ತಮ್ಮ ಉಪವಾಸವನ್ನು ಯಾಕೆ ಕೊನೆಗೊಳಿಸಿದರು? ಎಂಬ ವಿಮರ್ಶಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ಅವರು, ಸ್ನೇಹಿತರೇ, ನಾನು ಈ ವೀಡಿಯೊವನ್ನು ಸ್ವಲ್ಪ ದುಃಖ, ಸ್ವಲ್ಪ ಆಶ್ಚರ್ಯ ಮತ್ತು ದುಃಖ ಮತ್ತು ಕೋಪದ ಮಿಶ್ರಣದಿಂದ ಮಾಡುತ್ತಿದ್ದೇನೆ. ದೈಹಿಕವಾಗಿ ಹೋರಾಡುವುದು, ಜಗಳವಾಡುವುದು, ಮುಷ್ಕರದೊಳಗೆ ಮತ್ತೊಂದು ಮುಷ್ಕರ ನಡೆಸುವುದು, ನೆಲದ ಮೇಲೆ ಮಲಗುವುದು. ನನ್ನಲ್ಲಿ ಉಳಿದಿದ್ದ ಯಾವುದೇ ಶಕ್ತಿಯನ್ನು ಬಳಸಿ, 20 ಅಥವಾ 22ನೇ ದಿನದಂದು ನಾನು ಬಲವಂತವಾಗಿ ಹೊರಬರಬೇಕಾಯಿತು ಎಂದಿದ್ದಾರೆ.