ಹಿಂದೂ ಭಾವನೆಗಳನ್ನು ಪರಿಗಣಿಸಿದರೆ ಮಾಲಿನ್ಯ ನಿಯಂತ್ರಣ ಕಷ್ಟ: ಸಂಸದ ಆರ್.ಕೆ. ಚೌಧರಿ | RK Chaudhary

RK Chaudhary | ಸಮಾಜವಾದಿ ಪಕ್ಷದ ಸಂಸದ ಆರ್.ಕೆ. ಚೌಧರಿ  ( ಚಿತ್ರಕೃಪೆ-ANI)
RK Chaudhary | ಸಮಾಜವಾದಿ ಪಕ್ಷದ ಸಂಸದ ಆರ್.ಕೆ. ಚೌಧರಿ ( ಚಿತ್ರಕೃಪೆ-ANI)
Published on
RK Chaudhary: ಹಿಂದೂ ಭಾವನೆಗಳನ್ನು ಪರಿಗಣಿಸುವುದಾದರೆ ಮಾಲಿನ್ಯವನ್ನು ನಿಯಂತ್ರಿಸುವುದು ಕಷ್ಟವಾಗಲಿದ್ದು, ಮರಗಳನ್ನು ನೆಡುವುದೊಂದೆ ದೇಶದಲ್ಲಿ ಮಾಲಿನ್ಯ ತಡೆಯಲು ಪರಿಹಾರವಲ್ಲ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಸಮಾಜವಾದಿ ಪಕ್ಷದ ಸಂಸದ ಆರ್.ಕೆ. ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಇಂಡಿಯಾ ಟಿವಿಯೊಂದಿಗೆ ಮಾತನಾಡಿದ ಚೌಧರಿ, ಮಾಲಿನ್ಯ ಎನ್ನುವುದು ದೊಡ್ಡ ಸಮಸ್ಯೆಯಾಗಿದ್ದು, ಹೋಳಿ ಹಬ್ಬದ ದಹನ್ ಸಂದರ್ಭದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಇಂಗಾಲದ ಮಾನಾಕ್ಸೈಡ್ ಬಿಡುಗಡೆಯಾಗುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಾವು ಹಿಂದೂ ಭಾವನೆಗಳನ್ನು ಪರಿಗಣಿಸಿದರೆ, ಮಾಲಿನ್ಯವನ್ನು ನಿಯಂತ್ರಿಸುವುದು ಕಷ್ಟಕರವಾಗಿರುತ್ತದೆ ಎಂದು ಹೇಳಿದರು.

ಚೌಧರಿ ವಿವಾದಾತ್ಮಕ ಹೇಳಿಕೆ

ಗುರುವಾರ ಮಾತನಾಡಿದ್ದ ಚೌಧರಿ, ದೇಹಗಳನ್ನು ಸುಡುವುದರಿಂದ ಇಂಗಾಲದ ಡೈಆಕ್ಸೈಡ್ ಮತ್ತು ಇಂಗಾಲದ ಮಾನಾಕ್ಸೈಡ್‌ನಂತಹ ಅನಿಲಗಳು ಬಿಡುಗಡೆಯಾಗುತ್ತವೆ ಎಂದು ಚೌಧರಿ ಹೇಳಿದರು, ಇದು ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ. ಹೋಳಿಕಾ ದಹನ್ ಹಬ್ಬವನ್ನು ಉಲ್ಲೇಖಿಸಿದ ಅವರು, ವಾಯು ಮಾಲಿನ್ಯದ ವಿಷಯವು ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಪರಿಸರಕ್ಕೆ ಸಂಬಂಧಿಸಿದೆ. ನಮ್ಮ ದೇಶವು ವಾಯು ಮಾಲಿನ್ಯದ ಬಗ್ಗೆ ಗಂಭೀರವಾಗಿಲ್ಲ ಎಂದು ತಿಳಿಸಿದರು.

ಎಸ್‌ಪಿ ವಿರುದ್ಧ ಬಿಜೆಪಿ ವಾಗ್ದಾಳಿ

ಸಂಸದ ಚೌಧರಿ ಹೇಳಿಕೆಯನ್ನು ಬಿಜೆಪಿ ನಾಯಕರು ಟೀಕಿಸಿದ್ದು, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಚೌಧರಿ ತಮ್ಮ ಧರ್ಮವನ್ನು ಬದಲಾಯಿಸಬೇಕೆಂದು ಸಲಹೆ ನೀಡಿದರು. ಬಿಜೆಪಿ ಸಂಸದ ಮನನ್ ಕುಮಾರ್ ಮಿಶ್ರಾ ಕೂಡ ಚೌಧರಿ ವಿರುದ್ಧ ವಾಗ್ದಾಳಿ ನಡೆಸಿದ್ದು, ವಾಹನಗಳಿಂದ ಹೊರಹೊಮ್ಮುವ ಮಾಲಿನ್ಯ, ತ್ಯಾಜ್ಯ ಸುಡುವುದನ್ನು ಅವರು ಗಮನಿಸುತ್ತಿಲ್ಲ, ಈ ಸಮಸ್ಯೆಯ ಬಗ್ಗೆ ಹಿಂದೂಗಳನ್ನು ಮಾತ್ರ ಗುರಿಯಾಗಿಟ್ಟುಕೊಂಡು ಟೀಕಿಸುತ್ತಿದ್ದಾರೆ ಎಂದು ಹೇಳಿದರು.

ದೆಹಲಿ-ಎನ್‌ಸಿಆರ್‌ ವಾಯು ಗುಣಮಟ್ಟ

ದೀಪಾವಳಿಯ ಬಳಿಕ ವಾಯು ಗುಣಮಟ್ಟ ಸೂಚ್ಯಂಕ (AQI) ತುಂಬಾ ಕಳಪೆಯಾಗಿದ್ದು, ಶುಕ್ರವಾರ, ರಾಷ್ಟ್ರ ರಾಜಧಾನಿಯಲ್ಲಿ AQI 382 ಕ್ಕೆ ದಾಖಲಾಗಿದ್ದು, 14 ಮೇಲ್ವಿಚಾರಣಾ ಕೇಂದ್ರಗಳು ತೀವ್ರ ವಾಯು ಗುಣಮಟ್ಟವನ್ನು ವರದಿ ಮಾಡಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀರ್ ಅಪ್ಲಿಕೇಶನ್ ಪ್ರಕಾರ, ವಿವೇಕ್ ವಿಹಾರ್‌ನಲ್ಲಿ ಅತ್ಯಂತ ಕೆಟ್ಟ AQI 434 ದಾಖಲಾಗಿದೆ. ಸರ್ಕಾರವು BS-VI ಹೊರಸೂಸುವಿಕೆ ಮಾನದಂಡಗಳಿಗಿಂತ ಕಡಿಮೆ ಇರುವ ದೆಹಲಿಯೇತರ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ. ಹೆಚ್ಚುವರಿಯಾಗಿ, ಮಾನ್ಯ ಮಾಲಿನ್ಯ ನಿಯಂತ್ರಣ (PUC) ಪ್ರಮಾಣಪತ್ರಗಳಿಲ್ಲದ ವಾಹನಗಳಿಗೆ ಇಂಧನವನ್ನು ಒದಗಿಸದಂತೆ ನಿರ್ದೇಶನ ನೀಡಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net