Imran Khan​ಗೆ ಭಾರತ ತೊರೆಯುವಂತೆ ನೋಟಿಸ್​​; ಪತ್ನಿ ಲೇಖಾ, ನಿರ್ದೇಶಕಿ ಕಿರಣ್​ ರಾವ್​ ಬರೆದುಕೊಂಡಿದ್ದಿಷ್ಟು

Imran Khan​ಗೆ ಭಾರತ ತೊರೆಯುವಂತೆ ನೋಟಿಸ್​​; ಪತ್ನಿ ಲೇಖಾ, ನಿರ್ದೇಶಕಿ ಕಿರಣ್​ ರಾವ್​ ಬರೆದುಕೊಂಡಿದ್ದಿಷ್ಟು
Published on: 
  • ಇಮ್ರಾನ್​ ಖಾನ್​ಗೆ ಅ.28ರೊಳಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರಿಂದ ಸೂಚನೆ

  • ನಟಿ, ಸಂಗಾತಿ ಲೇಖ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​, ಘಟನೆ ಬಗ್ಗೆ ಮಾಹಿತಿ

  • ಹುಟ್ಟಿದ್ದು, ಬೆಳೆದಿದ್ದು, ಪ್ರೀತಿ ಗಳಿಸಿದ್ದು ಇಲ್ಲೆ ಎಂದು ನಿರ್ದೇಶಕಿ ಕಿರಣ್​ ರಾವ್ ಪೋಸ್ಟ್

Imran Khan's Partner Lekha Washington: ಮುಂಬೈ ಕ್ರಾಂತಿ ಮೈದಾನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗಾಗಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ಅ.28ರೊಳಗಾಗಿ ಭಾರತ ತೊರೆಯುವಂತೆ ಮುಂಬೈ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಆ ಬೆನ್ನಲ್ಲೇ ನಿರ್ದೇಶಕಿ ಕಿರಣ್​ ರಾವ್​ ಮತ್ತು ಇಮ್ರಾನ್ ಖಾನ್ ಪತ್ನಿ ಅಸಮಾಧಾನ ವ್ಯಕ್ತಪಡಿಸಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಮುಂಬೈ ಪೊಲೀಸರ ಪ್ರಕಾರ, ಭಾರತದ ಸಾಗರೋತ್ತರ ಪೌರತ್ವ (OCI) ಹೊಂದಿದ್ದರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗುವಂತಿಲ್ಲ ಎಂದು ಇಮಿಗ್ರೇಷನ್ ಕಾಯ್ದೆಯಡಿ ಇಮ್ರಾನ್ ಖಾನ್ ಅವರಿಗೆ ಅ.15ರಂದು ಮುಂಬೈ ಪೊಲೀಸರು ನೋಟಿಸ್​ ಕೊಟ್ಟರು. ಅ.28ರೊಳಗೆ ಭಾರತ ತೊರೆಯುವಂತೆ ಸೂಚನೆ ಕೊಟ್ಟರು. ಈ ಹಿನ್ನೆಲೆಯಲ್ಲಿ ನಟನ ಪರ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಪ್ರತಿಭಟನೆ ದಿನ ನಡೆದಿದ್ದೇನು?

ಇಮ್ರಾನ್​ ಖಾನ್ ಪತ್ನಿ ಲೇಖ ವಾಷಿಂಗ್ಟನ್​​ ಪೋಸ್ಟ್​ನಲ್ಲಿ ಹೇಳಿದ್ದು ಹೀಗೆ, 'ಇಮ್ರಾನ್ ತಾಯಿ ನುಝತ್, ನನ್ನ ಸಂಗಾತಿ ಇಮ್ರಾನ್ ಮತ್ತು ಇತರರು ಬಂಧಿತರಾಗಿರುವ ನಮ್ಮ ಸ್ನೇಹಿತರ ಬಗ್ಗೆ ವಿಚಾರಿಸಲು ಆಗಸ್ಟ್ ಕ್ರಾಂತಿ ಮೈದಾನದತ್ತ ತೆರಳಿದ್ದೆವು. ಅಲ್ಲಿ ಜನಸಂದಣಿ ಇರಲಿಲ್ಲ. ಪೊಲೀಸರು ಬ್ಯಾರಿಕೇಡ್ ಹಾಕಿದ್ರು. ಅದೇ ವೇಳೆ ಅಲ್ಲಿದ್ದ ವರದಿಗಾರರು ಕೇಳಿದ ಪ್ರಶ್ನೆಗೆ ಇಮ್ರಾನ್ ಉತ್ತರಿಸಿದ, ನಮಗೆ ಯಾವುದೇ ಬೇಡಿಕೆಗಳಿಲ್ಲ, ನಾವು ಯಾವುದೇ ಸಂಘಟನೆಯ ಭಾಗವಲ್ಲ, ಕೇವಲ ಸಾಮಾನ್ಯ ವ್ಯಕ್ತಿಗಳಾಗಿ ಇಲ್ಲಿಗೆ ಬಂದಿದ್ದೇವೆ ಎಂದರು. ಮಾಧ್ಯಮಗಳ ಗದ್ದಲ ಹಾಗೂ ತೀವ್ರವಾದ ಸಿಳ್ಳೆ ಶಬ್ದಗಳ ನಡುವೆ ಇಮ್ರಾನ್ ಮಾತನ್ನು ಅರ್ಧದಲ್ಲೇ ನಿಲ್ಲಿಸಲಾಯಿತು'. ಎಂದರು

ಮುಂದುವರೆದು, 'ಇದೇ ವೇಳೆ ಏಕಾಏಕಿ ಬಂದ ಪೊಲೀಸರು ಇಮ್ರಾನ್ ತಾಯಿ ನುಝತ್, ನನ್ನನ್ನು ಎಳೆದಾಡಿ ಗಾಯಗೊಳಿಸಿದರು. ಮೂವರನ್ನು ಬಲವಂತವಾಗಿ ಅವರ ವಾಹನಕ್ಕೆ ಗತ್ತಿಸಿ ಎರಡು ಗಂಟೆಗಳ ಕಾಲ ಸುತ್ತಾಡಿಸಿದರು.ಸಾರ್ವಜನಿಕ ಸಾರಿಗೆಯನ್ನು ಬಳಸಲು ಕೂಡ ಅನುಮತಿ ನೀಡಲಿಲ್ಲ 'ಎಂದು ಲೇಖಾ ಅವರು ಘಟನೆ ನಡೆದ ದಿನ ಏನೆಲ್ಲ ಆಯ್ತು ಎಂದು ಸ್ಪಷ್ಟನೆ ಕೊಟ್ಟರು.

'ಪೊಲೀಸ್ ವಾಹನದಲ್ಲಿ ಕುಳಿತಾಗ ಇಮ್ರಾನ್​​ ಹೇಳುವುದಾದರೆ ನಾನು ಈಗ ಡ್ರೈವ್ ಹೊರಟಿದ್ದೇನೆ ಎಂದು ನಮ್ಮೆಲ್ಲರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮಾಷೆ ಮಾಡಿದ್ದರು. ಈ ಎಲ್ಲಾ ಅಡಚಣೆಗಳ ನಡುವೆಯೂ ಮುಂಬೈ ಪೊಲೀಸರು ತಮ್ಮ ವೈಯಕ್ತಿಕ ಅನುಭವದಲ್ಲಿ ಸಂಯಮ ಹಾಗೂ ಸಮತೋಲನ ಕಾಯ್ದುಕೊಂಡಿದ್ದಾರೆ ನಾನು ಸಮಾನತೆಯನ್ನು ಮತ್ತು ಎಲ್ಲರಿಗೂ ಗೌರವ ನೀಡುವುದನ್ನು ನಂಬುತ್ತೇನೆ. ಸತ್ಯವನ್ನು ಮಾತ್ರ ಹೇಳಲು ನಾವೆಲ್ಲರೂ ಒಗ್ಗೂಡಿ ನಮ್ಮ ಧ್ವನಿಯನ್ನು ಎತ್ತಬೇಕಾದ ಸಮಯ ಬಂದಿದೆ.' ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

WEB

ಕಿರಣ್​ ರಾವ್​ ಬೇಸರ

43 ವರ್ಷದ ವ್ಯಕ್ತಿ...40 ವರ್ಷಗಳು ಭಾರತದಲ್ಲೇ ಕಳೆದಿವೆ. ಓದಿದ್ದಾರೆ. ಕೆಲಸ ಮಾಡಿದ್ದಾರೆ. ಇಲ್ಲಿಂದಲೇ ಸಾಕಷ್ಟು ಸಾಧಿಸಿದ್ದಾರೆ. ಹಲವು ಫೇಲ್ಯೂರ್​​ ಅನುಭವಿಸಿದ್ದಾರೆ. ಪ್ರೀತಿಗಳಿಸಿದ್ದಾರೆ. ಹೋರಾಟ ಮಾಡಿದ್ದಾರೆ. ಆದರೀಗ ಸಿಕ್ಕಿದ್ದು ಭಾರತದಿಂದ ಹೋಗಿ ಎನ್ನುವ ಸಂದೇಶ ಎಂದು ನಿರ್ದೇಶಕಿ ಕಿರಣ್​ ರಾವ್ ಬೇಸರ ವ್ಯಕ್ತಪಡಿಸಿದರು.

ಹೈಕೋರ್ಟ್​ ಮೆಟ್ಟಿಲೇರಲು ಸಜ್ಜು

ಮುಂಬೈ ಪೊಲೀಸರು ಹಾಗೂ ಅಧಿಕಾರಿಗಳ ಈ ಕ್ರಮವನ್ನು ಪ್ರಶ್ನಿಸಿ ನಟ ಇಮ್ರಾನ್ ಖಾನ್ ಪರವಾಗಿ ಹಿರಿಯ ವಕೀಲ ಜುಲ್ಫಿಕರ್ ಮೆಮನ್ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net