ISRO 47 ಸಂಶೋಧನಾ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದೇ ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೇ ದಿನಾಂಕ
ISRO recruitment: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಹಮದಾಬಾದ್ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದಲ್ಲಿ (SAC) ವಿವಿಧ ಸಂಶೋಧನಾ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೂನಿಯರ್ ರಿಸರ್ಚ್ ಫೆಲೋ, ರಿಸರ್ಚ್ ಅಸೋಸಿಯೇಟ್ ಮತ್ತು ಪ್ರಾಜೆಕ್ಟ್ ಸೈಂಟಿಸ್ಟ್-I ವಿಭಾಗಗಳಲ್ಲಿ ಸೇರಿದಂತೆ ಖಾಲಿಯಿರುವ ಒಟ್ಟು 47 ಹುದ್ದೆಗಳು ಬಾಕಿ ಇವೆ.
ಅರ್ಜಿ ಸಲ್ಲಿಸಿದವರ ಪೈಕಿ ಆಯ್ಕೆಯಾದ ಅಭ್ಯರ್ಥಿಗಳು ಆರಂಭದಲ್ಲಿ ಅಹಮದಾಬಾದ್‌ನಲ್ಲಿ ನೆಲೆಸಿರುತ್ತಾರೆ. ಬಳಿಕ, ಯೋಜನೆಗಳ ಅವಶ್ಯಕತೆಗಳನ್ನು ಅವಲಂಬಿಸಿ, ಅವರು ದೇಶದ ವಿವಿಧ ಕಡೆಗಳಲ್ಲಿ ಉಳಿಯಲು ಮತ್ತು ಕೆಲಸ ಮಾಡಲು ಅವಕಾಶವಿದೆ. ಇನ್ನು ಅರ್ಜಿ ಹಾಕುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳು ಹೀಗಿವೆ. ME, MTech, MSc, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ, ವಾತಾವರಣ ವಿಜ್ಞಾನ, ಜಿಯೋಇನ್ಫರ್ಮ್ಯಾಟಿಕ್ಸ್ ಮತ್ತು ಜಲ ಸಂಪನ್ಮೂಲ ಇಂಜಿನಿಯರಿಂಗ್‌ನಂತಹ ವಿಷಯಗಳಲ್ಲಿ ಪಿಎಚ್‌ಡಿ ಪಡೆದಿರಬೇಕು.
ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು GATE, CSIR-UGC NET ಅಥವಾ ಕೇಂದ್ರ ಸರ್ಕಾರದ ಇಲಾಖೆಗಳು ನಡೆಸುವ ಯಾವುದೇ ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 28 ವರ್ಷಗಳಾಗಿದ್ದು, ರಿಸರ್ಚ್ ಅಸೋಸಿಯೇಟ್ ಮತ್ತು ಪ್ರಾಜೆಕ್ಟ್ ಸೈಂಟಿಸ್ಟ್-I ಹುದ್ದೆಗಳಿಗೆ ಗರಿಷ್ಠ ವಯೋಮಿತಿ 35 ವರ್ಷಗಳು. ಅರ್ಹ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಲಭ್ಯವಿದೆ.
SAC ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶವಿದ್ದು, ಅರ್ಜಿಗಳನ್ನು ಇದೇ ಸೆಪ್ಟೆಂಬರ್ 30ರ ಒಳಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳಿಗೆ ಸೆ.10ರಂದು ಅರ್ಜಿ ಸಲ್ಲಿಕೆಗೆ ಆಹ್ವಾನಿಸಿರುವ ಇಸ್ರೋ ಸಂಸ್ಥೆ, ಸೆ.30 ಕೊನೆಯ ದಿನಾಂಕ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ,(ಏಜೆನ್ಸೀಸ್).