

ಡಿಸೆಂಬರ್ 31ರೊಳಗೆ ಅಂಚೆ ಇಲಾಖೆಗೆ ಪತ್ರ ಬರೆದು ಕಳುಹಿಸಿ 50 ಸಾವಿರ ಬಹುಮಾನ ಗೆಲ್ಲಿ.
ಭೂಮಿ ತಾಯಿಗೆ ನನ್ನದೊಂದು ಪತ್ರ; ಪ್ರಕೃತಿ ರಕ್ಷಣೆಗೆ ನನ್ನ ಸಂಕಲ್ಪ ವಿಷಯದ ಮೇಲೆ ನಿಮ್ಮ ಪತ್ರ ಇರಲಿ.
18 ವರ್ಷ ಮೇಲ್ಪಟ್ಟವರು, 18 ವರ್ಷದ ಒಳಗಿನವರು ಪತ್ರ ಬರೆಯ ಬಹುದಾಗಿದೆ.
ರೀಲ್ಸ್, ಇನ್ಸ್ಟಾಗ್ರಾಮ್ ಫೇಸ್ ಬುಕ್ ಬಳಕೆ ಹೆಚ್ಚಾಗಿರುವ ಕಾರಣ ಸದ್ಯ ಇಂದಿನ ಕಾಲಘಟ್ಟದಲ್ಲಿ ಬರೆಯುವ ಹವ್ಯಾಸವನ್ನೇ ಕಳೆದುಕೊಂಡಿದ್ದೇವೆ. ಕಾದಂಬರಿ, ಕತೆ ಕವನ ಯಾವುದನ್ನು ಓದಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯು ಪತ್ರ ಬರೆಯುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸ್ಪರ್ಧೆ ಏರ್ಪಡಿಸುತ್ತದೆ. ಅದರಂತೆ ಈ ಬಾರಿಯೂ ಭೂಮಿ ತಾಯಿಗೆ ನನ್ನದೊಂದು ಪತ್ರ; ಪ್ರಕೃತಿ ರಕ್ಷಣೆಗೆ ನನ್ನ ಸಂಕಲ್ಪ ಎಂಬ ವಿಷಯದ ಕುರಿತು ಪತ್ರ ಬರೆಯಬೇಕು.
ಹೌದು, ಭಾರತ ಸರ್ಕಾರದ ಅಂಚೆ ಇಲಾಖೆಯು 2026-27ನೇ ಸಾಲಿನ ರಾಷ್ಟ್ರಮಟ್ಟದ 'ಧಾಯ್ ಅಖರ್' (Dhai Akhar) ಪತ್ರ ಬರೆಯುವ ಅಭಿಯಾನವನ್ನು ಆರಂಭಿಸಿದೆ. ಗೋವಾ ಸೇರಿದಂತೆ ದೇಶಾದ್ಯಂತ ಇರುವ ಎಲ್ಲಾ ನಾಗರಿಕರು ಈ ಪ್ರತಿಷ್ಠಿತ ವಾರ್ಷಿಕ ಹಸ್ತಲಿಖಿತ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
ಅ.31ರೊಳಗೆ ಭೂಮಿ ತಾಯಿಗೆ ನನ್ನದೊಂದು ಪತ್ರ: ಪ್ರಕೃತಿ ರಕ್ಷಣೆಗೆ ನನ್ನ ಪ್ರತಿಜ್ಞೆ ವಿಷಯದ ಮೇಲೆ ಪತ್ರ ಬರೆದು ಅಂಚೆ ಇಲಾಖೆಗೆ ಲೆಟರ್ ಕಳುಹಿಸದರೆ, ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಸ್ಪರ್ಧಿಗಳಿಗೆ ಐವತ್ತು ಸಾವಿರ ನಗದು ಬಹುಮಾನ ಸಿಗಲಿದೆ.
ಭಾರತೀಯ ಅಂಚೆ ಇಲಾಖೆಯ ಈ ಸ್ಪರ್ಧೆಯಲ್ಲಿ 18 ವರ್ಷದಿಂದ ಮೇಲ್ಪಟ್ಟವರು, 18 ವರ್ಷದ ಒಳಗಿನವರು ಭಾಗವಹಿಸಬಹುದು. ಕನ್ನಡ, ಹಿಂದಿ, ತಮಿಳು ಅಥವಾ ಇಂಗ್ಲಿಷ್ ಭಾಷೆಯಲ್ಲಿ ಅಕ್ಟೋಬರ್ 31ರೊಳಗೆ ಪತ್ರ ಬರೆದು ತಲುಪಿಸಬಹುದಾಗಿದೆ.
ಕೈ ಬರಹದಲ್ಲಿ ಈ ಪತ್ರ ಬರೆಯಬೇಕಾಗಿದ್ದು, ಇನ್ಲ್ಯಾಂಡ್ ಲೆಟರ್ ಕಾರ್ಡ್ (ಐಎಲ್ಸಿ) ಬಳಕೆ ಮಾಡುವವರು 500ಕ್ಕೆ ಪದಗಳು ನೀರದಂತೆ ಹಾಗೂ ಎನ್ವಲಪ್ ಬಳಕೆ ಮಾಡುವವರು ಸಾವಿರ ಪದ ಮೀಎದಂತೆ ಎ4 ಶೀಟ್ನಲ್ಲಿ ಬರೆದು ಎನ್ವಲಪ್ನಲ್ಲಿ ಹಾಕಿ ನಿಮ್ಮ ಹತ್ತಿರದ ಪೋಸ್ಟ್ ಆಫೀಸಿಗೆ ಹಾಕಬೇಕು.
ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 50 ಸಾವಿರ ರೂ., ದ್ವಿತೂಯಕ್ಕೆ 25 ಸಾವಿರ ಮತ್ತು ತೃತತೀಯ ಬಹುಮಾನ ಪಡೆಯುವವರಿಗೆ 10 ಸಾವಿರ ರೂ ನೀಡಲಾಗುವುದು. ಅದೇ ರೀತಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರೆ 25 ಸಾವಿರ ರೂ, ದ್ವಿತೀಯ ಪಡೆದುಕೊಂಡರೆ 10 ಸಾವಿರ ಇನ್ನೂ ತೃತೀಯ ಸ್ಥಾನ ಪಡೆದುಕೊಳ್ಳುವವರಿಗೆ 5 ಸಾವಿರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಚೆ ಇಲಾಖೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ (ಏಜೆನ್ಸೀಸ್).