9.5 ಲಕ್ಷದ ಕಾರು ಬೇಡ, 13 ಲಕ್ಷದ ಕಾರೇ ಬೇಕೆಂದು ಮದುವೆ ಕ್ಯಾನ್ಸಲ್; ಕಾನ್ಸ್​ಟೇಬಲ್​ ಸಸ್ಪೆಂಡ್ ಮಾಡಿದ ಪೊಲೀಸ್ ಇಲಾಖೆ | Suspended

ದೆಹಲಿಯ ಔಟರ್ ನಾರ್ತ್ ಜಿಲ್ಲೆಯಲ್ಲಿ ಕಾನ್ಸ್​ಟೇಬಲ್ ಆಗಿ ಕೆಲಸ ಮಾಡ್ತಿರುವ ಕುಲದೀಪ್ ಎಂಬ ವ್ಯಕ್ತಿ​ ತಾನು ಕೇಳಿದಷ್ಟು ಬೆಲೆಬಾಳುವ ಐಷಾರಾಮಿ ಕಾರು ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮದುವೆ ಮಂಟಪಕ್ಕೆ ಬಂದಿದ್ದ ವರ, ವಧು ಮತ್ತು ಅವರ ಕುಟುಂಬದವರನ್ನು ಅವಮಾನಿಸಿ ಮದುವೆಯನ್ನೇ ಮುರಿದುಕೊಂಡು ಹೊರನಡೆದಿದ್ದನು.
Policeman
9.5 ಲಕ್ಷದ ಕಾರು ಬೇಡ, 13 ಲಕ್ಷದ ಕಾರೇ ಬೇಕಂತೆ: ಮದುವೆ ಮಂಟಪದಲ್ಲೇ ವಧುವಿಗೆ ಕೈಕೊಟ್ಟು ಹೋದ ಪೊಲೀಸ್ ಪೇದೆ..!
Published on: 

ನವದೆಹಲಿ: ಇತ್ತೀಚೆಗೆ ನ. 20ರಂದು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ವರದಕ್ಷಿಣೆ ಎಂಬ ಅನಿಷ್ಟ ಪದ್ಧತಿಯನ್ನು ತಡೆಯಬೇಕಾದ ಪೊಲೀಸ್ ಅಧಿಕಾರಿಯೇ ವರದಕ್ಷಿಣೆ ದಾಹಕ್ಕೆ ಬಿದ್ದು ಮದುವೆ ಮಂಟಪದಲ್ಲೇ ವಧುವಿಗೆ ಕೈಕೊಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿತ್ತು.

ದೆಹಲಿಯ ಔಟರ್ ನಾರ್ತ್ ಜಿಲ್ಲೆಯಲ್ಲಿ ಕಾನ್ಸ್​ಟೇಬಲ್ ಆಗಿ ಕೆಲಸ ಮಾಡ್ತಿರುವ ಕುಲದೀಪ್ ಎಂಬ ವ್ಯಕ್ತಿ​ ತಾನು ಕೇಳಿದಷ್ಟು ಬೆಲೆಬಾಳುವ ಐಷಾರಾಮಿ ಕಾರು ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮದುವೆ ಮಂಟಪಕ್ಕೆ ಬಂದಿದ್ದ ವರ, ವಧು ಮತ್ತು ಅವರ ಕುಟುಂಬದವರನ್ನು ಅವಮಾನಿಸಿ ಮದುವೆಯನ್ನೇ ಮುರಿದುಕೊಂಡು ಹೊರನಡೆದಿದ್ದನು.

ಈ ಘಟನೆಯಿಂದ ತೀವ್ರ ನೊಂದಿದ್ದ ವಧುವಿನ ತಂದೆ ಸುಭಾಷ್ ಕುಮಾರ್ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿ, ವರ ಕುಲದೀಪ್ ವಿರುದ್ಧ ದೂರು ದಾಖಲಿಸಿದ್ದಾರೆ. ಈಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸ್ ಇಲಾಖೆ ಕುಲದೀಪ್​ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

Also Read
ಎನ್ವಿಡಿಯಾ ಯೂಟರ್ನ್​: ರಾಜೀನಾಮೆ ವಾಪಸ್, CEO ಸ್ಥಾನಕ್ಕೆ 'ಜೆನ್ಸನ್ ಹುವಾಂಗ್' ಮರುನೇಮಕ! Jensen Huang
Policeman

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಲಾಖೆ, ವರದಕ್ಷಿಣೆ ಬೇಡಿಕೆ ಮತ್ತು ಅದರ ಪರಿಣಾಮವಾಗಿ ವಿವಾಹ ರದ್ದಾದ ಘಟನೆಗೆ ಸಂಬಂಧಿಸಿದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಕಾನ್ಸ್‌ಟೇಬಲ್ ಕುಲ್‌ದೀಪ್ ಅವರ ದುರ್ನಡತೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ, ಇಲಾಖಾ ಕ್ರಮ ಬಾಕಿ ಇರುವವರೆಗೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.

ಘಟನೆಯ ಹಿನ್ನೆಲೆ ಏನು?

ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಲದೀಪ್ ಮತ್ತು ಸುಭಾಷ್ ಕುಮಾರ್ ಅವರ ಪುತ್ರಿ ಹೀನಾ ಅವರ ವಿವಾಹವು ಆರು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ವರನ ಕಡೆಯವರ ಬೇಡಿಕೆಯಂತೆ ವಧುವಿನ ಪೋಷಕರು ಮದುವೆಗಾಗಿ ಈಗಾಗಲೇ 9.5 ಲಕ್ಷ ರೂಪಾಯಿ ಮೌಲ್ಯದ ಕಾರೊಂದನ್ನು ಬುಕ್ ಮಾಡಿದ್ದರು. ಆದರೆ, ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ವರ ಕುಲ್ದೀಪ್ ತನಗೆ 9.5 ಲಕ್ಷದ ಕಾರು ಬೇಡ, 13 ಲಕ್ಷ ರೂಪಾಯಿ ಬೆಲೆಬಾಳುವ ಕಾರೇ ಬೇಕೆಂದು ಹಠ ಹಿಡಿದಿದ್ದಾನೆ.

ವರನ ಈ ದಿಢೀರ್ ಬೇಡಿಕೆಯಿಂದ ಕಂಗಾಲಾದ ವಧುವಿನ ಕುಟುಂಬಸ್ಥರು ತಾವು ಮೊದಲೇ ಬುಕ್ ಮಾಡಿದ್ದ ಕಾರನ್ನು ರದ್ದುಗೊಳಿಸಿ, 13 ಲಕ್ಷದ ಹೊಸ ಕಾರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಇಷ್ಟು ಕಡಿಮೆ ಅವಧಿಯಲ್ಲಿ ಆ ಕಾರು ಲಭ್ಯವಾಗದ ಕಾರಣ ವಧುವಿನ ಮನೆಯವರು ಅಸಹಾಯಕರಾಗಿದ್ದರು.

ಮದುವೆ ನಿಶ್ಚಯವಾದ ದಿನದಿಂದಲೂ ವರನ ಕುಟುಂಬಸ್ಥರು ಕಾರು ಮತ್ತು ಚಿನ್ನಾಭರಣಗಳಿಗಾಗಿ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ವಧುವಿನ ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ವರನಿಗೆ ಎರಡು ಪವನ್ ಚಿನ್ನದ ಸರ, ಆತನ ತಾಯಿಗೆ ನಾಲ್ಕು ಪವನ್ ಕಿವಿಯೋಲೆ, ಬೆಳ್ಳಿಯ ಕಾಲ್ಗೆಜ್ಜೆಗಳ ಜತೆಗೆ ವರನ ಸಹೋದರ ಮತ್ತು ಅತ್ತಿಗೆಗೂ ಚಿನ್ನಾಭರಣಗಳನ್ನು ನೀಡಲು ವಧುವಿನ ಕುಟುಂಬ ಒಪ್ಪಿಕೊಂಡು ಆರ್ಡರ್ ನೀಡಿತ್ತು. ಇದಲ್ಲದೆ, ಸುಮಾರು 1.32 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಸಹ ಖರೀದಿಸಿ ಸಿದ್ಧಪಡಿಸಲಾಗಿತ್ತು. ಮದುವೆಯ ಎಲ್ಲಾ ಸಿದ್ಧತೆಗಳಿಗಾಗಿ ವಧುವಿನ ತಂದೆ ಬರೋಬ್ಬರಿ 25 ರಿಂದ 30 ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡಿದ್ದರು.

Also Read
"ಇದು ಕೊನೆಯ ಎಚ್ಚರಿಕೆ, ಇಲ್ಲಾಂದ್ರೆ ಕೇಸ್ ಹಾಕ್ತೀನಿ" ಯುವರಾಜ್ ಸಿಂಗ್ ತಂದೆ ಹೇಳಿಕೆಗೆ ರೊಚ್ಚಿಗೆದ್ದ ಪೃಥ್ವಿ ಶಾ; ಖಡಕ್ ವಾರ್ನಿಂಗ್! Prithvi Shaw
Policeman

ಮದುವೆಯ ದಿನದಂದು ಸುಮಾರು 1,200 ಅತಿಥಿಗಳಿಗೆ ಭರ್ಜರಿ ಭೋಜನದ ವ್ಯವಸ್ಥೆ ಸೇರಿದಂತೆ ಎಲ್ಲಾ ಶಾಸ್ತ್ರಗಳಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ, ಮದುವೆ ಗಂಡಿನ ವೇಷದಲ್ಲಿ ಬರಬೇಕಿದ್ದ ಕುಲದೀಪ್, ತನ್ನ ತಾಯಿಯೊಂದಿಗೆ ಸಾಮಾನ್ಯ ಉಡುಪಿನಲ್ಲಿಯೇ ಮದುವೆ ಮಂಟಪಕ್ಕೆ ಆಗಮಿಸಿದ್ದಾನೆ. ಮಂಟಪಕ್ಕೆ ಕಾಲಿಟ್ಟ ತಕ್ಷಣವೇ ಆತ ತಾನು ಕೇಳಿದ್ದ 13 ಲಕ್ಷದ ಕಾರು ಎಲ್ಲಿ ಎಂದು ವಿಚಾರಿಸಿದ್ದಾನೆ. ಕಾರು ಇನ್ನೂ ಬಂದಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಎರಡೂ ಕುಟುಂಬಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಗಲಾಟೆಯ ಬೆನ್ನಲ್ಲೇ ವರ ಮತ್ತು ಆತನ ತಾಯಿ ಮದುವೆಯನ್ನು ರದ್ದುಗೊಳಿಸಿ, ಮಂಟಪದಿಂದ ವಾಪಸ್ ತೆರಳಿದ್ದಾರೆ.

ಮದುವೆಗೆ ವರನ ಕಡೆಯಿಂದ ಕೇವಲ 30 ಜನರು ಮಾತ್ರ ಆಗಮಿಸಿದ್ದರು. ವರ ಮದುವೆ ಮುರಿದುಕೊಂಡು ಹೊರನಡೆದ ವಿಷಯ ತಿಳಿಯುತ್ತಿದ್ದಂತೆಯೇ ಮದುವೆಗೆ ಬಂದಿದ್ದ ವಧುವಿನ ಕಡೆಯ ಅನೇಕ ಸಂಬಂಧಿಕರು ತೀವ್ರ ಬೇಸರದಿಂದ ಊಟವನ್ನೂ ಮಾಡದೆ ಮನೆಗೆ ಮರಳಿದ್ದಾರೆ. ಸ್ನಾತಕೋತ್ತರ ಪದವೀಧರೆಯಾಗಿರುವ (MA) ವಧು ಹೀನಾ ಅವರಿಗೆ ಈ ಘಟನೆಯಿಂದ ತೀವ್ರ ಆಘಾತವಾಗಿದೆ. ಇಡೀ ಸಮಾಜದ ಮುಂದೆ ತಮ್ಮ ಕುಟುಂಬದ ಮರ್ಯಾದೆ ಕಳೆದು, ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ ದೆಹಲಿ ಪೊಲೀಸ್ ಪೇದೆ ಕುಲ್ದೀಪ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸುಭಾಷ್ ಕುಮಾರ್ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ (ಏಜೆನ್ಸೀಸ್).