ಆಮೀರ್​, ಶಾರುಖ್​, ಸಲ್ಮಾನ್​ಗೆ ಕ್ಷಮೆ ಕೇಳಿದ್ದೆ: ಹಿಂದೂವಾಗಿ ನನಗೆ ಅಸಹ್ಯವಾಗಿತ್ತು; ರಾಮ ಜನ್ಮಭೂಮಿ ತೀರ್ಪಿನ ಬಗ್ಗೆ ಸ್ವರಾ ಭಾಸ್ಕರ್​ ಹೇಳಿಕೆ ವೈರಲ್​!​ Swara Bhasker

ರಾಮಜನ್ಮಭೂಮಿ ತೀರ್ಪು ಕುರಿತು ನಟಿ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆ
ರಾಮಜನ್ಮಭೂಮಿ ತೀರ್ಪು ಕುರಿತು ನಟಿ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆ
Published on
ಮುಂಬೈ: ಕೆಲ ದಿನಗಳ ಹಿಂದೆ, ಜೋಹಾರಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿ ನೆಟ್ಟಿಗರ ಕೋಪಕ್ಕೆ ಕಾರಣವಾಗಿದ್ದ ನಟಿ ಸ್ವರಾ ಭಾಸ್ಕರ್​ (Swara Bhasker) ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 2019 ರಲ್ಲಿ ಸುಪ್ರೀಂ ಕೋರ್ಟ್​ ನೀಡಿದ್ದ ಐತಿಹಾಸಿಕ ರಾಮಜನ್ಮಭೂಮಿ ಪ್ರಕರಣದ ತೀರ್ಪು ತಮಗೆ ತುಂಬಾ ನೋವನ್ನುಂಟು ಮಾಡಿತ್ತು ಎಂದು ಸ್ವರಾ ಭಾಸ್ಕರ್​ ಹೇಳಿದ್ದು, ಈಗ ಈ ಹೇಳಿಕೆ ಸೋಷಿಯಲ್​ ಮೀಡಿಯಾನಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

ಹಿಂದೂವಾಗಿ ನನಗೆ ಅಸಹ್ಯವಾಗಿತ್ತು!

ಇತ್ತೀಚೆಗೆ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸ್ವರಾ ಭಾಸ್ಕರ್​, 2019 ರಲ್ಲಿ ಹೊರಬಿದ್ದ ಅಯೋಧ್ಯಾ ರಾಮ ಜನ್ಮಭೂಮಿ ಪ್ರಕರಣದ ತೀರ್ಪು ನನಗೆ ಬಹಳ ಬೇಸರವನ್ನುಂಟು ಮಾಡಿತ್ತು. ಒಬ್ಬ ಹಿಂದೂವಾಗಿ ನನಗೆ ತುಂಬಾ ಅಸಹ್ಯವೆನಿಸಿತು ಎಂದು ಹೇಳಿರುವ ವಿಡಿಯೋ ಈಗ ವಿವಾದದ ರೂಪ ಪಡೆದುಕೊಂಡಿದೆ. ಆ ನಾನು ನನ್ನ ಪೋನ್​ ಲಿಸ್ಟ್​ನಲ್ಲಿದ್ದ ಎಲ್ಲಾ ಮುಸ್ಲಿಮರಲ್ಲಿ ಕ್ಷಮೆ ಕೇಳಿದ್ದೆ ಎಂದು ನಟಿ ಹೇಳಿದ್ದಾರೆ.
ಖಾನ್​ಗಳನ್ನು ಸಂಪರ್ಕಿಸಿ ಕ್ಷಮೆ ಕೇಳಿದ್ದೆ!
ನ್ಯಾಯಾಲಯ ನೀಡಿದ್ದ ಈ ತೀರ್ಪು ಮುಸ್ಲಿಂ ಸಮುದಾಯಕ್ಕೆ ಮಾಡಿದ ಮೋಸವೆಂದ ನಾನು ನಂಬಿದ್ದೆ. ಹೀಗಾಗಿ ನನ್ನ ಕಾಲ್​ ಲಿಸ್ಟ್​ನಲ್ಲಿದ್ದ ಆಮೀರ್​ ಖಾನ್​, ಸಲ್ಮಾನ್​ ಖಾನ್​ ಹಾಗೂ ಶಾರುಖ್​ ಖಾನ್​ಗೆ ಮೆಸೇಜ್​ನಲ್ಲಿ ಕ್ಷಮೆ ಕೇಳಿದ್ದೆ. ನನಗೆ ಆ ಸಮಯದಲ್ಲಿ ಭಾರತದಲ್ಲಿರುವ ಪ್ರತಿ ಮುಸಲ್ಮಾನರನ್ನು ಸಂಪರ್ಕಿಸಿ ಅವರಲ್ಲಿ ಕ್ಷಮೆ ಕೇಳಬೇಕೆಂದು ಅನ್ನಿಸಿತ್ತೆಂದು ಸ್ವರಾ ಭಾಸ್ಕರ್​ ನೀಡಿರುವ ಹೇಳಿಕೆ ಈಗ ಶಾಂತವಾಗಿದ್ದ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸಕ್ಕೆ ನಾಂದಿಹಾಡಿದೆ.

ನೆತ್ತಿ ಬಿಸಿ ಮಾಡಿಕೊಂಡ ನೆಟ್ಟಿಗ!

ಸ್ವರಾ ಭಾಸ್ಕರ್​ಳ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ನಟಿ ವಿರುದ್ಧ ಕೆಂಡಕಾರುತ್ತಿದ್ದಾರೆ. ನೀನು ಹಿಂದೂ ಧರ್ಮದಲ್ಲಿ ಹುಟ್ಟಿದಕ್ಕೆ ಬದುಕಿದ್ದಿಯಾ. ಒಂದು ವೇಳೆ ಬೇರೆ ಧರ್ಮದಲ್ಲಿ ಹುಟ್ಟಿ ಹಿಂದೂ ಧರ್ಮವನ್ನು ಹೊಗಳಿದ್ದರೆ, ನಿನ್ನ ಹೆಣ ಬಿದ್ದಿರುತ್ತಿತ್ತೆಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಪು ಬಂದು ವರ್ಷಗಳೇ ಕಳೆದಿದೆ. ಭಾರತದ ಬಹುಪಾಲು ಜನರು ಶಾಂತಿಯಿಂದಲೇ ಬದುಕುತ್ತಿದ್ದಾರೆ. ಫೇಮ್​ ಪಡೆಯುವ ನಿಮ್ಮ ಹುಚ್ಚಿಗೆ ಹೀಗೆ ಧರ್ಮ-ಧರ್ಮಗಳ ನಡುವೆ ಜಗಳ ಹಚ್ಚಬೇಡಿ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ.
ಜೋರಾಗಿದ್ದ ಜೋಹಾರ್​ ವಿವಾದ!
ಇತ್ತೀಚೆಗೆ ವೇದಿಕೆಯೊಂದರಲ್ಲಿ ಕಾಣಿಸಿಕೊಂಡಿದ್ದ ಸ್ವರಾ ಭಾಸ್ಕರ್​, ನಾನು ಸಂಜಯ್​ ಲೀಲಾ ಬನ್ಸಾಲಿ ಅವರ ಪದ್ಮಾವತ್​ ಸಿನಿಮಾದ ಕ್ಲೈಮಾಕ್ಸ್​ ನೋಡುವಾಗ ಅಲ್ಲಿ ಸುಮಾರು 800 ಜನ ಮಹಿಳೆಯರು ಬೆಂಕಿಗೆ ಬಿದ್ದು ಪ್ರಾಣ ಕಳೆದುಕೊಂಡರು. ಇದನ್ನು ನೋಡುವಾಗ ಅತ್ಯಾಚಾರದ ನಂತರ ಸ್ತ್ರೀ ಬದುಕಲು ಸಾಧ್ಯವಿಲ್ಲ ಎನ್ನುವಂತೆ ಚಿತ್ರಿಸಿದ್ದಾರೆಂದು ನನಗೆ ಅನ್ನಿಸಿತು. ಇದೊಂದು ಹೇಡಿತನವೆಂದು ನಾನು ಬನ್ಸಾಲಿ ಅವರಿಗೆ ಪತ್ರ ಬರೆದಿದ್ದೆ ಎಂದು ಸ್ವರಾ ಹೇಳಿದ್ದರು.

ನಟಿ ಕೊಟ್ಟ ಸ್ಪಷ್ಟನೆ ಏನು?

ಆದರೆ ನಟಿಯ ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾದ ನಂತರ, ಸ್ವರಾ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಾನು ಅತ್ಯಾಚಾರಕ್ಕೆ ಒಳಗಾದ ಮಹಿಳೆ, ಸಮಾಜದಲ್ಲಿ ಬದುಕಬೇಕು. ಅದನ್ನು ಬಿಟ್ಟು ಪ್ರಾಣವನ್ನು ಕಳೆದುಕೊಳ್ಳಬಾರದು ಎಂಬ ಅರ್ಥದಲ್ಲಿ ಜೋಹಾರ್​ನ್ನು ಉದಾಹರಣೆಯಾಗಿ ಬಳಸಿದ್ದೆ. ನಾನು ರಾಣಿ ಪದ್ಮಾವತಿಗೆ ಅಗೌರವ ತರುವಂತೆ ಹೇಳಿಕೆ ನೀಡಿಲ್ಲ ಎಂದಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net