ಗಂಗೆಯಲ್ಲಿ ಮುಳುಗುತ್ತಿದ್ದ ತಂದೆ–ಮಕ್ಕಳು; ದೇವರಂತೆ ಬಂದು ಜೀವ ಉಳಿಸಿದ ರಿಯಲ್ ಹೀರೋ | Ganga River Rescue

ಗಂಗಾ ನದಿಗೆ ಬಿದ್ದ ಮೂವರ ಜೀವ ಉಳಿಸಿದ ವ್ಯಕ್ತಿ
ಗಂಗಾ ನದಿಗೆ ಬಿದ್ದ ಮೂವರ ಜೀವ ಉಳಿಸಿದ ವ್ಯಕ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಗಂಗಾ ಸ್ನಾನದ ವೇಳೆ ನೀರಿನ ಸುಳಿಗೆ ಸಿಲುಕಿದ ತಂದೆ-ಮಕ್ಕಳು
  • ಮಗಳನ್ನು ಕಾಪಾಡಲು ಹೋಗಿ ನೀರಿಗೆ ಬಿದ್ದ ತಂದೆ
  • ದೇವರಂತೆ ಬಂದು ಮೂವರ ಜೀವ ಉಳಿಸಿದ ರಿಯಲ್ ಹೀರೋ
ಉತ್ತರ ಪ್ರದೇಶ: ಗಂಗಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ತಂದೆ ಹಾಗೂ ಇಬ್ಬರು ಬಾಲಕಿಯರು ನೀರಿನ ಸುಳಿಗೆ ಸಿಲುಕಿ ಮುಳುಗುತ್ತಿದ್ದ ವೇಳೆ, ಸ್ಥಳೀಯರೊಬ್ಬರು ತಮ್ಮ ಪ್ರಾಣದ ಹಂಗು ತೊರೆದು ನದಿಗೆ ಧುಮುಕಿ ಮೂವರನ್ನೂ ರಕ್ಷಿಸಿರುವ ಘಟನೆ ಉನ್ನಾವೋ ಜಿಲ್ಲೆಯ ಶುಕ್ಲಾಗಂಜ್‌ನಲ್ಲಿ ನಡೆದಿದೆ.
ಶುಕ್ಲಾಗಂಜ್‌ನ ಆನಂದ್ ಘಾಟ್‌ನಲ್ಲಿ ಸ್ಥಳೀಯ ನಿವಾಸಿ ದೀಪಕ್ ಸವಿತಾ (38) ಮತ್ತು ಅವರ ಮಗಳು ಪ್ರಜ್ಞಾ(10) ಹಾಗೂ ಸೋದರ ಸೊಸೆ ಭೂಮಿ(12) ಜೊತೆ ಗಂಗಾ ಸ್ನಾನಕ್ಕೆ ಬಂದಿದ್ದರು. ಸ್ನಾನದ ವೇಳೆ ಮೆಟ್ಟಿಲುಗಳ ಬಳಿ ಪ್ರಜ್ಞಾಳ ಕಾಲು ಜಾರಿ ಆಳವಾದ ನೀರಿಗೆ ಬಿದ್ದಿದ್ದಾಳೆ. ಮಗಳನ್ನು ರಕ್ಷಿಸಲು ದೀಪಕ್ ಕೂಡಲೇ ನದಿಗೆ ಧುಮುಕಿದ್ದಾರೆ. ಇದೇ ವೇಳೆ ಭೂಮಿಯೂ ನೀರಿಗೆ ಬಿದ್ದಿದ್ದಾಳೆ.

ನೀರಿಗೆ ಬಿದ್ದ ತಂದೆ–ಇಬ್ಬರು ಮಕ್ಕಳು

ನದಿಯಯಲ್ಲಿ ಭಾರೀ ನೀರಿನ ಹರಿವು ಇದ್ದ ಕಾರಣ ತಂದೆ–ಇಬ್ಬರು ಮಕ್ಕಳು ಅಪಾಯಕ್ಕೆ ಸಿಲುಕಿದ್ದರು. ಮೂವರ ಕಿರುಚಾಟ ಕೇಳುತ್ತಿದ್ದಂತೆ ಘಾಟ್‌ನಲ್ಲಿದ್ದ ಸ್ಥಳೀಯ ಪಂಡಾ ರಾಜು ಪಾಂಡಾ ಅಲಿಯಾಸ್​ ಆಯುಷ್ ತಿವಾರಿ ಕ್ಷಣವೂ ತಡ ಮಾಡದೆ ಗಂಗಾ ನದಿಗೆ ಹಾರಿದ್ದಾರೆ.

ಜೀವದ ಹಂಗು ತೊರೆದು ರಕ್ಷಣೆ


ಜೀವದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆ ನಡೆಸಿದ ರಾಜು ಪಾಂಡಾ ಮೊದಲು ಇಬ್ಬರು ಬಾಲಕಿಯರನ್ನು ಒಬ್ಬೊಬ್ಬರಾಗಿ ದಡಕ್ಕೆ ತಲುಪಿಸಿದ್ದಾರೆ. ಆಮೇಲೆ ನೀರಿನಲ್ಲಿ ಮುಳುಗುತ್ತಿದ್ದ ದೀಪಕ್ ಅವರನ್ನೂ ಸುರಕ್ಷಿತವಾಗಿ ದಂಡಗೆ ತಂದಿದ್ದಾರೆ ಜತೆಗೆ ಸ್ಥಳೀಯರ ನೆರವಿನಿಂದ ಮೂವರ ಪ್ರಾಣ ಉಳಿಸಿದ್ದಾರೆ.

ಪಾಂಡಾ ಧೈರ್ಯಕ್ಕೆ ಭಾರೀ ಮೆಚ್ಚುಗೆ

ಈ ಸಾಹಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಾಯದ ಸಂದರ್ಭದಲ್ಲಿ ಕ್ಷಣವೂ ಯೋಚಿಸದೆ ನದಿಗೆ ಧುಮುಕಿ ಮೂವರ ಜೀವ ಉಳಿಸಿದ ರಾಜು ಪಾಂಡಾ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸರಿಯಾದ ನಮಯಕ್ಕೆ ನೆರವು ಸಿಕ್ಕಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net