ಮುಂದಿನ 5 ವರ್ಷಗಳಲ್ಲಿ... ದೈತ್ಯ ಟೆಕ್​ ಕಂಪನಿಗಳ​ ಲೇಆಫ್​! ಭವಿಷ್ಯದಲ್ಲಿ ಐಟಿ ಉದ್ಯೋಗಿಗಳಿಗೆ ಕಾದಿದೆ ಭಾರೀ ಸಂಕಷ್ಟ ​

ಐಟಿ ಕಂಪನಿಗಳ ಲೇಆಫ್​
ಐಟಿ ಕಂಪನಿಗಳ ಲೇಆಫ್​
Published on

ಪ್ರಮುಖ ಮುಖ್ಯಾಂಶಗಳು

  • ಅಮೆಜಾನ್​, ಮೈಕ್ರೋಸಾಫ್ಟ್​ನಂತಹ ದೈತ್ಯ ಕಂಪನಿಗಳಿಂದ ವಜಾ ಪ್ರಕ್ರಿಯೆ
  • ಬ್ಯಾಕ್​ ಟು ಬ್ಯಾಕ್​ ವಜಾದಿಂದ ಹಲವು ಉದ್ಯೋಗಿಗಳಿಗೆ ಗೇಟ್​ಪಾಸ್​
  • ಮುಂದಿನ 5 ವರ್ಷಗಳಲ್ಲಿ 1 ಮಿಲಿಯನ್​ ಐಟಿ ಟೆಕ್ಕಿಗಳು ಮನೆಗೆ
IT Layoffs: ಅಮೆಜಾನ್​, ಒರಾಕಲ್​, ಮೈಕ್ರೋಸಾಫ್ಟ್​, ಟಿಸಿಎಸ್​, ಇನ್​ಫೋಸಿಸ್​ ಸೇರಿ ಹಲವು ಜಾಗತಿಕ ಟೆಕ್​ ದೈತ್ಯ ಕಂಪನಿಗಳು ಇದೀಗ ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಪ್ರಕ್ರಿಯೆಯಲ್ಲಿ ತೊಡಗಿರುವುದು ಆಘಾತಕಾರಿ ಸಂಗತಿಯಾಗಿದೆ. ಒಂದೇ ವರ್ಷದಲ್ಲಿ ಮೂರ್ನಾಲ್ಕು ರೌಂಡ್​ಗಳ ವಜಾ ಪ್ರಕ್ರಿಯೆಯನ್ನು ನಡೆಸುತ್ತಿರುವ ಕಂಪನಿಗಳು, ಎಐ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವ ಕಾರಣ, ಉದ್ಯೋಗಿಗಳಿಗೆ ಗುಡ್​ಬೈ ಹೇಳುತ್ತಿವೆ. ಮತ್ತೊಂದೆಡೆ, ಅಚ್ಚರಿ ವರದಿಯೊಂದು ಟೆಕ್ಕಿಗಳ ನಿದ್ದೆಗೆಡಿಸಿದೆ.
ಪ್ರಮುಖ ಬಹುರಾಷ್ಟ್ರೀಯ ಕಂಪನಿ ಒರಾಕಲ್ ಇತ್ತೀಚೆಗೆ 25,000 ಉದ್ಯೋಗಿಗಳನ್ನು ವಜಾಗೊಳಿಸಿದ್ದು ದೇಶದಲ್ಲಿ ಭಾರೀ ಸಂಚಲನ ಮೂಡಿಸಿತು. ಇದರಲ್ಲಿ 12,000ಕ್ಕೂ ಮಂದಿ ಭಾರತೀಯರಿದ್ದರು ಎಂಬುದು ಗಮನಾರ್ಹ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, 'ಟ್ರೇಡಿಂಗ್ ಪ್ಲಾಟ್‌ಫಾರ್ಮ್ಸ್' ಬಿಡುಗಡೆ ಮಾಡಿದ ಇತ್ತೀಚಿನ ವರದಿಯು ಐಟಿ ತಜ್ಞರಲ್ಲಿ ಭೀತಿ ಉಂಟುಮಾಡಿದೆ.

5 ವರ್ಷಗಳಲ್ಲಿ 1 ಮಿಲಿಯನ್ ಜಾಬ್ಸ್​ ಮಾಯಾ!

ಇತ್ತೀಚಿನ ವರದಿಯ ಪ್ರಕಾರ, 2021ರಿಂದ, ವಿಶ್ವಾದ್ಯಂತ ಟೆಕ್ ವಲಯದಲ್ಲಿ 1 ಮಿಲಿಯನ್‌ಗಿಂತಲೂ ಅಧಿಕ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಮಾತ್ರ, ಕಂಪನಿಗಳು 80,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. 2026ರ ಅಂತ್ಯದ ವೇಳೆಗೆ ಈ ಸಂಖ್ಯೆ 3 ಲಕ್ಷ ದಾಟುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಒರಾಕಲ್ 25,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದರೆ, ಅಮೆಜಾನ್ ಸುಮಾರು 16,000 ಜನರನ್ನು ವಜಾಗೊಳಿಸಿದೆ. ಇದರೊಟ್ಟಿಗೆ ಮೆಟಾ (ಫೇಸ್‌ಬುಕ್) ವಿಷಯಕ್ಕೆ ಬಂದರೆ, ಈ ಕಂಪನಿಯು ಸುಮಾರು 2,400 ಜನರನ್ನು ಕೆಲಸದಿಂದ ಕಿತ್ತುಬಿಸಾಡಿದೆ. 

ಭಾರತದಲ್ಲಿ ಏನು ಕಥೆ?

ಆಸ್ಟ್ರೇಲಿಯಾ (4,450) ಮತ್ತು ಭಾರತದಲ್ಲಿ (2,000ಕ್ಕೂ ಅಧಿಕ) ಯುಎಸ್‌ನ ಹೊರಗೆ ಉದ್ಯೋಗ ನಷ್ಟವಾಗಿದೆ. 28,000 ಉದ್ಯೋಗಗಳು ಕಣ್ಮರೆಯಾಗಿವೆ. ಮುಖ್ಯವಾಗಿ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸಾಫ್ಟ್‌ವೇರ್-ಆಸ್-ಎ-ಸರ್ವಿಸ್ (SAAS) ವಲಯಗಳಲ್ಲಿ ಮತ್ತು 19,000 ಇ-ಕಾಮರ್ಸ್‌ನಲ್ಲಿ. ಈ ಬೃಹತ್ ಲೇಆಫ್​ಗಳಿಗೆ ಕೃತಕ ಬುದ್ಧಿಮತ್ತೆಯೇ ಮುಖ್ಯ ಕಾರಣ ಎಂಬುದು ಸ್ಪಷ್ಟ. 2026ರಲ್ಲಿ ಅರ್ಧದಷ್ಟು ವಜಾಗಳು ಎಐ ಮತ್ತು ಯಾಂತ್ರೀಕರಣದ ಕಾರಣದಿಂದಾಗಿರುತ್ತವೆ ಎಂದು ವರದಿ ಹೇಳುತ್ತದೆ.

ಎಐ ವಿರುದ್ಧ ಜನರು ಕಿಡಿ

ನಮಗೆ ಆಧುನಿಕ ಟೆಕ್ನಾಲಜಿಯ ಅವಶ್ಯ ಹಾಗೂ ಅಗತ್ಯವಿದೆ. ಆದರೆ, ಕೃತಕ ಬುದ್ಧಿಮತ್ತೆ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳುತ್ತಿದೆ. ನಮ್ಮ ಜನರಲ್ಲಿ ಕಣ್ಣೀರು ತರಿಸುವಂತ ಇಂತಹ ಎಐ ಸಂಪೂರ್ಣ ನಿಷ್ಪ್ರಯೋಜಕ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net