ನನ್ನ ಭಾರತವನ್ನು ಆ ರೀತಿ ಬಿಂಬಿಸಬೇಡಿ... ಅಪಪ್ರಚಾರಗಳ ವಿರುದ್ಧ ಕಿಡಿಕಾರಿದ ಜಪಾನ್​ ಮೂಲದ ಯುವತಿ! Japanese woman

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರತವನ್ನು ಕೇವಲ ಕೊಳಕು ಮತ್ತು ಬಡತನದಿಂದ ಕೂಡಿದ ದೇಶ ಎಂಬಂತೆ ಬಿಂಬಿಸುವ ಹಲವು ವಿಡಿಯೋಗಳು ನನ್ನ ಕಣ್ಣಿಗೆ ಬಿದ್ದಿವೆ ಎಂದು ಹಿಕಾರು ಸನ್ ಬೇಸರ ವ್ಯಕ್ತಪಡಿಸಿದ್ದು, ಇಂತಹ ಫೋಟೋ ಅಥವಾ ವಿಡಿಯೋಗಳಾಗಲಿ ದೇಶದ ಸಂಪೂರ್ಣ ನೈಜತೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Japanese woman
ಜಪಾನ್​ ಮೂಲದ ಯುವತಿ ಹಿಕಾರು ಸನ್
Published on: 

ನವದೆಹಲಿ: ಇತ್ತೀಚೆಗೆ ಭಾರತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೆಗೆಟಿವ್​ ಪ್ರಚಾರಗಳ ವಿರುದ್ಧ ಜಪಾನ್​ ಮೂಲದ ಯುವತಿಯೊಬ್ಬಳು ( Japanese woman ) ಕಿಡಿಕಾರಿದ್ದಾಳೆ. ಕಳೆದ ಎಂಟು ತಿಂಗಳಿಂದ ಮುಂಬೈನಲ್ಲಿ ವಾಸಿಸುತ್ತಿರುವ ಜಪಾನಿನ ಕಂಟೆಂಟ್ ಕ್ರಿಯೇಟರ್ ಹಿಕಾರು ಸನ್, ಭಾರತದ ಬಗ್ಗೆ ತನಗಿರುವ ಪಾಸಿಟಿವ್​ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರತವನ್ನು ಕೇವಲ ಕೊಳಕು ಮತ್ತು ಬಡತನದಿಂದ ಕೂಡಿದ ದೇಶ ಎಂಬಂತೆ ಬಿಂಬಿಸುವ ಹಲವು ವಿಡಿಯೋಗಳು ನನ್ನ ಕಣ್ಣಿಗೆ ಬಿದ್ದಿವೆ ಎಂದು ಹಿಕಾರು ಸನ್ ಬೇಸರ ವ್ಯಕ್ತಪಡಿಸಿದ್ದು, ಇಂತಹ ಫೋಟೋ ಅಥವಾ ವಿಡಿಯೋಗಳಾಗಲಿ ದೇಶದ ಸಂಪೂರ್ಣ ನೈಜತೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Also Read
ಮೈಸೂರು ದಸರಾ ಪ್ರವಾಸಿಗರಿಗೆ ಗುಡ್‌ನ್ಯೂಸ್: KSTDCಯಿಂದ 7 ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ! ಬುಕ್ಕಿಂಗ್​ ಮಾಡೋದು ಹೇಗೆ? Mysore Dasara Tour Package
Japanese woman

ಪ್ರತಿಯೊಂದು ದೇಶಕ್ಕೂ ತನ್ನದೇ ಆದ ವೈಶಿಷ್ಟ್ಯಗಳು ಮತ್ತು ಕೆಲವು ಮಿತಿಗಳಿವೆ. ಕಸದ ಸಮಸ್ಯೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ಜಪಾನ್‌ನ ಕೆಲವು ಭಾಗಗಳಲ್ಲೂ ಸಹ ಇದೇ ರೀತಿಯ ಸಮಸ್ಯೆಗಳನ್ನು ಕಾಣಬಹುದು ಎಂದು ತಮ್ಮ ದೇಶವನ್ನೇ ಉದಾಹರಣೆ ನೀಡುವ ಮೂಲಕ ಹಿಕಾರು ವಿವರಿಸಿದ್ದಾರೆ.

ಮುಂಬೈನಲ್ಲಿ ಕಳೆದ ಎಂಟು ತಿಂಗಳ ವಾಸವು ಭಾರತೀಯ ಸಂಸ್ಕೃತಿ, ಇಲ್ಲಿನ ಜನರ ಸೌಂದರ್ಯ, ವಿವಿಧ ರುಚಿಗಳು ಹಾಗೂ ಜನಸಾಮಾನ್ಯರ ಒಡನಾಟದ ಬಗ್ಗೆ ತನಗೆ ಸಂಪೂರ್ಣ ಹೊಸ ದೃಷ್ಟಿಕೋನವನ್ನು ನೀಡಿದೆ ಎಂದು ಕೊಂಡಾಡಿರುವ ಹಿಕಾರು, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಯನ್ನು ಆಧರಿಸಿ ಯಾವುದೇ ದೇಶವನ್ನು ನಿರ್ಧರಿಸಬೇಡಿ, ನೇರವಾಗಿ ಇಲ್ಲಿಗೆ ಬಂದು ಅನುಭವಿಸಿ ಎಂದು ಕರೆ ನೀಡಿದ್ದಾರೆ.

ಭಾರತದಲ್ಲಿರುವ ಜೀವನಶೈಲಿಯು ತನ್ನ ವೈಯಕ್ತಿಕ ದೃಷ್ಟಿಕೋನವನ್ನೇ ಬದಲಾಯಿಸಿದೆ ಎಂದು ಹಿಕಾರು ಸೆನ್ ಹೇಳಿದ್ದಾರೆ. ಮುರಿದುಹೋದ ವಸ್ತುಗಳನ್ನು ಎಸೆದುಬಿಡುವ ಬದಲು, ಅವುಗಳನ್ನು ರಿಪೇರಿ ಮಾಡಿ ಮತ್ತೆ ಬಳಸುವ ಅದ್ಭುತ ಪ್ರವೃತ್ತಿ ಭಾರತದಲ್ಲಿದೆ ಎಂಬುದನ್ನು ತಾನು ಗಮನಿಸಿರುವುದಾಗಿ ಹಿಕಾರು ಅವರು ತಿಳಿಸಿದ್ದಾರೆ.

Also Read
ಮೈಸೂರು ದಸರಾಕ್ಕೆ 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ: ಇಂಧನ ಸಚಿವ ಕೆ.ಜೆ. ಜಾರ್ಜ್! Mysuru Dasara 2026
Japanese woman

ಕೇವಲ ವಸ್ತುಗಳಷ್ಟೇ ಅಲ್ಲದೆ, ಮುರಿದುಹೋದ ವಸ್ತುಗಳಿಗೆ ಹೇಗೆ ರಿಪೇರಿ ಮೂಲಕ ಹೊಸ ಜೀವ ನೀಡಬಹುದೋ, ಅದೇ ರೀತಿ ಮನುಷ್ಯರು ಕೂಡ ತಮ್ಮ ಜೀವನದಲ್ಲಿ ಬದಲಾವಣೆ ತಂದುಕೊಂಡು ತಮ್ಮನ್ನು ತಾವು ಸುಧಾರಿಸಿಕೊಳ್ಳಬಹುದು ಎಂಬ ಮಹತ್ವದ ಜೀವನ ಪಾಠವನ್ನು ಭಾರತ ತನಗೆ ಕಲಿಸಿದೆ ಎಂದು ಈ ಜಪಾನಿ ಯುವತಿ ಭಾವುಕರಾಗಿ ನುಡಿದಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net