ಮುಂದುವರೆದು,'ಇಂತಹ ಜಾಹೀರಾತಿಗೆ ಚೆನ್ನೈ ಮೆಟ್ರೋ ರೈಲು ಆಡಳಿತ ಮಂಡಳಿಯು ಹೇಗೆ ಅನುಮತಿ ನೀಡಿತು ಎಂಬುದು ಪ್ರಶ್ನಾರ್ಹವಾಗಿದೆ. ಈ ಜಾಹೀರಾತನ್ನು ಕೂಡಲೇ ತೆರವುಗೊಳಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಜಾಹೀರಾತುಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ. ಪ್ರತಿನಿತ್ಯ ಚೆನ್ನೈ ಮೆಟ್ರೋವನ್ನು ಹಲವರು ಬಳಕೆ ಮಾಡುತ್ತಾರೆ. ಇಂತಹ ಜಾಹೀರಾತು ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ' ಎಂದು ಡಿಎಂಕೆ ಸಂಸದೆ ತಮಿಳಚಿ ತಂಗಪಾಂಡಿಯನ್(ಟಿ ಸುಮತಿ) ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಎಐಎಡಿಎಂಕೆ ವಕ್ತಾರ ಕಿಡಿ
ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಈ ಪೋಸ್ಟರ್ ವಿರುದ್ಧ ಕಿಡಿಕಾರಿದ್ದಾರೆ. 'ಇಂತಹ ಜಾಹೀರಾತಿಗೆ ಅನುಮತಿ ಕೊಟ್ಟವರ ವಿರುದ್ಧ ಕಾನೂನು ಕ್ರಮವಾಗಬೇಕು' ಎಂದು ಆಗ್ರಹಿಸಿದ್ದಾರೆ. 'ಜಾಹೀರಾತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದ ಮಾತ್ರಕ್ಕೆ..ಲಿಂಗದ ಆಧಾರ ಮೇಲೆ ಯಾರನ್ನಾದರೂ ಕೀಳಾಗಿ ಕಾಣುವ ಮಟ್ಟಕ್ಕೆ ಇಳಿಯೋದು ಸರಿಯಲ್ಲ' ಎಂದು ಹೇಳಿದರು.
'ನೀವು ನಿಮ್ಮ ಗ್ರಾಹಕರನ್ನು ಸೆಳೆಯುವ ಸಲುವಾಗಿ ಬೇರೆಯವರನ್ನು ಕೀಳಾಗಿ ತೋರ್ಪಡಿಸಿ..ಲಿಂಗಬೇಧ ಅಥವಾ ಅವರನ್ನು ಕೆಟ್ಟದಾಗಿ ಚಿತ್ರಿಸಿ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವುದು ಸರಿಯಾದ ವಿಧಾನವಲ್ಲ' ಎಂದು ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಗುಡುಗಿದರು, (ಏಜೆನ್ಸೀಸ್)