ಹೋಳಿ ಮಾರ್ಚ್ 3ಕ್ಕೋ ಅಥವಾ 4ಕ್ಕೋ? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಫುಲ್ ಕ್ಲಾರಿಟಿ! Holi 2026

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಹೋಳಿ ಹಬ್ಬವು ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದಲ್ಲಿ ಒಂದು ಅಪರೂಪದ ತಿರುವು ಪಡೆದುಕೊಂಡಿದೆ
  • ಸಾಮಾನ್ಯವಾಗಿ ಹೋಳಿಕಾ ದಹನದ ಮರುದಿನವೇ ಬಣ್ಣದ ಹಬ್ಬ ಆಚರಿಸಲಾಗುತ್ತದೆ
  • ಆದರೆ ಈ ಬಾರಿ ಭಕ್ತರು 24 ಗಂಟೆಗಳ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ
  • ಇದು ಅಶುಭದ ಸಂಕೇತವೋ ಅಥವಾ ಅಪರೂಪದ ಖಗೋಳ ಜೋಡಣೆಯ ಫಲಿತಾಂಶವೇ?
Holi 2026: ಭಾರತೀಯ ಹಬ್ಬಗಳಲ್ಲಿ ತಿಥಿಗಳ ಲೆಕ್ಕಾಚಾರ ಬಹಳ ಮುಖ್ಯ. ಆದರೆ 2026ರ ಹೋಳಿ ಹಬ್ಬವು ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದಲ್ಲಿ ಒಂದು ಅಪರೂಪದ ತಿರುವು ಪಡೆದುಕೊಂಡಿದೆ. ಸಾಮಾನ್ಯವಾಗಿ ಹೋಳಿಕಾ ದಹನದ ಮರುದಿನವೇ ಬಣ್ಣದ ಹಬ್ಬ ಆಚರಿಸಲಾಗುತ್ತದೆ. ಆದರೆ ಈ ಬಾರಿ ಭಕ್ತರು 24 ಗಂಟೆಗಳ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ. ಇದು ಅಶುಭದ ಸಂಕೇತವೋ ಅಥವಾ ಅಪರೂಪದ ಖಗೋಳ ಜೋಡಣೆಯ ಫಲಿತಾಂಶವೇ? ಎಂಬ ವಿವರವಾದ ನೋಟ ಇಲ್ಲಿದೆ.

ಹೋಳಿಕಾ ದಹನ್ 2026 ರ ನಿಖರವಾದ ದಿನಾಂಕ

ಪಂಚಾಂಗದ ಪ್ರಕಾರ, ಫಾಲ್ಗುಣ ಮಾಸದ ಪೂರ್ಣಿಮೆಯು ಮಾರ್ಚ್ 2 ರಂದು ಸಂಜೆ ಆರಂಭವಾಗುತ್ತದೆ. ಶಾಸ್ತ್ರಗಳ ಪ್ರಕಾರ, 'ಭದ್ರಾ' ಕಾಲ ಮುಗಿದ ನಂತರ ಪ್ರದೋಷ ಕಾಲದಲ್ಲಿ ಹೋಳಿಕಾ ದಹನ ಮಾಡಬೇಕು. ಹಾಗಾಗಿ ಮಾರ್ಚ್ 2ರ ರಾತ್ರಿ ಈ ಆಚರಣೆ ನಡೆಯಲಿದೆ. ಮಾರ್ಚ್ 3 (ಮಂಗಳವಾರ) ಸೂತಕ ಮತ್ತು ಚಂದ್ರಗ್ರಹಣ ಇರುವುದರಿಂದ ವಿರಾಮ ತೆಗೆದುಕೊಂಡು ಬಣ್ಣದ ಹಬ್ಬವನ್ನು ಮಾರ್ಚ್​ 4 ರಂದು (ಬುಧವಾರ) ಆಚರಿಸಲಾಗುತ್ತದೆ.

ಹೋಳಿಕಾ ದಹನ್ ಸಮಯ

ಜ್ಯೋತಿಷ್ಯದ ಪ್ರಕಾರ, ರಕ್ಷಾ ಬಂಧನ ಮತ್ತು ಹೋಲಿಕಾ ದಹನ್ ಸೇರಿದಂತೆ ಕೆಲವು ಆಚರಣೆಗಳನ್ನು ಭದ್ರಾ ಕಾಲದ ಸಮಯದಲ್ಲಿ ಮಾಡಬಾರದು ಎಂದು ಹೇಳಲಾಗುತ್ತದೆ. ಮಾರ್ಚ್ 2, ರಂದು ಪೂರ್ಣಿಮೆ ತಿಥಿ ಸಂಜೆ 5:55 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಭದ್ರ ಕಾಲ ಕೂಡಾ ಅದೇ ಸಮಯದಲ್ಲಿ ಪ್ರಾರಂಭವಾಗುವುದರಿಂದ ಈ ಅವಧಿಯನ್ನು ಅಶುಭ ಎಂದು ಹೇಳಲಾಗುತ್ತದೆ.
ಈ ಕಾರಣಗಳಿಂದ ಭದ್ರನ "ಪುಚ್ಛ" ಅವಧಿ ಮುಗಿದ ನಂತರವೇ ಹೋಳಿಕಾ ದಹನವನ್ನು ನೆರವೇರಿಸಲಾಗುತ್ತದೆ. ಇದು ಮಾರ್ಚ್​ 3 ರಂದು ಮಧ್ಯರಾತ್ರಿ 12:50 ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಸಮಯವು ಹೋಳಿಕಾ ದಹನಕ್ಕೆ ಅತ್ಯಂತ ಶುಭವಾಗಿರುತ್ತದೆ.

ಮಾರ್ಚ್ 3 'ರಕ್ತ ಚಂದ್ರ' 

2026 ರ ಹೋಳಿ ಹಬ್ಬವನ್ನು ನಿಜವಾಗಿಯೂ ಅಪರೂಪವಾಗಿಸುವುದು ಮಾರ್ಚ್​ 3 ರಂದು ಸಂಭವಿಸುವ ಚಂದ್ರಗ್ರಹಣ. ಈ ಹಿಂದೆ 2024-25 ರಲ್ಲಿ ಚಂದ್ರಗ್ರಹಣವು ಭಾರತದಲ್ಲಿ ಸಂಭವಿಸಲಿಲ್ಲ. ಹಾಗಾಗಿ ಯಾವುದೇ ನಕರಾತ್ಮಕ ಫಲಿತಾಂಶಗಳು ಬೀರಲಿಲ್ಲ. ಆದರೆ, ಈ ಬಾರಿಯ ಚಂದ್ರಗ್ರಹಣವು ದೇಶಾದ್ಯಂತ ಸ್ಪಷ್ಟವಾಗಿ ಗೋಚರಿಸಲಿದೆ.
 ಗ್ರಹಣಕ್ಕೆ ಸರಿಸುಮಾರು ಒಂಬತ್ತು ಗಂಟೆಗಳ ಮೊದಲು ಸೂತಕ ಅವಧಿ ಪ್ರಾರಂಭವಾಗುತ್ತದೆ. ಇದು ಮಧ್ಯಾಹ್ನ 3:19 ರಿಂದ ಸಂಜೆ 6:47 ರವರೆಗೆ ಸಂಭವಿಸುತ್ತದೆ.
ಮಾರ್ಚ್ 3ಕ್ಕೆ ಯಾಕಿಲ್ಲ ಹೋಳಿ? 24 ಗಂಟೆಗಳ ಗ್ಯಾಪ್ ಹಿಂದಿರೋ ರಹಸ್ಯ ಇಲ್ಲಿದೆ!
ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂತಕ ಮತ್ತು ಗ್ರಹಣದ ಸಮಯದಲ್ಲಿ ಹಬ್ಬಗಳ ಆಚರಣೆ, ಆಹಾರ ಸೇವಿಸುವುದು ಮತ್ತು ಬಣ್ಣಗಳೊಂದಿಗೆ ಆಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಈ ಸಮಯವನ್ನು ಆಧ್ಯಾತ್ಮಿಕ ಅಭ್ಯಾಸಗಳು ಮತ್ತು ಭಕ್ತಿಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಆ ದಿನದಂದು ಬಣ್ಣದ ಹಬ್ಬವನ್ನು ಆಚರಿಸಲಾಗುವುದಿಲ್ಲ.

ಏನಿದು 'ರಕ್ತ ಚಂದ್ರ' ?

ಪೂರ್ಣ ಚಂದ್ರಗ್ರಹಣದ ಸಮಯದಲ್ಲಿ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಅಡ್ಡ ಬರುತ್ತಾನೆ. ಆಗ ಸೂರ್ಯನ ಕಿರಣಗಳು ನೇರವಾಗಿ ಚಂದ್ರನ ಮೇಲೆ ಬೀಳುವುದಿಲ್ಲ. ಬದಲಾಗಿ, ಭೂಮಿಯ ವಾತಾವರಣದ ಮೂಲಕ ಹಾದು, ಬೆಳಕನ್ನು ಚದುರಿ ಕೆಂಪು ಬಣ್ಣದ ಕಿರಣಗಳು ಚಂದ್ರನ ಮೇಲೆ ಬೀಳುತ್ತವೆ. ಇದರಿಂದ ಚಂದ್ರನು ತಾಮ್ರದ ಅಥವಾ ರಕ್ತದ ಕೆಂಪು ಬಣ್ಣದಲ್ಲಿ ಕಾಣಿಸುತ್ತಾನೆ.

ಹೋಳಿ ಆಚರಣೆ

ಗ್ರಹಣ ಮುಗಿದ ಮರುದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ, ಬುಧವಾರವನ್ನು ಬುಧನು ಆಳುತ್ತಾನೆ ಎನ್ನಲಾಗಿದೆ. ಇದು ಬುದ್ಧಿಶಕ್ತಿ, ಮಾತು ಮತ್ತು ಹಾಸ್ಯಕ್ಕೆ ಸಂಬಂಧಿಸಿದ ಗ್ರಹವಾಗಿದೆ. ಗ್ರಹಣದ ಪ್ರಭಾವ ಬಿದ್ದ ನಂತರ ಹೋಳಿ ಆಚರಿಸುವುದರಿಂದ ಸಂತೋಷ ಮತ್ತು ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ ಎಂದು ಜ್ಯೋತಿಷಿಗಳು ನಂಬುತ್ತಾರೆ.

ಗ್ರಹಣದ ಸಮಯದಲ್ಲಿ ಮತ್ತು ನಂತರ ಏನು ಮಾಡಬೇಕು

ಗ್ರಹಣದ ಸಮಯದಲ್ಲಿ ಮಾಡುವ ಮಂತ್ರ ಪಠಣ ಅಥವಾ ಧ್ಯಾನಕ್ಕೆ ಸಾವಿರ ಪಟ್ಟು ಹೆಚ್ಚು ಫಲ ಇರುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಭಕ್ತರು ಈ ಸಮಯದಲ್ಲಿ ವಿಗ್ರಹಗಳನ್ನು ಮುಟ್ಟಬಾರದು ಮತ್ತು ಶುದ್ಧತೆಯನ್ನು ಕಾಪಾಡಿಕೊಳ್ಳಲು ಆಹಾರದಲ್ಲಿ ತುಳಸಿ ಎಲೆಗಳನ್ನು ಸೇರಿಸಬೇಕೆಂದು ಸೂಚಿಸಲಾಗಿದೆ.
ಮಾರ್ಚ್ 4 ರಂದು, ಹೋಳಿ ಆಡುವ ಮೊದಲು, ಮನೆಯಲ್ಲಿ ಗಂಗಾಜಲ ಸಿಂಪಡಿಸಿ, ಧಾರ್ಮಿಕ ಸ್ನಾನ ಮಾಡಿ, ಆಚರಣೆಗಳನ್ನು ಪ್ರಾರಂಭಿಸಬೇಕು ಎಂದು ಜ್ಯೋತಿಷ್ಯ ತಿಳಿಸಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net