ಹೈದರಾಬಾದ್‌ನಲ್ಲಿ 26/11ರ ಮುಂಬೈ ಮಾದರಿ ದಾಳಿಯ ಇಮೇಲ್ ಬೆದರಿಕೆ; ಕನಿಷ್ಠ 300 ಜನ ಕೊಲ್ಲುವ ಸಂದೇಶ: ನಗರದಾದ್ಯಂತ ಕಟ್ಟೆಚ್ಚರ | Hyderabad

ತೆಲಂಗಾಣದ ರಾಜಧಾನಿ ಹೈದರಾಬಾದ್​ನಲ್ಲಿ ಭಾನುವಾರ(ನ. 22) 26/11ರ ಮುಂಬೈ ಮಾದರಿಯ ಭಯೋತ್ಪಾದಕ ದಾಳಿ ನಡೆಸುವುದಾಗಿ ಇಮೇಲ್ ಬೆದರಿಕೆ ಬಂದಿದ್ದು, ಕನಿಷ್ಠ 300 ಜನರನ್ನು ಕೊಲ್ಲುವುದಾಗಿ ಸಂದೇಶ ಕಳಿಸಲಾಗಿದೆ. ಈ ಹಿನ್ನೆಲೆ ನಗರದಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ ಎಂದು ವರದಿಯಾಗಿದೆ.
ಹೈದರಾಬಾದ್‌ನಲ್ಲಿ 26/11ರ ಮುಂಬೈ ಮಾದರಿ ದಾಳಿಯ ಇಮೇಲ್ ಬೆದರಿಕೆ; ಕನಿಷ್ಠ 300 ಜನ ಕೊಲ್ಲುವ ಸಂದೇಶ: ನಗರದಾದ್ಯಂತ ಕಟ್ಟೆಚ್ಚರ | Hyderabad
Published on: 

ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್​ನಲ್ಲಿ ಭಾನುವಾರ(ನ. 22) 26/11ರ ಮುಂಬೈ ಮಾದರಿಯ ಭಯೋತ್ಪಾದಕ ದಾಳಿ ನಡೆಸುವುದಾಗಿ ಇಮೇಲ್ ಬೆದರಿಕೆ ಬಂದಿದ್ದು, ಕನಿಷ್ಠ 300 ಜನರನ್ನು ಕೊಲ್ಲುವುದಾಗಿ ಸಂದೇಶ ಕಳಿಸಲಾಗಿದೆ. ಈ ಹಿನ್ನೆಲೆ ನಗರದಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ ಎಂದು ವರದಿಯಾಗಿದೆ.

'ಲಷ್ಕರ್-ಎ-ತೈಬಾ' (LeT) ಹೆಸರಿನಲ್ಲಿ ಅಧಿಕಾರಿಗಳಿಗೆ ಇಮೇಲ್ ಬಂದಿದ್ದು, ಕಳುಹಿಸಿದ ವ್ಯಕ್ತಿಯು ತಾನು ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಗೆ ಸೇರಿದವನೆಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಕಚಿಗುಡದಲ್ಲಿರುವ 'ಹೋಟೆಲ್ ಟೂರಿಸ್ಟ್ ಪ್ಲಾಜಾ' ಮತ್ತು ಕಚಿಗುಡ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಿ, ಕನಿಷ್ಠ 300 ಜನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಭಾರತೀಯ ಸೇನೆಯು ತಮ್ಮ ನಾಯಕ ಲತೀಫ್ ಭಟ್ ಮತ್ತು ಆತನ ಸಹಚರರನ್ನು ಕೊಂದಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸುವುದಾಗಿ ತಿಳಿಸಿರುವ ಆ ವ್ಯಕ್ತಿ, 2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನೇ ಹೈದರಾಬಾದ್‌ನಲ್ಲಿ ಮರುಕಳಿಸುವುದಾಗಿ ಬೆದರಿಕೆ ಹಾಕಿದ್ದಾನೆ.

Also Read
ಮಿಲಿಟರಿ ತರಬೇತಿ ಸಮಯದಲ್ಲಿ ಅವಘಡ: ಆಕಸ್ಮಿಕವಾಗಿ ಸೇನಾ ಟ್ಯಾಂಕ್ ಹರಿದು ಇಬ್ಬರು ಸೈನಿಕರು ದುರ್ಮರಣ | army tank
ಹೈದರಾಬಾದ್‌ನಲ್ಲಿ 26/11ರ ಮುಂಬೈ ಮಾದರಿ ದಾಳಿಯ ಇಮೇಲ್ ಬೆದರಿಕೆ; ಕನಿಷ್ಠ 300 ಜನ ಕೊಲ್ಲುವ ಸಂದೇಶ: ನಗರದಾದ್ಯಂತ ಕಟ್ಟೆಚ್ಚರ | Hyderabad

ಈ ಕುರಿತು ಮಾತನಾಡಿರುವ ಹೈದರಾಬಾದ್ ಪೊಲೀಸ್ ಆಯುಕ್ತ ಮಹೇಶ್ ಮುರಳೀಧರ್ ಭಾಗವತ್ ಅವರು, ಬೆದರಿಕೆ ಇಮೇಲ್ ಬಂದ ಬಳಿಕ ಮುನ್ನೆಚ್ಚರಿಕೆ ಭದ್ರತಾ ಕ್ರಮಗಳನ್ನು ತಕ್ಷಣವೇ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ವದಂತಿಗಳನ್ನು ನಂಬದಂತೆ ಹೇಳಿದ್ದಾರೆ.

ಇನ್ನೂ ಶಂಕಿತ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯಗಳ ವಿರುದ್ಧ ತಪಾಸಣೆ ನಡೆಸಲಾಗಿದ್ದು, ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗೋಚರ ಪೊಲೀಸ್ ವ್ಯವಸ್ಥೆಯನ್ನು ತೀವ್ರಗೊಳಿಸಲಾಗಿದೆ.

ಇಮೇಲ್ ಹಿಂದಿನ ದುಷ್ಕರ್ಮಿಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಸೈಬರ್ ಅಪರಾಧ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಗಮನಿಸದ ವಸ್ತುಗಳನ್ನು ಗಮನಿಸಿದರೆ ಜನರು ತಕ್ಷಣ 112 ಗೆ ಕರೆ ಮಾಡುವ ಮೂಲಕ ಪೊಲೀಸರಿಗೆ ತಿಳಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ (ಏಜೆನ್ಸೀಸ್).