ಭೀಕರ ರಸ್ತೆ ಅಪಘಾತ: ಫುಟ್ಪಾತ್ನಲ್ಲಿದ್ದ ಕುಟುಂಬದ ಮೇಲೆ ಹರಿದ ಟ್ರೇಲರ್: ಮೂವರು ಮಕ್ಕಳು ಸೇರಿ ನಾಲ್ವರು ಸಾವು | accident
ಘಟನೆಯ ಸ್ಥಳ
Published on:
Copied
Follow Us
ಜೈಪುರ: ರಾಜಸ್ಥಾನದ ಜೈಪುರದಲ್ಲಿ ಇಂದು(ಜು. 07) ಫುಟ್‌ಪಾತ್‌ನಲ್ಲಿ ಕುಳಿತಿದ್ದ ಕುಟುಂಬವೊಂದರ ಮೇಲೆ ವೇಗವಾಗಿ ಬಂದ ಟ್ರೇಲರ್ ಹರಿದು ಭೀಕರ ಅಪಘಾತ(accident) ಸಂಭವಿಸಿದ್ದು, ಘಟನೆಯಲ್ಲಿ ತಂದೆ, ಮೂವರು ಮಕ್ಕಳು ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜೈಪುರದ ಶ್ಯಾಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ 200 ಅಡಿ ಬೈಪಾಸ್‌ನಲ್ಲಿರುವ ಕಮಲಾ ನೆಹರು ನಗರದಲ್ಲಿ ಈ ಘಟನೆ ನಡೆದಿದೆ. ಜೈತ್ಪುರಕ್ಕೆ ಹೋಗುವ ವಾಹನಕ್ಕಾಗಿ ಕುಟುಂಬ ಕಾಯುತ್ತಿದ್ದಾಗ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರೇಲರ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಚಂದ್ರಪ್ರಕಾಶ್ ಮತ್ತು ಅವರ ಪುತ್ರರಾದ ರಮೇಶ್(11), ದೀಪಕ್(8) ಹಾಗೂ ರತನ್(10) ಮೃತರಾಗಿದ್ದಾರೆ. ಮತ್ತು ಅವರ ಪತ್ನಿ ಕೈಲಾಶಿ ಗಂಭೀರವಾಗಿ ಗಾಯಗೊಂಡಿದ್ದು, ಎಸ್‌ಎಂಎಸ್ ಆಸ್ಪತ್ರೆಯ ಆಘಾತ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಭೀಕರತೆಗೆ ಮಕ್ಕಳ ದೇಹಗಳು ಛಿದ್ರವಾಗಿವೆ ಎನ್ನಲಾಗಿದೆ.
ಅಪಘಾತದ ನಂತರ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಶ್ಯಾಮ್ ನಗರ ಪೊಲೀಸ್ ಠಾಣೆಯ ಪೊಲೀಸರು, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ (ಏಜೆನ್ಸೀಸ್).