ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಗ್ ಶಾಕ್.. ಬುಮ್ರಾ ಸೇರಿ ಇಬ್ಬರು ವಿದೇಶಿ ಸ್ಟಾರ್‌ಗಳು ಮೊದಲ ಪಂದ್ಯದಿಂದ ಔಟ್..? | IPL 2026

IPL 2026 |
IPL 2026 |
Published on
IPL 2026: ಈ ಆವೃತಿಯ ಐಪಿಎಲ್​ಗೆ ಇಂದು ಚಾಲನೆ ಸಿಕ್ಕಿದ್ದು, ನಾಳಿನ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆತಂಕದ ಛಾಯೆ ಆವರಿಸಿದೆ. ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ವಿದೇಶಿ ಆಟಗಾರರಾದ ವಿಲ್ ಜ್ಯಾಕ್ಸ್ ಮತ್ತು ಮಿಚೆಲ್ ಸ್ಯಾಂಟ್ನರ್ ಕಡ್ಡಾಯ ಅಭ್ಯಾಸ ಅವಧಿಗೆ ಗೈರಾಗಿರುವುದು ಪಂದ್ಯ ಆಡುತ್ತಾರೋ ಇಲ್ಲವೋ ಎನ್ನುವ ಅನುಮಾನಕ್ಕೆ ಕಾರಣವಾಗಿದೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಈ ಮೂವರು ಆಟಗಾರರು ಶುಕ್ರವಾರದ ಅಭ್ಯಾಸದಲ್ಲಿ ಕಾಣಿಸಿಕೊಂಡಿಲ್ಲ. ತಂಡದ ಬೆನ್ನೆಲುಬಾಗಿರುವ ಜಸ್ಪ್ರೀತ್ ಬುಮ್ರಾ ಇತ್ತೀಚೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್​ನಲ್ಲಿ ಕಂಡೀಷನಿಂಗ್ ಕ್ಯಾಂಪ್‌ನಲ್ಲಿದ್ದು, ಅವರು ತಂಡವನ್ನು ಯಾವಾಗ ಸೇರಿಕೊಳ್ಳುತ್ತಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ವಿದೇಶಿ ಆಟಗಾರರ ವಿಷಯಕ್ಕೆ ಬರುವುದಾದರೆ, ನ್ಯೂಜಿಲೆಂಡ್‌ನ ಮಿಚೆಲ್ ಸ್ಯಾಂಟ್ನರ್ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಿದ್ದರು. ಇತ್ತ ವಿಲ್ ಜ್ಯಾಕ್ಸ್ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಇಂಗ್ಲೆಂಡ್‌ಗೆ ತೆರಳಿದ್ದರು. ಇವರಿಬ್ಬರೂ ಮುಂಬೈ ತಲುಪಿದ್ದಾರೆಯೇ ಎಂಬ ಬಗ್ಗೆ ಫ್ರಾಂಚೈಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ ಇವರು ಅನುಪಸ್ಥಿತರಾದರೆ, ಅಲ್ಲಾಹ್ ಘಜನ್ಫರ್ ಅಥವಾ ಕಾರ್ಬಿನ್ ಬಾಷ್ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ.
ಈ ಆಟಗಾರ ಲಭ್ಯತೆಯ ಬಗ್ಗೆ ಇನ್ನೂ ಅನುಮಾನವಿರುವುದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿದ್ದು, ಕೆಕೆಆರ್ ತಂಡ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ವೇಗಿ ಹರ್ಷಿತ್ ರಾಣಾ ಮತ್ತು ಆಕಾಶ್ ದೀಪ್​ರಂತಹವರನ್ನು ಕಳೆದುಕೊಂಡಿದೆ. ಅಲ್ಲದೆ, 18 ಕೋಟಿ ಆಟಗಾರ ಮಥೀಷ ಪತಿರಾನ ಕೂಡ ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಒಟ್ಟಾರೆಯಾಗಿ, ಎರಡೂ ತಂಡಗಳು ಪಂದ್ಯ ಆರಂಭಕ್ಕೂ ಮುನ್ನವೇ ಆಟಗಾರರ ಲಭ್ಯತೆಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪ್ಲೇಯಿಂಗ್ ಇಲೆವೆನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net