಪ್ ಸಿಂಗ್ ಪುರಿ, ಅರುಣ್ ಸಿಂಗ್, ಬನ್ವಾರಿ ಲಾಲ್ ವರ್ಮಾ, ಬ್ರಿಜ್ ಲಾಲ್, ನೀರಜ್ ಶೇಖರ್, ಸೀಮಾ ದ್ವಿವೇದಿ ಮತ್ತು ಗೀತಾ ಶಾಕ್ಯ, ಹಾಗೂ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ರಾಮ್‌ಜಿ ಗೌತಮ್. ಉತ್ತರಾಖಂಡದಿಂದ ಬಿಜೆಪಿಯ ನರೇಶ್ ಬನ್ಸಾಲ್ ಅವರು ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ.

ಯಾರಿಗಿದೆ ಲಕ್​...?

ಉತ್ತರ ಪ್ರದೇಶ ವಿಧಾನಸಭೆಯ ಪ್ರಸ್ತುತ ಬಲದ ಆಧಾರದ ಮೇಲೆ, ಆಡಳಿತಾರೂಢ ಬಿಜೆಪಿ ಈ ಹಿಂದಿನಂತೆ ತನ್ನ 8 ಸ್ಥಾನಗಳನ್ನು ಮರಳಿ ಪಡೆಯುವುದು ಪಕ್ಕಾ ಆಗಿದ್ದು, ಸಮಾಜವಾದಿ ಪಕ್ಷ, ಬಿಎಸ್​ಪಿಯ ಒಂದನ್ನು ಕಿತ್ತುಕೊಂಡು ಉಳಿದ 2 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಎಸ್‌ಪಿಗೆ ಯಾವುದೇ ಸದಸ್ಯರಿಲ್ಲದ ಕಾರಣ ಇದ್ದ ತನ್ನ ಏಕೈಕ ಸದಸ್ಯತ್ವವನ್ನು ಸಹ ಕಳೆದುಕೊಳ್ಳಲಿದೆ. 1989ರ ಬಳಿಕ ಸಂಸತ್ತಿನ ಮತ್ತು ಶಾಸನಸಭೆಯ ಉಭಯ ಸದನಗಳಲ್ಲಿ ಬಿಎಸ್‌ಪಿ ಪ್ರತಿನಿಧ್ಯವಿಲ್ಲದೆ ಖಾಲಿ ಉಳಿಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net