ವಿಮಾನ ಅಪಘಾತದ ಸುದ್ದಿ ಹೊರ ಬೀಳುತ್ತಿದ್ದಂತೆಯೇ ದಾದಾ ಅವರು ಸುರಕ್ಷಿತವಾಗಿ ಊರಿಗೆ ಬರಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸಿದ್ದೆವು. ಯಾವುದಾದರೂ ಪವಾಡ ನಡೆಯಲಿ, ಅದರಿಂದ ಆದರೂ ಅವರು ಬದುಕಿ ಬರಲಿ ಎಂಬುದು ನಮ್ಮ ಆಶಯವಾಗಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಈ ದುರಂತವನ್ನು ಈವರೆಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಜಯ್ ಭಾವುಕರಾದರು.