ಚೆನ್ನೈ: ಜ್ಞಾನಪೀಠ ಪ್ರಶಸ್ತಿ ಭಾರತೀಯ ಸಾಹಿತ್ಯದಲ್ಲೇ ಅತ್ಯುನ್ನತ ಪ್ರಶಸ್ತಿ. ದಶಕಗಳ ಬಳಿಕ ತಮಿಳು ಸಾಹಿತಿ, ಬರಹಗಾರರಾದ ವೈರಮುತ್ತು ಅವರಿಗೆ ಈ ಗೌರವ ಲಭಿಸಿದೆ. ಅವರ ಹೆಸರು ಕೇಳಿದೊಡನೆ, ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು, ತಮಿಳುನಾಡಿಗೆ ಇದು ಹೆಮ್ಮೆಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಮತ್ತೊಂದೆಡೆ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.