ನನಗೆ ಇಲ್ಲಿ ಸಾಯಲು ಇಷ್ಟವಿಲ್ಲ ಎಂದಿದ್ದ ಮಚ್ಚಾರ್​!...ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಪೈಲಟ್ ಪ್ರಾಣ ಉಳಿಸಲು ಆ ವೈದ್ಯ ಮಾಡಿದ ಹೋರಾಟ ಮೈ ಜುಮ್ ಎನಿಸುತ್ತೆ! | Smit Machchhar

Smit Machchhar: ಇಸ್ರೇಲ್‌ನ ದಂತವೈದ್ಯರಾದ ಶೋಟಾ ಮುಸೇವ್ ಅವರು ಕಳೆದ ವಾರ ಫ್ಲೈದುಬೈ ವಿಮಾನ ಎಫ್‌ಝಡ್1073 (FZ1073) ಹತ್ತಿದಾಗ ಒಬ್ಬ ಸಾಮಾನ್ಯ ಪ್ರಯಾಣಿಕರಾಗಿದ್ದರು. ಆದರೆ ಓಮನಿಯ ಕೋ-ಪೈಲಟ್ ವಿಮಾನವನ್ನು ಅಪಹರಿಸಿ, 170ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಅಪಘಾತಕ್ಕೀಡುಮಾಡುವ ಸ್ಪಷ್ಟ ಪ್ರಯತ್ನದ ನಂತರ ವಿಮಾನವನ್ನು ಸೌದಿ ಅರೇಬಿಯಾಕ್ಕೆ ತಿರುಗಿಸಿದಾಗ ಪರಿಸ್ಥಿತಿ ಸಂಪೂರ್ಣ ಬದಲಾಯಿತು.
ಪೈಲಟ್ ಪ್ರಾಣ ಉಳಿಸಲು ಆ ವೈದ್ಯ ಮಾಡಿದ ಹೋರಾಟ ಮೈ ಜುಮ್ ಎನಿಸುತ್ತೆ!
ಪೈಲಟ್ ಪ್ರಾಣ ಉಳಿಸಲು ಆ ವೈದ್ಯ ಮಾಡಿದ ಹೋರಾಟ ಮೈ ಜುಮ್ ಎನಿಸುತ್ತೆ!
Published on: 

Smit Machchhar: ಇಸ್ರೇಲ್‌ನ ದಂತವೈದ್ಯರಾದ ಶೋಟಾ ಮುಸೇವ್ ಅವರು ಕಳೆದ ವಾರ ಫ್ಲೈದುಬೈ ವಿಮಾನ ಎಫ್‌ಝಡ್1073 (FZ1073) ಹತ್ತಿದಾಗ ಒಬ್ಬ ಸಾಮಾನ್ಯ ಪ್ರಯಾಣಿಕರಾಗಿದ್ದರು. ಆದರೆ ಓಮನಿಯ ಕೋ-ಪೈಲಟ್ ವಿಮಾನವನ್ನು ಅಪಹರಿಸಿ, 170ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಅಪಘಾತಕ್ಕೀಡುಮಾಡುವ ಸ್ಪಷ್ಟ ಪ್ರಯತ್ನದ ನಂತರ ವಿಮಾನವನ್ನು ಸೌದಿ ಅರೇಬಿಯಾಕ್ಕೆ ತಿರುಗಿಸಿದಾಗ ಪರಿಸ್ಥಿತಿ ಸಂಪೂರ್ಣ ಬದಲಾಯಿತು.

ಆ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುಖ್ಯ ಪೈಲಟ್ ಸ್ಮಿತ್ ಮಚ್ಚರ್ ಅವರಿಗೆ ತಕ್ಷಣವೇ ಚಿಕಿತ್ಸೆ ನೀಡುವ ಮೂಲಕ ಶೋಟಾ ಮುಸೇವ್ ಅವರು ತಮ್ಮ ತ್ವರಿತ ಆಲೋಚನೆ ಮತ್ತು ವೃತ್ತಿಪರತೆಯಿಂದ ಹೊಸ ಹೀರೋ ಆಗಿ ಹೊರಹೊಮ್ಮಿದ್ದಾರೆ.

ತೆಲ್ ಅವೀವ್-ಬೌಂಡ್ ವಿಮಾನದ ಕಾಕ್‌ಪಿಟ್ ಒಳಗೆ ಪೈಲಟ್​ ಮೇಲೆ, ಕೋ ಪೈಲಟ್​ ಹಮಾಮ್ ಅಲ್-ಹಮ್ಮಮಿ ಕೊಡಲಿಯಿಂದ ದಾಳಿ ಮಾಡಿದಾಗ ಸ್ಮಿತ್​ ಮಚ್ಚಾರ್​ ಸಂಕಷ್ಟದಲ್ಲಿದ್ದರು, ಈ ವೇಳೆ ವಿಮಾನದಲ್ಲಿದ್ದ ದಂತವೈದ್ಯರ ಅವಿರತ 45 ನಿಮಿಷಗಳ ನಡೆಸಿದ ಪ್ರಯತ್ನದಿಂದ ಪೈಲಟ್​ ಬದುಕುಳಿದರು.

ಇದನ್ನೂ ಓದಿ:ಸ್ಮಿತ್ ಸಾಹಸಕ್ಕೆ ಜಗತ್ತೇ ಹೆಮ್ಮೆಪಡುತ್ತಿದೆ, ಕಾಂಗ್ರೆಸ್ಸಿಗರ ಗಂಟಲು ಕೆಟ್ಟಿದೆಯೇ..?: ವೋಟ್ ಬ್ಯಾಂಕ್ ರಾಜಕಾರಣದ ವಿರುದ್ಧ Karnataka BJP ಕಿಡಿ!

ದಂತವೈದ್ಯ ಮುಸೇವ್ ಹೇಳಿದ್ದಿಷ್ಟು!

ಎಬಿಸಿ ನ್ಯೂಸ್‌ನೊಂದಿಗೆ ಮಾತನಾಡಿದ ವೈದ್ಯ ಶೋಟಾ ಮುಸೇವ್, ಪೈಲಟ್ ಮಚ್ಚಾರ್ ಅವರ ನಾಡಿಮಿಡಿತ ಕುಸಿದಿದ್ದಾಗ ಅವರ ಪ್ರಾಣ ಉಳಿಸಲು ತಾತ್ಕಾಲಿಕ ಒತ್ತಡದ ಡ್ರೆಸ್ಸಿಂಗ್ ಮತ್ತು ಐಸ್ ಪ್ಯಾಕ್‌ಗಳನ್ನು ಬಳಸಿ ಅವರ ಆರೋಗ್ಯ ಸ್ಥಿರವಾಗಿರುವಂತೆ ನೋಡಿಕೊಂಡೆ ಎಂದಿದ್ದಾರೆ. ಕಿರುಚಾಟವನ್ನು ಕೇಳಿ ತಾನು ಕಾಕ್‌ಪಿಟ್‌ನತ್ತ ದೌಡಾಯಿಸಿದ್ದಾಗಿ ತಿಳಿಸಿರುವ ಅವರು, ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದ ಕ್ಯಾಪ್ಟನ್‌ಗೆ ಚಿಕಿತ್ಸೆ ನೀಡುವ ಮೊದಲು ಮೊದಲು ದಾಳಿಕೋರನನ್ನು ನಿಯಂತ್ರಿಸಲು ಸಹಾಯ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ನಾನು ಎಲ್ಲರಿಗೂ ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸುತ್ತಿದ್ದೆ. ಆಗ ನೆಲದ ಮೇಲಿದ್ದ ರಕ್ತಸಿಕ್ತ ಪೈಲಟ್ ಅನ್ನು ನೋಡಿದೆ ಎಂದು ಮುಸೇವ್ ಆ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. ಮಚ್ಚಾರ್​ ತಲೆ ಮತ್ತು ಎಡಗೈಯಿಂದ ಭಾರೀ ರಕ್ತಸ್ರಾವವಾಗುತ್ತಿತ್ತು. ಮೊದಲು ಗಾಯಗಳಿಗೆ ಟಿ-ಶರ್ಟ್‌ಗಳನ್ನು ಬಳಸಿ ರಕ್ತಸ್ರಾವ ನಿಲ್ಲಲಿಲ್ಲ. ತಕ್ಷಣವೇ ಅವರು ವಿಮಾನದ ಸಿಬ್ಬಂದಿಯನ್ನು ಐಸ್ ಪ್ಯಾಕೆಟ್‌ಗಳಿಗಾಗಿ ಕೇಳಿದರು. ಚಿಕಿತ್ಸೆ ನೀಡುವ ವೇಳೆ ಪೈಲಟ್ ನಿದ್ರೆಗೆ ಜಾರದಂತೆ ಮುಸೇವ್ ಸತತವಾಗಿ ಧೈರ್ಯ ತುಂಬುತ್ತಿದ್ದರು. ದಯವಿಟ್ಟು ನಿದ್ರಿಸಬೇಡಿ, ನಮಗೆ ನೀವು ಬೇಕು. ನಿನಗೆ ಎಷ್ಟು ಮಕ್ಕಳಿದ್ದಾರೆ, ಅವರ ಹೆಸರುಗಳೇನು..? ಭಯಪಡಬೇಡಿ, ನೀವು ನಿಮ್ಮ ಕುಟುಂಬದ ಬಳಿಗೆ ಹೋಗುತ್ತಿದ್ದೀರಿ, ನಾವು ಶೀಘ್ರದಲ್ಲೇ ಲ್ಯಾಂಡ್ ಆಗುತ್ತಿದ್ದೇವೆ ಎಂದು ಆತ್ಮವಿಶ್ವಾಸ ತುಂಬುತ್ತಿದ್ದರು.

ಪೈಲಟ್ ಮಚ್ಚಾರ್ ತಮ್ಮ ಹೆಸರು, ವಯಸ್ಸು ಹೇಳಿ, ತಾನು ದುಬೈನಲ್ಲಿ ವಾಸಿಸುತ್ತಿರುವುದಾಗಿ ಮತ್ತು ಭಾರತದಿಂದ ಬಂದಿರುವುದಾಗಿ ತಿಳಿಸಿದರು. ತೀವ್ರ ನೋವಿನಿಂದ ಬಳಲುತ್ತಿದ್ದ ಅವರು, ನನಗೆ ದಯವಿಟ್ಟು ಸಹಾಯ ಮಾಡಿ, ನಾನು ಇಲ್ಲಿ ಸಾಯಲು ಬಯಸುವುದಿಲ್ಲ ಎಂದು ಕಣ್ಣೀರಿಟ್ಟಿರುವುದಾಗಿ ವೈದ್ಯರು ತಿಳಿಸಿದರು.

Also Read
ಇದೊಂದೆ ಕಾರಣಕ್ಕೆ ಅವನನ್ನು ವಾಯುಯಾನದಿಂದ ದೂರವಿಡಲಾಗಿತ್ತು.... ಕೋ-ಪೈಲಟ್ ಬಗ್ಗೆ ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಒಮಾನ್ ಮೂಲಗಳು! | Hamam Al Hammami
ಪೈಲಟ್ ಪ್ರಾಣ ಉಳಿಸಲು ಆ ವೈದ್ಯ ಮಾಡಿದ ಹೋರಾಟ ಮೈ ಜುಮ್ ಎನಿಸುತ್ತೆ!

ಪ್ರಾಣಾಪಾಯ ತಪ್ಪಿಸಲು ಹರಸಾಹಸ

ಪೈಲಟ್ ನಾಡಿಮಿಡಿತ ಅಪಾಯಕಾರಿ ಹಂತಕ್ಕೆ ತಲುಪಿದಾಗ, ಮುಸೇವ್ ಅವರ ಕಾಲುಗಳನ್ನು ಮೇಲಕ್ಕೆತ್ತಿದರು. ತಕ್ಷಣವೇ ನಾಡಿಮಿಡಿತ ಮರಳಿತು. ಪೈಲಟ್ ತುಟಿಗಳು ನೀಲಿ ಬಣ್ಣಕ್ಕೆ ತಿರುಗುವುದನ್ನು ಗಮನಿಸಿ, ವಿಮಾನ ಸಿಬ್ಬಂದಿಗೆ ನಾವು ಬೇಗನೆ ಇಳಿಯಬೇಕು, ಅವರಿಗೆ ಹೆಚ್ಚು ಸಮಯವಿಲ್ಲ ಎಂದು ಮುಸೇವ್​ ಎಚ್ಚರಿಸಿದರು.

ಸಾಮಾಜಿಕ ಜಾಲತಾಣದ ವಿಡಿಯೋಗಳಲ್ಲಿ ಪೈಲಟ್ ಮಚ್ಚಾರ್ ನೋವು ನಿವಾರಕ ಮಾತ್ರೆಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಆದರೆ ಅವರಿಗೆ ಮಾತ್ರೆಗಳನ್ನು ನೀಡಿದರೆ ಮತ್ತೆ ರಕ್ತಸ್ರಾವವಾಗುವ ಅಪಾಯವಿತ್ತು ಎನ್ನುವುದನ್ನು ಅರಿತ ವೈದ್ಯ ಮುಸೇವ್ ಔಷಧಿ ನೀಡುವುದನ್ನು ತಡೆದರು. ಬದಲಿಗೆ ಸ್ವಲ್ಪ ನೀರು ಮಾತ್ರ ಕುಡಿಸಿ, ಅವರ ನಾಡಿಮಿಡಿತ ಮತ್ತು ತುಟಿಗಳ ಬಣ್ಣವನ್ನು ಸತತವಾಗಿ ಗಮನಿಸುತ್ತಾ ಅವರು ಪ್ರಜ್ಞೆ ತಪ್ಪದಂತೆ ನೋಡಿಕೊಂಡರು..

ಸೌದಿ ಅರೇಬಿಯಾದಲ್ಲಿ ಸುರಕ್ಷಿತ ಭೂಸ್ಪರ್ಶ!

ದಾಳಿಯ ಬಳಿಕ ವಿಮಾನವು ಸುಮಾರು 40 ನಿಮಿಷಗಳ ಕಾಲ ಗಾಳಿಯಲ್ಲೇ ಹಾರಾಡಿತು. ಸೌದಿ ಅರೇಬಿಯಾದಲ್ಲಿ ವಿಮಾನ ಇಳಿಯುವವರೆಗೆ ಪ್ರಯಾಣಿಕರ ಸಣ್ಣ ತಂಡವೊಂದು ಬೇರೆ ಯಾವುದೇ ದಾಳಿಕೋರರು ಇದ್ದಾರೆಯೇ ಎಂದು ಎಚ್ಚರಿಕೆಯಿಂದ ಹುಡುಕಾಡಿತು. ಸೌದಿ ಅರೇಬಿಯಾ ತಲುಪಿದ ತಕ್ಷಣ ವೈದ್ಯ ಮುಸೇವ್ ಅವರು ಪೈಲಟ್‌ರನ್ನು ನೆಲದ ಮೇಲಿನ ವೈದ್ಯರಿಗೆ ಒಪ್ಪಿಸಿ, ಅದೃಷ್ಟ, ನನ್ನ ಸ್ನೇಹಿತ. ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿ ಅಲ್ಲಿಂದ ಹೊರಟರು.

ಸ್ಮಿತ್ ನಮ್ಮ ಪ್ರಾಣವನ್ನು ಉಳಿಸಿದರು. ಅವರು ಒಬ್ಬ ಲೀಡರ್​. ನನ್ನ ಕುಟುಂಬ ಮತ್ತು ಎಲ್ಲಾ ಪ್ರಯಾಣಿಕರನ್ನು ಉಳಿಸಲು ಅವರು ಮಾಡಿದ ಎಲ್ಲಾ ಪ್ರಯತ್ನಕ್ಕೂ ನಾನು ಧನ್ಯವಾದಗಳು ಅರ್ಪಿಸುತ್ತೇನೆ. ಇದು ಒಂದು ರೀತಿಯಲ್ಲಿ ಕರ್ಮ. ಅವರು ನಮ್ಮೆಲ್ಲರ ಪ್ರಾಣವನ್ನು ಕಾಪಾಡಿದರು ಮತ್ತು ನಾವು ಅವರ ಪ್ರಾಣವನ್ನು ಉಳಿಸಿದೆವು ಎಂದು ಮುಸೇವ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net