

ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಟ ಇಮ್ರಾನ್ ಖಾನ್ಗೆ ಸಂಕಷ್ಟ.
ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ ಸೂಚನೆ.
ಭಾರತ ತೊರೆಯುವಂತೆ ನೋಟಿಸ್ ಕೊಟ್ಟ ಮುಂಬೈ ಪೊಲೀಸರು.
Actor Imran Khan asked to leave India by October 28 : ಬಾಲಿವುಡ್ ಸೂಪರ್ಸ್ಟಾರ್ ಆಮಿರ್ ಖಾನ್ ಅವರ ಅಳಿಯ ಮತ್ತು ನಟ ಇಮ್ರಾನ್ ಖಾನ್ಗೆ ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ ಮುಂಬೈ ಪೊಲೀಸರು ಸೂಚನೆ ನೀಡಿದ್ದಾರೆ.
ಹೌದು, ಅ,10ರಂದು ಮುಂಬೈನ ಐತಿಹಾಸಿಕ ಅಗಸ್ಟ್ ಕ್ರಾಂತಿ ಮೈದಾನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ, ಅಕ್ರಮ ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ನಟ ಇಮ್ರಾನ್ ಖಾನ್ ಭಾಗವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಅವರ ಸಂಗಾತಿ, ನಟಿ ಲೇಖಾ ವಾಷಿಂಗ್ಟನ್ ಮತ್ತು ಸೋದರಸಂಬಂಧಿ ಝೈನ್ ಮೇರಿ ಖಾನ್ ಕೂಡ ಭಾಗಿಯಾಗಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.ನಂತರ ಬಿಡುಗಡೆ ಮಾಡಿದ್ದರು. ಆದರೆ, ಈಗ ಭಾರತ ಬಿಟ್ಟು ಹೊರಡುವಂತೆ ಸೂಚನೆ ಸಿಕ್ಕಿದೆ.
ಮುಂಬೈ ಪೊಲೀಸರ ಮಾಹಿತಿ ಪ್ರಕಾರ, ನಟ ಭಾರತೀಯ ಪ್ರಜೆಯಲ್ಲದ ಕಾರಣ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂದು ಆರೋಪಿಸಿ ವಲಸೆ ಕಾಯ್ದೆಯ ಸಂಬಂಧಿತ ನಿಬಂಧನೆಯ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇಮ್ರಾನ್ ಖಾನ್ ಭಾರತೀಯ ಪೌರತ್ವ ಹೊಂದಿಲ್ಲ. ಇಮ್ರಾನ್ ಅಮೆರಿಕದ ಪೌರತ್ವ ಹೊಂದಿದ್ದು, ಭಾರತದ ಪೌರತ್ವದ ಬದಲಿಗೆ ಒಸಿಐ ಕಾರ್ಡ್ (ಭಾರತದ ವಿದೇಶಿ ನಾಗರಿಕ) ಹೊಂದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಮುಂಬೈ ಪೊಲೀಸರು ನೀಡಿರುವ ಸೂಚನೆಯಂತೆ ನಟ ಇಮ್ರಾನ್ ಖಾನ್ ಅಕ್ಟೋಬರ್ 28ರೊಳಗೆ ದೇಶ ಬಿಟ್ಟುಹೋಗಬೇಕಾಗಿದೆ.
ವಿದೇಶಿ ಪ್ರಜೆ ಆಗಿದ್ದರೂ, ಮುಂಬೈನಲ್ಲಿ ಶನಿವಾರ ನಡೆದ ಜಿರಳೆ ಜನತಾ ಪಕ್ಷವನ್ನು ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇಮ್ರಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿಯ ಮಾಜಿ ಸಂಸದ ಕಿರೀಟ್ ಸೋಮಯ್ಯ ಅವರು ಮುಂಬೈನ ಜಂಟಿ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ಶರ್ಮಾ ಅವರಿಗೆ ಪತ್ರ ಬರೆದಿದ್ದರು, (ಏಜೆನ್ಸೀಸ್).