'ನನ್ನ ಅಜ್ಜಿ ನಿಧನರಾಗಿದ್ದಾರೆ, ಕುಟುಂಬಸ್ಥರೊಂದಿಗೆ ಇರಬೇಕು'; ಪ್ರೊಟೆಸ್ಟ್​ನಿಂದ ತಾತ್ಕಾಲಿಕ ಬ್ರೇಕ್ ತಗೊಂಡ CJP ಮುಖ್ಯಸ್ಥ Abhijeet Dipke

Abhijeet Dipke ಸಂಗ್ರಹ ಚಿತ್ರ
Abhijeet Dipke ಸಂಗ್ರಹ ಚಿತ್ರ
Published on: 
  • ಅಜ್ಜಿ ನಿಧನರಾಗಿದ್ದಾರೆ, ನಾನು ಕುಟುಂಬಸ್ಥರೊಟ್ಟಿಗೆ ಇರಬೇಕು ಎಂದು ದೀಪ್ಕೆ ಪೋಸ್ಟ್​​.

  • ಜ್ಞಾನೇಶ್ ಕುಮಾರ್ ರಾಜೀನಾಮೆ ವಿರುದ್ಧ ನಡೆಯುತ್ತಿರುವ ಪ್ರೊಟೆಸ್ಟ್​ನಿಂದ ದೀಪ್ಕೆ ತಾತ್ಕಾಲಿಕ ದೂರ.

  • ಸಿಜೆಪಿ ಮುಂದಿನ ನಿರ್ಧಾರದ ಬಗ್ಗೆ ಸೌರವ್ ಮತ್ತು ಅಶುತೋಷ್​ ಸುದ್ದಿಗೋಷ್ಠಿ.

'ನನ್ನ ಅಜ್ಜಿ ಇಹಲೋಕ ತ್ಯಜಿಸಿದ್ದಾರೆ. ಇಂತಹ ಸಮಯದಲ್ಲಿ ನಾನು ನನ್ನ ಕುಟುಂಬಸ್ಥರೊಂದಿಗೆ ಇರಬೇಕು. ನಾನು ನಮ್ಮ ಹಳ್ಳಿಗೆ ವಾಪಸ್ ಹೊರಟಿದ್ದೇನೆ. ಸೌರವ್ ಮತ್ತು ಅಶುತೋಷ್​ ಅವರು ದೆಹಲಿಯಲ್ಲಿ ಕೆಲವೇ ಕ್ಷಣಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಅಕ್ಟೋಬರ್ 10 ಈ ದಿನ ಸರ್ವಾಧಿಕಾರದ ಅಂತ್ಯದ ಆರಂಭವಾಗಿ ಇತಿಹಾಸದಲ್ಲಿ ಉಳಿಯಲಿದೆ' ಎಂದು ಕಾಕ್ರೋಚ್​ ಜನತಾ ಪಾರ್ಟಿಯ ಮುಖ್ಯಸ್ಥ ಅಭಿಜಿತ್​ ದೀಪ್ಕೆ ಅವರು ಬರೆದುಕೊಂಡಿದ್ದಾರೆ.

ಅಭಿಜಿತ್​ ದೀಪ್ಕೆ ಅಜ್ಜಿ ಸಾವಿತ್ರಿಬಾಯಿ ಶಂಕರರಾವ್ ದೀಪ್ಕೆ (85) ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಿಧನರಾದರು ಅವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ನಡೆಯಿತು. ಆದರೆ, ದೆಹಲಿ ಪೊಲೀಸರ ವಶದಲ್ಲಿದ್ದ ದೀಪ್ಕೆ ಭಾಗಿಯಾಗಲು ಸಾಧ್ಯವಾಗಲಿಲ್ಲ. ಕುಟುಂಬಸ್ಥರು ಪದೇ ಪದೆ ಪೊಲೀಸರ ಬಳಿ ಮನವಿ ಮಾಡಿಕೊಂಡರು ಕ್ಯಾರೆ ಎನ್ನಲಿಲ್ಲ ಎಂದು ಆರೋಪಿಸಿದ್ದಾರೆ.

ಏನಂದ್ರು ಕುಟುಂಬಸ್ಥರು?

'ಅಭಿಜಿತ್​ ಅಜ್ಜಿ ನಿಧನರಾದ ಬಳಿಕ ಅವರನ್ನು ಬಿಡುಗಡೆ ಮಾಡುವಂತೆ ನಾವು ದೆಹಲಿ ಪೊಲೀಸರನ್ನು ಹಲವು ಬಾರಿ ವಿನಂತಿಸಿದ್ದೇವೆ ಆದರೆ ಅವರು ಅವರನ್ನು ಬಿಡುಗಡೆ ಮಾಡಲಿಲ್ಲ' ಎಂದು ಕುಟುಂಬದ ಸದಸ್ಯರೊಬ್ಬರು ಅಂತ್ಯಕ್ರಿಯೆಯ ಮೊದಲು ಸುದ್ದಿಗಾರರಿಗೆ ತಿಳಿಸಿದರು.

ದೆಹಲಿ ಪೊಲೀಸರು ಹೀಗಂದ್ರು

ದೆಹಲಿ ಪೊಲೀಸರು ಶನಿವಾರ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದು, ಅಭಿಜಿತ್ ಗೆ ತನ್ನ ಅಜ್ಜಿಯ ಸಾವು ಮತ್ತು ಅಂತ್ಯಕ್ರಿಯೆಯ ಸಮಯದ ಬಗ್ಗೆ ತಕ್ಷಣವೇ ತಿಳಿಸಲಾಯಿತು. ಅಭಿಜಿತ್​ ಊರಿಗೆ ಪ್ರಯಾಣಿಸಲು ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ದೀಪ್ಕೆ ಹೇಳಿದ್ದಿಷ್ಟು

ಹಿರಿಯ ವಕೀಲರು ಮತ್ತು ರಾಜ್ಯಸಭಾ ಸಂಸದರಾದ ಕಪಿಲ್ ಸಿಬಲ್ ಅವರ ನಿವಾಸದಿಂದ ಹೊರಕ್ಕೆ ಬಂದ ಅಭಿಜಿತ್​ ದೀಪ್ಕೆ ಅವರು ತಮ್ಮ ಅಜ್ಜಿಯನ್ನು ಕಳೆದುಕೊಂಡ ಬಗ್ಗೆ ಹಾಗೂ ಆ ಮೂಲಕ ತಾವು ಪ್ರತಿಭಟನೆಯಲ್ಲಿ ಭಾಗಿಯಾಗಲು ಸಾಧ್ಯವಾಗದ ಬಗ್ಗೆ ಪ್ರಸ್ತಾಪಿಸಿದರು.

ಜ್ಞಾನೇಶ್ ಕುಮಾರ್ ರಕ್ಷಣೆ ಮಾಡ್ತಿರೋದ್ಯಾಕೆ?

'ನನ್ನ ಅಜ್ಜಿ ನಿಧನರಾಗಿರುವುದರಿಂದ ನಾನು ಈಗ ನನ್ನ ಕುಟುಂಬಸ್ಥರೊಂದಿಗೆ ಇರಲು ಮನೆಗೆ ಹೋಗುತ್ತಿದ್ದೇನೆ. ಅಶುತೋಷ್ ಮತ್ತು ಸೌರವ್ ಮಧ್ಯಾಹ್ನ 2 ಗಂಟೆಗೆ ಪತ್ರಿಕಾ ಗೋಷ್ಠಿಯನ್ನು ನಡೆಸಿ ಮುಂದಿನ ಕಾರ್ಯದ ಬಗ್ಗೆ ಮಾತನಾಡುತ್ತಾರೆ. ಅ.10ರಂದು ದೆಹಲಿಯಲ್ಲಿ ಏನಾಯ್ತು ಎನ್ನುವುದನ್ನು ಇಡೀ ಜಗತ್ತು ನೋಡಿದೆ. ಸರ್ಕಾರ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಇಡೀ ದೆಹಲಿಯನ್ನು ಸ್ತಬ್ಧಗೊಳಿಸಿತು. ಜ್ಞಾನೇಶ್ ಕುಮಾರ್ ಅವರಲ್ಲಿ ಅಂತಹ ವಿಶೇಷತೆಯೇನಿದೆ, ಅವರನ್ನು ರಕ್ಷಿಸುವುದಕ್ಕಾಗಿ ನೀವು ನಿನ್ನೆ ಲಕ್ಷಾಂತರ ಜನರಿಗೆ ತೊಂದರೆ ನೀಡಿದ್ದು ಯಾಕೆ' ಎಂದು ಪ್ರಶ್ನೆ ಮಾಡಿದರು

ಸಿಜೆಪಿ ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಮಧ್ಯಾಹ್ನ 2 ಗಂಟೆಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ಮುಂದಿನ ನಿರ್ಧಾರ ಏನು. ಬಂಧನ, ಬಸ್ ಮೆಟ್ರೋ ನಿರ್ಬಂಧಗಳ ಕ್ರಮವನ್ನು ಮುಂದಿಟ್ಟುಕೊಂಡು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಲಿದ್ದಾರೆ'=.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಲ್ಲಿ ಅಕ್ರಮಗಳು,ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದು ಕಾಕ್ರೋಚ್​ ಜನತಾ ಪಾರ್ಟಿ 'ಜಂತರ್ ಮಂತರ್ 2.0' ಪ್ರತಿಭಟನೆಗೆ ಕರೆ ನೀಡಿತ್ತು. ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯ ಕಾಳಜಿಯನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಪ್ರೊಟೆಸ್ಟ್​ಗೆ ಅನುಮತಿ ನಿರಾಕರಿಸಿದ್ದರು. ಶನಿವಾರ ಅಭಿಜಿತ್​, ಸೌರವ್​ ಹಾಗೂ ಆಶುತೋಷ್​ರನ್ನು ವಶಕ್ಕೆ ಪಡೆದುಕೊಂಡರು. ಈ ಮೂವರನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net