

ಇನ್ಮುಂದೆ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರೊಟೆಸ್ಟ್, ಮೆರವಣಿಗೆ, ಧರಣಿ ಮಾಡುವಂತಿಲ್ಲ
ರಾಮ್‌ಲೀಲಾ ಮೈದಾನ, ಬುರಾರಿ ಮೈದಾನ, CBD ಮೈದಾನದಲ್ಲಿ ಪ್ರೊಟೆಸ್ಟ್ಗೆ ಅವಕಾಶ
ಪ್ರತಿಭಟನೆ ನಡೆಸಲು ಅನುಮತಿ ಕೊಡದಿದ್ರೆ ಮೆರವಣಿಗೆ ನಡೆಸುವ ಎಚ್ಚರಿಕೆ ಕೊಟ್ಟ ಸಿಜೆಪಿ
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು 'ಇಂಡಿಯಾ' ಒಕ್ಕೂಟ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಎಸ್ಐಆರ್ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ ದೆಹಲಿ ಪೊಲೀಸರು ಹೊಸ ನಿರ್ಧಾರವನ್ನು ಕೈಗೊಂಡಿದ್ದಾರೆ. ಇನ್ಮುಂದೆ ಜಂತರ್ ಮಂತರ್ನಲ್ಲಿ ಯಾವುದೇ ರೀತಿಯ ಧರಣಿ ಮತ್ತು ಪ್ರತಿಭಟನೆ ಮಾಡುವಂತಿಲ್ಲ ಎನ್ನುವ ಹೊಸ ಆದೇಶವನ್ನು ಜಾರಿ ಮಾಡಿದೆ.
ಹೌದು, ಗೃಹ ಸಚಿವಾಲಯದ ಅಡಿಯಲ್ಲಿರುವ ಸಮಿತಿಯ ಶಿಫಾರಸಿನ ಮೇರೆಗೆ ಪ್ರತಿಭಟನೆಗಳು ಮತ್ತು ಧರಣಿge ಮೂರು ಹೊಸ ಸ್ಥಳಗಳನ್ನು ಅಧಿಕೃತವಾಗಿ ಅಂತಿಮಗೊಳಿಸಲಾಗಿದೆ.
ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರು ಅ.11ರಂದು ಈ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದು ಏಪ್ರಿಲ್ 28, 2022 ರಂದು ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಾಗಿ ನಿಗದಿಪಡಿಸಿದ್ದ ಹಿಂದಿನ ಆದೇಶವನ್ನು ಬದಲಿಸಿದೆ.
ರಾಮ್‌ಲೀಲಾ ಮೈದಾನ
ಬುರಾರಿ ಮೈದಾನ
CBD ಮೈದಾನ (ಪೂರ್ವ ದೆಹಲಿ)
ಇನ್ಮುಂದೆ ಜಂತರ್ ಮಂತರ್ ಪ್ರತಿಭಟನಾ ಸ್ಥಳವಲ್ಲ. ಮೂರು ಹೊಸ ಸ್ಥಳಗಳಾದ ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಪೂರ್ವ ದೆಹಲಿಯ ಸಿಬಿಡಿ ಮೈದಾನವನ್ನು ಪ್ರತಿಭಟನೆ/ಮೆರವಣಿಗೆ ಆಯೋಜಿಸಲು ಹೊಸ ಸ್ಥಳಗಳಾಗಿ ಗೊತ್ತುಪಡಿಸಲಾಗಿದೆ ದೆಹಲಿ ಪೊಲೀಸರ ಆದೇಶದಲ್ಲಿದೆ.
'ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಬಗ್ಗೆ ಪೊಲೀಸರಿಗೆ ಔಪಚಾರಿಕವಾಗಿ ಮಾಹಿತಿ ನೀಡಿದ್ದೆವು. ಪೊಲೀಸರು ಅರ್ಜಿಯನ್ನು ಸ್ವೀಕರಿಸಿದ್ದರೂ, ಇದುವರೆಗೆ ದಿನಾಂಕವನ್ನು ನೀಡಿಲ್ಲ. ಅನುಮತಿ ನಿರಾಕರಿಸಿದ್ದಕ್ಕೆ ಕಾರಣ ಸಹ ಕೊಟ್ಟಿಲ್ಲ' ಎಂದು ಸಿಜೆಪಿ ಮುಖ್ಯ ವಕ್ತಾರೌ ಆದ ಸೌರವ್ ದಾಸ್ ಗುಡುಗಿದರು.
'ಯಾವ ದಿನ ಎಲ್ಲಿ ಪ್ರತಿಭಟನೆ ಮಾಡ್ಬೇಕು ಎಂದು ನಮಗೆ ಸ್ಪಷ್ಟ ಮಾಹಿತಿ ನೀಡಲು, ದೆಹಲಿ ಪೊಲೀಸರಿಗೆ ನಾವು 24 ಗಂಟೆ ಸಮಯ ಕೊಡ್ತೇವೆ. ಅದರೊಳಗೆ ಪ್ರತಿಕ್ರಿಯೆ ಕೊಡದೆ ಹೋದರೆ, ಸಿಜೆಪಿಯು ಮೆರವಣಿಗೆ ಆರಂಭಿಸುತ್ತದೆ' ಎಂದು ಸೌರವ್ ದಾಸ್ ಎಚ್ಚರಿಕೆ ನೀಡಿದ್ದಾರೆ.
ಅ.10ರಂದು ಪ್ರತಿಭಟನಾಕಾರರು ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗ ಮಾಡಿದ್ದಾರೆ. ಬಸ್‌ಗಳ ಒಳಗೆ ಪ್ರತಿಭಟನಾಕಾರರನ್ನು ಥಳಿಸಲಾಗಿದೆ. ಡಿಸಿಪಿ ಮತ್ತು ದೆಹಲಿಯ ಹೆಚ್ಚುವರಿ ಡಿಸಿಪಿ ಸಿಜೆಪಿ ಕಾರ್ಯಕರ್ತರ ಜೊತೆಗೆ ಮಾತನಾಡಲು ನಿರಾಕರಿಸುತ್ತಿದ್ದಾರೆ ಎಂದು ಸೌರವ್ ದಾಸ್ ಆರೋಪಿಸಿದರು.
ಭಾರತ ಸರ್ಕಾರವು ತನ್ನದೇ ಆದ ನಾಗರಿಕರ ಮೇಲೆ ಯುದ್ಧ ಸಾರಿದೆ. ಇದಕ್ಕೆ ಹೆದರಿ ಕೂರುವ ವಿದ್ಯಾರ್ಥಿಗಳು ನಾವಲ್ಲ. ನಾವು ಶಾಂತಿಯುತ ಪ್ರತಿಭಟನೆ ಮುಂದುವರೆಸುತ್ತೇವೆ. ಸರ್ಕಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪರ ಇರೋದು ಯಾಕೆ ಎಂದು ಸೌರವ್ ದಾಸ್ ಪ್ರಶ್ನಿಸಿದರು.
ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಹಿನ್ನೆಲೆ, ಅವರ ಈ ನಿರ್ಧಾರ ಕೇಂದ್ರ ಸರ್ಕಾರ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ತಡೆಯುವ ಪ್ರಯತ್ನ ಎಂದು ವಿರೋಧ ಪಕ್ಷ ಟೀಕಿಸುವ ಸಾಧ್ಯತೆಯಿದೆ, (ಏಜೆನ್ಸೀಸ್).