ಸತತ ಒಂಬತ್ತನೇ ದಿನವೂ ಮುಂದುವರೆದ ಚಿನ್ನದ ಬೆಲೆ ಕುಸಿತ; ಇಂದು 10 ಗ್ರಾಂಗೆ 5,638 ಕಡಿಮೆ, ಹೊಸ ದರವೆಷ್ಟು? | Gold price

ಭಾರತದ ಮಾರುಕಟ್ಟೆಯಲ್ಲಿ ಸತತ ಒಂಬತ್ತನೇ ದಿನವೂ ಚಿನ್ನದ ಬೆಲೆ ಭಾರೀ ಕುಸಿತ ಕಂಡಿದ್ದು, ಶುಕ್ರವಾರ(ನ. 20) ಪ್ರತಿ 10 ಗ್ರಾಂಗೆ ₹1,29,531 ಕ್ಕಿಂತ ₹5,638 ಕಡಿಮೆಯಾಗಿ, ಚಿನ್ನವು ಪ್ರತಿ 10 ಗ್ರಾಂಗೆ ₹1,23,893 ರಲ್ಲಿ ಮುಕ್ತಾಯಗೊಂಡಿದೆ. ಬೆಳ್ಳಿ ಬೆಲೆಯೂ ಸತತ ಏಳನೇ ದಿ ಕುಸಿತ ಕಂಡಿದ್ದು, ಖರೀದಿದಾರರಿಗೆ ತುಸು ನಿರಾಳ ನೀಡಿವೆ.
ವಿಜಯವಾಣಿ (59)
Published on: 

Gold price: ಭಾರತದ ಮಾರುಕಟ್ಟೆಯಲ್ಲಿ ಸತತ ಒಂಬತ್ತನೇ ದಿನವೂ ಚಿನ್ನದ ಬೆಲೆ ಭಾರೀ ಕುಸಿತ ಕಂಡಿದ್ದು, ಶುಕ್ರವಾರ(ನ. 20) ಪ್ರತಿ 10 ಗ್ರಾಂಗೆ ₹1,29,531 ಕ್ಕಿಂತ ₹5,638 ಕಡಿಮೆಯಾಗಿ, ಚಿನ್ನವು ಪ್ರತಿ 10 ಗ್ರಾಂಗೆ ₹1,23,893 ರಲ್ಲಿ ಮುಕ್ತಾಯಗೊಂಡಿದೆ. ಬೆಳ್ಳಿ ಬೆಲೆಯೂ ಸತತ ಏಳನೇ ದಿ ಕುಸಿತ ಕಂಡಿದ್ದು, ಖರೀದಿದಾರರಿಗೆ ತುಸು ನಿರಾಳ ನೀಡಿವೆ.

ಐಬಿಜೆಎ (IBJA) ದತ್ತಾಂಶದ ಪ್ರಕಾರ, ಗುರುವಾರ ಪ್ರತಿ 10 ಗ್ರಾಂಗೆ ₹1,29,531 ಇದ್ದ ಚಿನ್ನದ ದರವು ಶುಕ್ರವಾರ ₹5,638 ಕಡಿಮೆಯಾಗಿ ₹1,23,893 ರಲ್ಲಿ ಮುಕ್ತಾಯವಾಗಿದೆ. ಪ್ರಸಕ್ತ ಕುಸಿತದಿಂದ ಚಿನ್ನವು ಕಳೆದ ಒಂದು ವರ್ಷದ ಅವಧಿಯ ಕನಿಷ್ಠ ಮಟ್ಟದ ಆಸುಪಾಸಿಗೆ ಬಂದಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯು ಸತತ ಏಳನೇ ದಿನವೂ ಇಳಿಕೆ ಕಂಡಿದ್ದು, ಪ್ರತಿ ಕಿಲೋಗ್ರಾಂಗೆ ₹7,911 ಕುಸಿದು ₹1,52,528 ರಲ್ಲಿ ಕೊನೆಗೊಂಡಿದೆ.

Also Read
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಕಾನೂನು ನೋಟಿಸ್ ಕಳುಹಿಸಿದ ಅದಾನಿ ಗ್ರೂಪ್ | Mahua Moitra
ವಿಜಯವಾಣಿ (59)

ಬೆಲೆ ಕುಸಿತಕ್ಕೆ ಕಾರಣವೇನು?

ಅಮೆರಿಕದ ಡಾಲರ್ ಮೌಲ್ಯದ ಬಲವರ್ಧನೆ, ಹೂಡಿಕೆದಾರರಿಂದ ಲಾಭದ ನಗದೀಕರಣ ಹಾಗೂ ಜಾಗತಿಕ ಮಾರುಕಟ್ಟೆಯ ಬದಲಾವಣೆಗಳ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳ ಮೇಲೆ ಒತ್ತಡ ಉಂಟಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ (ಏಜೆನ್ಸೀಸ್).