'ಧುರಂಧರ್', 'ಕಾಂತಾರ'... ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ | DPIFF Awards 2026

 DPIFF Awards 2026
'ಧುರಂಧರ್', 'ಕಾಂತಾರ'... ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ | DPIFF Awards 2026
Published on: 

DPIFF Awards 2026: ಭಾರತೀಯ ಚಿತ್ರೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (DPIFF) ಅವಾರ್ಡ್ಸ್ 2026ರ ವಿಜೇತರ ಸಂಪೂರ್ಣ ಪಟ್ಟಿಯನ್ನು ಇದೀಗ ಅಧಿಕೃತವಾಗಿ ಘೋಷಿಸಲಾಗಿದೆ.

ಈ ಬಾರಿಯ ಪ್ರಶಸ್ತಿಯಲ್ಲಿ ಬಾಲಿವುಡ್​ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸಿನಿಮಾ ಭರ್ಜರಿ ಗೆಲುವು ದಾಖಲಿಸಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇತ್ತ ಕನ್ನಡ ಚಿತ್ರರಂಗದ ಕ್ರಿಯೇಟಿವ್​ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ: ಚಾಪ್ಟರ್ 1' ಮತ್ತು ಹಿಂದಿಯ 'ಸೈಯಾರಾ' ಚಿತ್ರಗಳೂ ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಸಿನಿಪ್ರಿಯರ ಗಮನ ಸೆಳೆದಿವೆ.

ಭಾರತೀಯ ಚಿತ್ರರಂಗದ ಜತೆಗೆ ವೆಬ್ ಸರಣಿಗಳು, ಕಿರುಚಿತ್ರಗಳು, ಸಂಗೀತ ಮತ್ತು ಅಂತಾರಾಷ್ಟ್ರೀಯ ಸಿನಿಮಾ ಕ್ಷೇತ್ರದ ಸಾಧಕರಿಗೂ ಗೌರವ ಸಂದಿದೆ. ಒಟ್ಟು 41 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ತಮಿಳಿನ ಕಮಲ್ ಹಾಸನ್, ಇಳಯರಾಜ, ಹಾಲಿವುಡ್​ನ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಮತ್ತು ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಅವರಿಗೂ ವಿಶೇಷ ಗೌರವ ಲಭಿಸಿದೆ.

ಯಾವ ವಿಭಾಗಗಳಲ್ಲಿ ಯಾರಿಗೆಲ್ಲ ಪ್ರಶಸ್ತಿ?

  • ಅತ್ಯುತ್ತಮ ಸಿನಿಮಾ: ಧುರಂಧರ್ (ಹಿಂದಿ)

  • ಅತ್ಯುತ್ತಮ ನಟ: ರಣವೀರ್ ಸಿಂಗ್ – ಧುರಂಧರ್ (ಹಿಂದಿ)

  • ಅತ್ಯುತ್ತಮ ನಟಿ: ಅನೀತ್ ಪಡ್ಡಾ – ಸೈಯಾರಾ (ಹಿಂದಿ)

  • ಅತ್ಯುತ್ತಮ ನಿರ್ದೇಶಕ: ಆದಿತ್ಯ ಧರ್ – ಧುರಂಧರ್ (ಹಿಂದಿ)

  • ವಿಮರ್ಶಕರ ಅತ್ಯುತ್ತಮ ಸಿನಿಮಾ: ಕಾಂತಾರ: ಚಾಪ್ಟರ್ 1 (ಕನ್ನಡ)

  • ವಿಮರ್ಶಕರ ಅತ್ಯುತ್ತಮ ನಟ: ರಿಷಬ್ ಶೆಟ್ಟಿ – ಕಾಂತಾರ: ಚಾಪ್ಟರ್ 1 (ಕನ್ನಡ)

  • ವಿಮರ್ಶಕರ ಅತ್ಯುತ್ತಮ ನಟಿ: ಯಾಮಿ ಗೌತಮ್ ಧರ್ – ಹಕ್ (ಹಿಂದಿ)

  • ವರ್ಷದ ನಿರ್ಮಾಪಕರು: ಆದಿತ್ಯ ಧರ್, ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧರ್ – ಧುರಂಧರ್ (ಹಿಂದಿ)

  • ಅತ್ಯುತ್ತಮ ಛಾಯಾಗ್ರಹಣ: ಅರವಿಂದ್ ಎಸ್. ಕಶ್ಯಪ್ – ಕಾಂತಾರ: ಚಾಪ್ಟರ್ 1 (ಕನ್ನಡ)

  • ಅತ್ಯುತ್ತಮ ನೃತ್ಯ ಸಂಯೋಜಕ: ಸ್ಯಾಂಡಿ ಮಾಸ್ಟರ್ – ಕೂಲಿ ಚಿತ್ರದ 'ಮೋನಿಕಾ' ಹಾಡು (ತಮಿಳು)

  • ಅತ್ಯುತ್ತಮ ಪೋಷಕ ಪಾತ್ರ- ನಟ: ವಿನೀತ್ ಕುಮಾರ್ ಸಿಂಗ್ – ಛಾವಾ (ಹಿಂದಿ)

  • ಅತ್ಯುತ್ತಮ ನಟ ನೆಗೆಟಿವ್ ರೋಲ್​: ಅಕ್ಷಯ್ ಖನ್ನಾ – ಧುರಂಧರ್ (ಹಿಂದಿ)

  • ಅತ್ಯುತ್ತಮ ಹಾಸ್ಯ ಕಲಾವಿದ- ನಟ: ರಿತೇಶ್ ದೇಶ್‌ಮುಖ್ – ಹೌಸ್‌ಫುಲ್ 5 (ಹಿಂದಿ)

ಸಂಗೀತ ಕ್ಷೇತ್ರದ ಸಾಧಕರಿಗೂ ಗೌರವ

  • ಅತ್ಯುತ್ತಮ ಗೀತರಚನೆಕಾರ: ಇರ್ಷಾದ್ ಕಾಮಿಲ್ – ಸೈಯಾರಾ ಟೈಟಲ್​ ಸಾಂಗ್​ (ಹಿಂದಿ)

  • ವರ್ಷದ ಕಲಾವಿದ: ಕರಣ್ ಔಜ್ಲಾ

  • ವರ್ಷದ ಹಾಡು: ಸೈಯಾರಾ – ಸೈಯಾರಾ (ಹಿಂದಿ)

  • ವರ್ಷದ ಹಾಸ್ಯ ಕಲಾವಿದ: ಸಮಯ್ ರೈನಾ (ಹಿಂದಿ)

  • ಅತ್ಯುತ್ತಮ ಸಂಗೀತ ನಿರ್ದೇಶಕ: ಶಾಶ್ವತ್ ಸಚ್‌ದೇವ್ – ಧುರಂಧರ್ (ಹಿಂದಿ)

  • ಅತ್ಯುತ್ತಮ ಹಿನ್ನೆಲೆ ಗಾಯಕ: ಫಹೀಮ್ ಅಬ್ದುಲ್ಲಾ – ಸೈಯಾರಾ ಟೈಟಲ್​ ಹಾಡು (ಹಿಂದಿ)

Also Read
ತಂದೆ ಬದುಕಿರುವಾಗಲೇ ಮಗನಿಂದ ಶವಪೆಟ್ಟಿಗೆ ರೆಡಿ! ಪುಟ್ಟ ಬಾಲಕನ ಈ ವಿಚಿತ್ರ ಹವ್ಯಾಸದ ಹಿಂದಿದೆ ರೋಚಕ ಸ್ಟೋರಿ | Coffin Box
 DPIFF Awards 2026

ಕಮಲ್ ಹಾಸನ್, ಇಳಯರಾಜಗೆ ವಿಶೇಷ ಗೌರವ

ಚಿತ್ರರಂಗ ಮತ್ತು ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಜಾಗತಿಕ ಚಿತ್ರೋದ್ಯಮದ ಹಲವು ದಿಗ್ಗಜರಿಗೆ ವಿಶೇಷ ಜೀವಮಾನ ಸಾಧನೆ ಗೌರವ ನೀಡಲಾಗಿದೆ.

  • ಸಂಗೀತ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ: ಇಳಯರಾಜ (ತಮಿಳು)

  • ಭಾರತೀಯ ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ: ಕಮಲ್ ಹಾಸನ್ (ತಮಿಳು)

  • ಜಾಗತಿಕ ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ: ಜೇಮ್ಸ್ ಕ್ಯಾಮರೂನ್ (ಇಂಗ್ಲಿಷ್​)

ವೆಬ್ ಸರಣಿ, ಕಿರುತೆರೆ ವಿಭಾಗ

  • ಅತ್ಯುತ್ತಮ ವೆಬ್ ಸರಣಿ: ದಿ ಬ್ಯಾಡ್ಸ್ ಆಫ್ ಬಾಲಿವುಡ್

  • ವೆಬ್ ಸರಣಿಯ ಅತ್ಯುತ್ತಮ ನಿರ್ದೇಶಕ: ಆರ್ಯನ್ ಖಾನ್ – ದಿ ಬ್ಯಾಡ್ಸ್​ ಆಫ್ ಬಾಲಿವುಡ್

  • ವೆಬ್ ಸರಣಿಯ ಅತ್ಯುತ್ತಮ ನಟ: ಜೈದೀಪ್ ಅಹ್ಲಾವತ್ – ಪಾತಾಳ್ ಲೋಕ ಸೀಸನ್ 2

  • ವೆಬ್ ಸರಣಿಯ ಅತ್ಯುತ್ತಮ ನಟಿ: ಶೆಫಾಲಿ ಶಾ – ಡೆಲ್ಲಿ ಕ್ರೈಮ್ ಸೀಸನ್ 3

  • ವೆಬ್ ಸರಣಿಯ ಅತ್ಯುತ್ತಮ ಪೋಷಕ ನಟ: ವಿನಯ್ ಪಾಠಕ್ – ಗ್ರಾಮ್ ಟ್ರೀಟ್​ಮೆಂಟ್​

  • ವೆಬ್ ಸರಣಿಯ ಅತ್ಯುತ್ತಮ ನಟಿ (ನೆಗೆಟಿವ್​): ಹುಮಾ ಖುರೇಷಿ – ಡೆಲ್ಲಿ ಕ್ರೈಮ್ ಸೀಸನ್ 3

  • ವರ್ಷದ ಟೆಲಿವಿಷನ್ ಸರಣಿ: ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ (ಹಿಂದಿ)

  • ಟೆಲಿವಿಷನ್ ಸರಣಿಯ ಅತ್ಯುತ್ತಮ ನಟ: ಅಮರ್ ಉಪಾಧ್ಯಾಯ್ – ಕ್ಯೋಂಕಿ ಸಾಸ್ ಭಿ ಕಭಿ ಬಹು ಥಿ 2 (ಹಿಂದಿ)

  • ಟೆಲಿವಿಷನ್ ಸರಣಿಯ ಅತ್ಯುತ್ತಮ ನಟಿ: ಸ್ಮೃತಿ ಇರಾನಿ – ಕ್ಯೋಂಕಿ ಸಾಸ್ ಭಿ ಕಭಿ ಬಹು ಥಿ 2 (ಹಿಂದಿ)

Also Read
ಜಮೀನು ಮಾರಿ ಬೀದಿಗೆ ಬಂದಿದ್ದ ತಂದೆಗೆ ಕೊನೆಗೂ ಕೈಹಿಡಿದ ಪುತ್ರರು! ಅಪ್ಪನ ಆಸೆ, ಹೆಸರುಳಿಸಿದ ಅಣ್ಣ-ತಮ್ಮನ ಯಶೋಗಾಥೆಗೆ ನೆಟ್ಟಿಗರು ಸಲಾಂ
 DPIFF Awards 2026

ಅಂತಾರಾಷ್ಟ್ರೀಯ ಸಿನಿಮಾ ವಿಭಾಗ

  • ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ: ಅವತಾರ್: ಫೈರ್ ಅಂಡ್ ಆ್ಯಶ್ (ಇಂಗ್ಲಿಷ್​)

  • ಅಂತಾರಾಷ್ಟ್ರೀಯ ಸಿನಿಮಾದ ಅತ್ಯುತ್ತಮ ನಿರ್ದೇಶಕ: ಪಾಲ್ ಥಾಮಸ್ ಆಂಡರ್ಸನ್ – ಒನ್ ಬ್ಯಾಟಲ್ ಆಫ್ಟರ್ ಅನದರ್ (ಇಂಗ್ಲಿಷ್​)

  • ಅಂತಾರಾಷ್ಟ್ರೀಯ ಸಿನಿಮಾದ ಅತ್ಯುತ್ತಮ ನಟ: ಮೈಕೆಲ್ ಬಿ. ಜೋರ್ಡನ್ – ಸಿನರ್ಸ್ (ಇಂಗ್ಲಿಷ್)

  • ಅಂತಾರಾಷ್ಟ್ರೀಯ ಸಿನಿಮಾದ ಅತ್ಯುತ್ತಮ ನಟಿ: ಜೆಸ್ಸಿ ಬಕ್ಲಿ – ಹ್ಯಾಮ್ನೆಟ್ (ಇಂಗ್ಲಿಷ್​)

  • ಅಂತಾರಾಷ್ಟ್ರೀಯ ವರ್ಷದ ಕಲಾವಿದೆ: ಟೇಲರ್ ಸ್ವಿಫ್ಟ್ (ಗಾಯಕಿ, ಹಾಲಿವುಡ್​)